ಸುರಪುರ (ಯಾದಗಿರಿ ಜಿಲ್ಲೆ): ಕೌಟುಂಬಿಕ ವಿಚಾರಕ್ಕೆ ಭಾನುವಾರ ತಡರಾತ್ರಿ ಪತ್ನಿಯನ್ನು ಕೊಡಲಿಯಿಂದ ಕೊಲೆ ಮಾಡಿದ ಪತಿಯು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ನಗರದ ತವರು ಮನೆಯಲ್ಲಿದ್ದ ಕಕ್ಕೇರಾ ಸಮೀಪದ ಹಿರಿಹಳ್ಳ ನಿವಾಸಿ ಮರೆಮ್ಮ ಸಂಗಪ್ಪ (30) ಕೊಲೆಯಾದವರು. ಹಿರಿಹಳ್ಳದ ಸಂಗಪ್ಪ ಬಸಣ್ಣ ಕೊಲೆ ಮಾಡಿ ಸುರಪುರ ಠಾಣೆಯ ಪೊಲೀಸರಿಗೆ ಶರಣಾದವನು.
12 ವರ್ಷಗಳ ಹಿಂದೆ ಸಂಗಪ್ಪ–ಮರೆಮ್ಮ ಅವರ ಮದುವೆ ಆಗಿತ್ತು. ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ವರ್ಷದ ಹಿಂದೆಯೇ ಮರೆಮ್ಮ ತವರು ಮನೆಗೆ ಬಂದು ಉಳಿದುಕೊಂಡಿದ್ದು, ಸಂಗಪ್ಪ ಆಗಾಗ ಬಂದು ಹೋಗುತ್ತಿದ್ದ.
ದಸರಾ ಹಬ್ಬಕ್ಕೆ ಬಂದಿದ್ದ ಸಂಗಪ್ಪ ಭಾನುವಾರ ತಡರಾತ್ರಿ ಪತ್ನಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದ. ಮರೆಮ್ಮ ಅವರ ಸಹೋದರರ ಕೋಣೆಗಳಿಗೆ ಹೊರಗಿನಿಂದ ಕೊಂಡಿ ಹಾಕಿ, ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಆ ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.