ಹಲ್ಲೆ
(ಪ್ರಾತಿನಿಧಿಕ ಚಿತ್ರ)
ಸುರಪುರ (ಯಾದಗಿರಿ ಜಿಲ್ಲೆ): ದಲಿತ ಯುವ ವಕೀಲ ದುರ್ಗಪ್ಪ ಬಸಪ್ಪ ಹೊಸಮನಿ ಎಂಬುವವರು ಮೇಲೆ ಗ್ರಾಮದ ಸವರ್ಣೀಯರು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಘಟನೆ ತಡವಾಗಿ ತಿಳಿದು ಬಂದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ದುರ್ಗಪ್ಪ, ‘ಜೂನ್ 17 ರಂದು ಸಂಜೆ ನಾನು ಬೆಂಗಳೂರಿನಿಂದ ನಮ್ಮ ಊರು ನಾಗರಾಳಕ್ಕೆ ಬಂದಿದ್ದೆ. ನಾಗರಾಳ ಕ್ರಾಸ್‌ನಲ್ಲಿದ್ದ ಕುರುಬ ಜಾತಿಗೆ ಸೇರಿದ ಅರ್ಜುನ ದೇವಡಿ ಮತ್ತು ಮಲ್ಲಪ್ಪ ಹುಲಕಲ್ ಎಂಬುವವರು ಪಾನಮತ್ತರಾಗಿ ಏಕಾಏಕಿ ನನ್ನನ್ನು ಜಾತಿಯಿಂದ ನಿಂದನೆ ಮಾಡತೊಡಗಿದರು. ನಾನು ಏಕೆ ಎಂದು ಕೇಳಿದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.
ಈ ಕುರಿತು ಜೂನ್ 18 ರಂದು ಸುರಪುರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.