ಯಾದಗಿರಿ: ನಗರದ ಹೊರವಲಯದ ವೀರೇಶ್ವರ ನಗರದ ಸದ್ಗುರು ದಾಸಬಾಳದೀಶ್ವರ ಮಠದಲ್ಲಿ ಶನಿವಾರ ದವನದ ಹುಣ್ಣಿಮೆ ಹಾಗೂ ಹನುಮಾನ್ ಜಯಂತಿಯ ಪ್ರಯುಕ್ತ ವಿಶೇಷ ಪೂಜೆಗಳು ಜರುಗಿದವು.
ದಾಸಬಾಳ ಮಠದ ಆವರಣದಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಕ್ಷೀರಾಭಿಷೇಕ, ಪವಮಾನ ಹೋಮ, ಎಲೆ ಪೂಜೆ, ಲಕ್ಷ ತುಳಸಿ ಪೂಜೆ, ಹನುಮಾನ್ ಚಾಲೀಸಾ ಪಠಣ ಹಾಗೂ ಶಂಕ್ರಮ್ಮ ದೇವಿಗೆ ಅಭಿಷೇಕ, ಉಡಿತುಂಬುವ ಕಾರ್ಯಕ್ರಮ, ಕುಂಕುಮ ಪೂಜೆಗಳನ್ನು ನೆರವೇರಿಸಲಾಯಿತು.
ದಾಸಬಾಳ ಮಠದ ಪೀಠಾಧಿಪತಿ ವೀರೇಶ್ವರ ಸ್ವಾಮೀಜಿ ಮಾತನಾಡಿ, ‘ಮನುಷ್ಯನಾದವನು ಭಗವಂತನ ಸೇವೆ ಆತನ ಭಕ್ತಿ ಭಾವನೆಗಳ ನಡುವೆ ಕೂಡಿರಬೇಕು ಮತ್ತು ದೇವರ ನಿರಂತರ ಸೇವೆ ಮಾಡಬೇಕು’ ಎಂದು ಹೇಳಿದರು.
ಅರುಣೋದಯ ಸ್ವಾಮಿ ಹಿರೇಮಠ ಕೈರವಾಡಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಾಗರತ್ನ ಕುಪ್ಪಿ ದಂಪತಿಯಿಂದ ಪವಮಾನ ಹವನ ನೆರವೇರಿಸಲಾಯಿತು.
ವಿಬಿಆರ್ ಆಸ್ಪತ್ರೆಯ ವತಿಯಿಂದ ಸೇವೆ, ದಾನಿಗಳಾದ ಭಾರತೆಮ್ಮ ಅಮರೇಶ ಅಕ್ಕಿ ತಡಿಬಿಡಿ, ಸುರೇಶ ದಿಗ್ಗಾವಿ, ಶಶಿಕಲಾ ಗೋಗಿ, ಬಸವರಾಜ ಹಿರೇಮಠ ಶಹಾಪುರ, ಬಂಗಾರೆಮ್ಮ ಭೀಮರಾಯ ಉಪ್ಪಾರ, ಪಾರ್ವತಿ ಮಲ್ಲಯ್ಯ ಅಮ್ಮಪಲ್ಲಿ, ಲಕ್ಷ್ಮೀಪತಿ ಕಲ್ಮೇಶ್ವರ ಮೆಡಿಕಲ್, ಭಕ್ತರಾದ ಶಂಕರ್ ಪರಡಿ ಕೋಟಗೇರಾ, ಮಲ್ಲಣ್ಣ ಹೊಸಮನಿ ಶಿರವಾಳ, ಸೋಮಣ್ಣಗೌಡ ಬೆಳಗೇರ, ಬನದೇಶ್ವರ ಶಾಸ್ತ್ರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.