ADVERTISEMENT

ಲಕ್ಷ್ಮೀ ದೇವಸ್ಥಾನದಲ್ಲಿ ಸಹಸ್ರ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:50 IST
Last Updated 26 ಅಕ್ಟೋಬರ್ 2025, 7:50 IST
ಸುರಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಹಸ್ರ ದೀಪೋತ್ಸವ ಅದ್ಧೂರಿಯಾಗಿ ಜರುಗಿತು
ಸುರಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಹಸ್ರ ದೀಪೋತ್ಸವ ಅದ್ಧೂರಿಯಾಗಿ ಜರುಗಿತು   

ಸುರಪುರ: ಇಲ್ಲಿಯ ತಹಶೀಲ್ದಾರ್ ಕಚೇರಿ ರಸ್ತೆಯ ನಡಗೇರಿ ಓಣಿಯ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಗುರುವಾರ ಸಹಸ್ರ ದೀಪೋತ್ಸವ ಸಡಗರ ಸಂಭ್ರಮದೊಂದಿಗೆ ನೆರವೇರಿತು.

ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಮಹಾಲಕ್ಷ್ಮೀ ದೇವಿಯ ದರ್ಶನ ಭಾಗ್ಯ ಪಡೆದು ನಂತರ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.

ಹಣತೆಯಲ್ಲಿ ಭಕ್ತರು ಹಚ್ಚಿದ ದೀಪದಿಂದ ದೇವಸ್ಥಾನ ಬೆಳಕಿನಿಂದ ಝಗಮಗಿಸಿ ಕಂಗೊಳಿಸಿತು. ಭಕ್ತರು ಉತ್ಸಾಹದಿಂದ ದೀಪೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.