ADVERTISEMENT

‘ಗಣಿತ ಲೋಕಕ್ಕೆ ರಾಮಾನುಜಂ ಕೊಡುಗೆ ಅನನ್ಯ’

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 16:02 IST
Last Updated 25 ಡಿಸೆಂಬರ್ 2024, 16:02 IST
ಸುರಪುರದ ಪ್ರಭು ಮತ್ತು ಬೋಹರಾ ಪದವಿ ಕಾಲೇಜಿನಲ್ಲಿ ಬುಧವಾರ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜಂ ಜನ್ಮದಿನ ಆಚರಿಸಲಾಯಿತು
ಸುರಪುರದ ಪ್ರಭು ಮತ್ತು ಬೋಹರಾ ಪದವಿ ಕಾಲೇಜಿನಲ್ಲಿ ಬುಧವಾರ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜಂ ಜನ್ಮದಿನ ಆಚರಿಸಲಾಯಿತು   

ಸುರಪುರ: ‘ಗಣಿತಶಾಸ್ತ್ರಕ್ಕೆ ಶ್ರೀನಿವಾಸ ರಾಮಾನುಜಂ ಅವರ ಕೊಡುಗೆ ಅನನ್ಯ. ಅವರು ಭಾರತೀಯ ಎಂಬುದು ನಮಗೆ ಹೆಮ್ಮೆ’ ಎಂದು ಪ್ರಭು ಮತ್ತು ಬೋಹರಾ ಪದವಿ ಕಾಲೇಜಿನ ಪ್ರಾಚಾರ್ಯ ವಾರಿಸ್ ಕುಂಡಾಲೆ ಹೇಳಿದರು.

ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀನಿವಾಸ ರಾಮಾನುಜಂ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಅವರ ಪೂರ್ಣ ಹೆಸರು ಶ್ರೀನಿವಾಸ ರಾಮಾನುಜಂ ಅಯ್ಯಂಗಾರ. ತಮಿಳುನಾಡಿನ ಈರೋಡಿನಲ್ಲಿ 1885 ಡಿಸೆಂಬರ್ ತಿಂಗಳು ಜನಿಸಿದರು. ಅವರ ಜನ್ಮ ದಿನವನ್ನು ಹಬ್ಬವನ್ನು ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ’ ಎಂದರು.

ADVERTISEMENT

ಉಪನ್ಯಾಸಕರಾದ ಶರಣಗೌಡ ಪಾಟೀಲ, ಸೋಮಶೇಖರ ಮಾತನಾಡಿದರು. ವಿದ್ಯಾರ್ಥಿಗಳಾದ ಶ್ರೇಯಾ ಅಕ್ಕಿ, ಶಾಂತಾ ಅವರು ರಾಮಾನುಜಂ ಅವರ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು.

ಮಲ್ಹಾರರಾವ ಕುಲಕರ್ಣಿ, ಬಾಲರಾಜ ಸರಾಫ್, ರಮೇಶ ಶಹಾಪುರಕರ್, ವಿಜಯಕುಮಾರ ಬಣಗಾರ, ಸುನೀತಾ ಹಳ್ಳದ, ರಂಜಿತಾ, ಜ್ಯೋತಿ ಮಾಮಡಿ ಭಾಗವಹಿಸಿದ್ದರು.

ಅಮರೇಶ ಕೆ.ಎಂ. ನಿರೂಪಿಸಿದರು. ಸುರೇಶ ಮಾಮಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.