ADVERTISEMENT

ಮತ್ತೆ ಒಡೆದ ಕುಡಿಯುವ ನೀರಿನ ಪೈಪು !

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 17:30 IST
Last Updated 31 ಆಗಸ್ಟ್ 2018, 17:30 IST
ಶಹಾಪುರ ನಗರದ ಮೊಚಿಗಡ್ಡೆ–ಗಂಗಾನಗರ ರಸ್ತೆಯ ಮಧ್ಯದಲ್ಲಿ ಶುಕ್ರವಾರ ಕುಡಿಯುವ ನೀರಿನ ಪೈಪು ಒಡೆದಿದೆ
ಶಹಾಪುರ ನಗರದ ಮೊಚಿಗಡ್ಡೆ–ಗಂಗಾನಗರ ರಸ್ತೆಯ ಮಧ್ಯದಲ್ಲಿ ಶುಕ್ರವಾರ ಕುಡಿಯುವ ನೀರಿನ ಪೈಪು ಒಡೆದಿದೆ   

ಶಹಾಪುರ: ನಗರದ ಮಚಿಗಡ್ಡೆ–ಗಂಗಾನಗರ ರಸ್ತೆಯ ಮಧ್ಯದಲ್ಲಿ ಶುಕ್ರವಾರ ಕುಡಿಯುವ ನೀರು ಸರಬರಾಜಿನ ಪೈಪು ಮತ್ತೆ ಒಡೆದಿದೆ.

ನಗರದ ಫಿಲ್ಟರ್ ಬೆಡ್ ಕೆರೆಯಿಂದ ಹಳೆಪೇಟ ಬಡಾವಣೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕಿಗೆ ಸರಬರಾಜು ಆಗುವ ಮಾರ್ಗದಲ್ಲಿ ಬರುವ ಮೊಚಿಗಡ್ಡೆ–ಗಂಗಾನಗರ ರಸ್ತೆಯ ಮೇಲೆ 20 ದಿನದ ಹಿಂದೆ ಪೈಪು ಒಡೆದಾಗ ದುರಸ್ತಿ ಮಾಡಿದ್ದು. ಅಗೆದ ಗುಂಡಿಯನ್ನು ಮುಚ್ಚದೆ ಬಿಟ್ಟಿದ್ದರು. ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗಿತ್ತು ಎನ್ನುತ್ತಾರೆ ನಗರದ ನಿವಾಸಿ ಮಾನಪ್ಪ ಹಡಪದ.

‘ಕೊನೆಗೆ ಎಚ್ಚೆತ್ತುಕೊಂಡ ನಗರಸಭೆ ಸಿಬ್ಬಂದಿ ಬುಧವಾರ ಗುಂಡಿಯನ್ನು ಮುಚ್ಚಿದರು. ಈಗ ಅದರ ಪಕ್ಕದ ತುಸು ದೂರದಲ್ಲಿ ಮತ್ತೆ ಪೈಪು ಒಡೆದು ಹೋಗಿದೆ. ನೀರು ಸರಬರಾಜಿಗೆ ಅಡಚಣೆಯಾಗಿದೆ. ಸಾಕಷ್ಟು ನೀರಿನ ಲಭ್ಯತೆ ಇದ್ದರು ಪದೇ ಪದೇ ಪೈಪು ಒಡೆಯುವುದರಿಂದ ನಗರದಲ್ಲಿ ನೀರು ಸರಬರಾಜು ಮಾಡುವುದು ಕೃತಕ ಅಭಾವ ಸೃಷ್ಟಿಯಾಗಿದೆ’ ಎಂದು ನಗರದ ನಿವಾಸಿಗಳು ಆರೋಪಿಸಿದರು.

ADVERTISEMENT

‘ನಗರಸಭೆ ಸಿಬ್ಬಂದಿ ಎಚ್ಚೆತ್ತುಕೊಂಡು ಹಳೆಯ ಪೈಪುಗಳನ್ನು ತೆಗೆದು, ನಗರೋತ್ಥಾನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ₹10ಕೋಟಿ ಅನುದಾನವನ್ನು ಬಳಸಿ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ನೀಡಬೇಕು’ ಎಂದು ನಗರದ ನಿವಾಸಿ ಬಸವರಾಜ ಕುಂಬಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.