ADVERTISEMENT

ಸುರಪುರ: ಮಳೆಗೆ ತೊಯ್ದ ಭತ್ತದ ರಾಶಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 6:17 IST
Last Updated 24 ಏಪ್ರಿಲ್ 2021, 6:17 IST
ಸುರಪುರ ತಾಲ್ಲೂಕಿನ ಆಲ್ದಾಳ ಗ್ರಾಮದಲ್ಲಿ ಮಳೆಗೆ ಭತ್ತದ ರಾಶಿ ತೊಯ್ದುರಿವುದು
ಸುರಪುರ ತಾಲ್ಲೂಕಿನ ಆಲ್ದಾಳ ಗ್ರಾಮದಲ್ಲಿ ಮಳೆಗೆ ಭತ್ತದ ರಾಶಿ ತೊಯ್ದುರಿವುದು   

ಸುರಪುರ: ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಬಿರುಗಾಳಿ, ಗುಡುಗು-ಮಿಂಚು ಸಹಿತ ಸುರಿದ ಮಳೆ ಸುರಿದಿದ್ದರಿಂದ ಗದ್ದೆ ಮತ್ತು ರಸ್ತೆ ಬದಿಯಲ್ಲಿ ಹಾಕಿದ್ದ ಭತ್ತ ಮಳೆಗೆ ತೊಯ್ದು ತೊಪ್ಪೆಯಾಗಿರುವುದು ರೈತರನ್ನು ಆತಂಕಕ್ಕೆ ದೂಡಿದೆ.

ಗುರುವಾರ ಸಂಜೆಯಿಂದಲೇ ಗಾಳಿ ಬೀಸುತ್ತಿದ್ದು, ಮಿಂಚು ಹೆಚ್ಚಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ತಡರಾತ್ರಿ 2.15 ಸುರಿದ ಮಳೆಯಿಂದಾಗಿ ಬೇಸಿಗೆ ಬಿಸಿಲಿಗೆ ಕಾದು ಕಬ್ಬಿಣದಂತಾಗಿದ್ದ ಭೂಮಿ ತಂಪಾಯಿತು.

ಈಗಾಗಲೇ ಭತ್ತದ ಕಟಾವು ಮುಗಿದಿರುವವರು ಭತ್ತದ ರಾಶಿಯನ್ನು ಹೊಲ ಮತ್ತು ರಸ್ತೆಯ ಬದಿಗಳಲ್ಲಿ ಮಾಡಿದ್ದರು. ರಾತ್ರಿ ಸುರಿದ ಮಳೆಯಿಂದಾಗಿ ತಾಡಪಾಲು ಹೊದಿಕೆಯಾಗದ ಭತ್ತವೂ ನೆನೆದಿದೆ. ತಾಡಪಾಲು ಹೊದಿಕೆ ಮಾಡಿದ್ದವರ ಭತ್ತ ಸುರಕ್ಷಿತವಾಗಿದೆ. ದೇವಾಪುರ, ಆಲ್ದಾಳ, ಹಂದ್ರಾಳ, ನಾಗರಾಳ, ವಾಗಣಗೇರಿ, ಬಾಚಿಮಟ್ಟಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿರುವ ಭತ್ತದ ರಾಶಿಗಳು ನನೆದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.