ADVERTISEMENT

ರಾಜ್ಯಮಟ್ಟದ ಸಂಗಮ ಸಿರಿ ಪ್ರಶಸ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 8:35 IST
Last Updated 12 ಜನವರಿ 2026, 8:35 IST
ಡಾ.ರಾಹುಲ್.ಎಸ್. ನಾಯ್ಕೋಡಿ
ಡಾ.ರಾಹುಲ್.ಎಸ್. ನಾಯ್ಕೋಡಿ   

ವಡಗೇರಾ: ತಾಲ್ಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಜಾತ್ರಾ ಮಹೋತ್ಸವ ಸಮಿತಿ ರಾಜ್ಯಮಟ್ಟದ ಸಂಗಮ ಸಿರಿ ಪ್ರಶಸ್ತಿ ನೀಡುತ್ತದೆ.

ಧಾರ್ಮಿಕ ಕ್ಷೇತ್ರದಲ್ಲಿ (ವೇದಮೂರ್ತಿ ವೀರಭದ್ರಯ್ಯ ಸ್ವಾಮಿ ದೇವಸೂಗುರ) ಕೃಷಿ ಕ್ಷೇತ್ರದಲ್ಲಿ (ನಾಗರತ್ನ.ವಿ.ಪಾಟೀಲ್ ಯಕ್ಸಿಂತಿ) ವೈದ್ಯಕೀಯ ಕ್ಷೇತ್ರದಲ್ಲಿ (ಡಾ.ರಾಹುಲ್.ಎಸ್. ನಾಯ್ಕೋಡಿ) ಸಾಹಿತ್ಯ ಕ್ಷೇತ್ರದಲ್ಲಿ (ಶ್ರೀ ಮಲ್ಲಿಕಾರ್ಜುನ್ ಸ್ವಾಮಿ ಅರಿಶಿಣಗಿ) ಸಾಮಾಜಿಕ ಕ್ಷೇತ್ರದಲ್ಲಿ (ಸೂಗಪ್ಪಗೌಡ ಪೊ.ಪಾ. ಅಗ್ನಿಹಾಳ) ಆಯ್ಕೆಯಾಗಿದ್ದಾರೆ.

‘ಜ.13ರಂದು ಕೃಷ್ಣವೇಣಿ ಭೀಮಾ ಸಂಗಮದಲ್ಲಿ ಜರುಗುವ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಸಂಗಮದ ಕರುಣೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಮಠಾಧೀಶರು, ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಾಧಕರಿಗೆ ಸಂಗಮ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಸಂಗಮೇಶ್ವರ ದೇವಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.