ADVERTISEMENT

ಸುರಪುರ | ಇಂದಿರಾ ಕ್ಯಾಂಟೀನ್‍ಗೆ ಶಾಸಕ ಅಡಿಗಲ್ಲು

ತಿಂಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭ, ಶಾಸಕ ರಾಜಾ ವೇಣುಗೋಪಾಲ ನಾಯಕ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:14 IST
Last Updated 11 ಅಕ್ಟೋಬರ್ 2025, 6:14 IST
ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಇಂದಿರಾ ಕ್ಯಾಂಟೀನ್‍ಗೆ ಭೂಮಿ ಪೂಜೆ ನೆರವೇರಿಸಿದರು
ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಇಂದಿರಾ ಕ್ಯಾಂಟೀನ್‍ಗೆ ಭೂಮಿ ಪೂಜೆ ನೆರವೇರಿಸಿದರು   

ಸುರಪುರ: ನಗರದ ಜನತೆಯ ಬಹುದಿನಗಳ ಕನಸು ಶೀಘ್ರವೇ ನನಸಾಗಲಿದೆ. ₹ 87 ಲಕ್ಷ ರೂಪಾಯಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಲಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿಗೆ ಹೋಗುವ ಮಾರ್ಗದಲ್ಲಿ ಬಿಸಿಎಂ ವಸತಿ ನಿಲಯದ ಎದುರು ಶುಕ್ರವಾರ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಕಾಮಗಾರಿ ಗುಣಮಟ್ಟದೊಂದಿಗೆ ಆದಷ್ಟು ಬೇಗನೆ ಮಾಡಿ ಮುಗಿಸುವಂತೆ ಸೂಚಿಸಲಾಗಿದೆ. ತಿಂಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಗೊಳ್ಳಲಿದೆ’ ಎಂದರು.

ADVERTISEMENT

ಈಗಾಗಲೇ ಕೆಂಭಾವಿ, ಹುಣಸಗಿ, ಕಕ್ಕೇರಾಗಳಲ್ಲಿ ಇಂದಿರಾ ಕ್ಯಾಂಟೀನ್ ನಡೆಯುತ್ತಿವೆ. ಸುರಪುರದಲ್ಲಿ ನಿವೇಶನದ ಕೊರತೆಯಿಂದ ಇಂದಿರಾ ಕ್ಯಾಂಟೀನ್ ತೆರೆಯುವುದು ವಿಳಂಬವಾಯಿತು. ಕೊನೆಗೂ ನಿವೇಶನ ದೊರೆತರು ಕೂಡ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾದವು. ಈಗ ಎಲ್ಲವನ್ನು ಸರಿಪಡಿಸಲಾಗಿದೆ. ತಿಂಗಳಲ್ಲಿಯೇ ಉದ್ಘಾಟನೆ ನಡೆಯಲಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ, ನಗರಸಭೆ ಅಧ್ಯಕ್ಷ ಹೀನಾ ಕೌಸರ್ ಶಕೀಲ್ ಅಹ್ಮದ್, ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ), ಪೌರಾಯುಕ್ತ ಬಸವರಾಜ ಟಣಕೇದಾರ್, ನಗರಸಭೆ ಸದಸ್ಯರಾದ ಶರೀಫ್ ಅಹ್ಮದ್, ಜುಮ್ಮಣ್ಣ ಕೆಂಗೂರಿ, ಸುವರ್ಣಾ ಸಿದ್ರಾಮ ಎಲಿಗಾರ, ಲಕ್ಷ್ಮೀ ಮಲ್ಲು ಬಿಲ್ಲವ್, ನಾಸೀರ್ ಹುಸೇನ್ ಕುಂಡಾಲೆ, ಕಮರುದ್ದೀನ್ ನಾರಾಯಣಪೇಠ, ಮೊಹ್ಮದ್ ಗೌಸ್ ಕಿಣ್ಣಿ, ಶಿವಕುಮಾರ ಕಟ್ಟಿಮನಿ, ಮಹಿಬೂಬ್, ಸೋಮರಾಯ ಶಖಾಪೂರ, ಪ್ರಕಾಶ ಅಲಬನೂರ, ಸಾಯಬಣ್ಣ ಮಡಿವಾಳರ.
ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ಅಬ್ದುಲ್ ಅಲೀಂ ಗೋಗಿ, ಗಾಳೆಪ್ಪ ಹಾದಿಮನಿ, ಶಕೀಲ್ ಅಹ್ಮದ್, ಮಲ್ಕಪ್ಪಗೌಡ ಹಸನಾಪುರ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಲಿಯಾಖತ್, ಎಇಇ ಶಾಂತಪ್ಪ ಹೊಸೂರು, ಜೆಇ ಮಹೇಶ ಮಾಳಗಿ, ವಿಶ್ವನಾಥ ಯಾದವ, ಕಂದಾಯ ಅಧಿಕಾರಿ ವೆಂಕಟೇಶ ಕಲ್ಬುರ್ಗಿ, ಕಂದಾಯ ನಿರೀಕ್ಷಕ ಮೊಹ್ಮದ್ ಸಲೀಂ, ಲೆಕ್ಕಾಧಿಕಾರಿ ರವಿ ರಾಠೋಡ, ಹಿರಿಯ ಆರೋಗ್ಯ ನಿರೀಕ್ಷಕ ಹಣಮಂತ ಯಾದವ, ಗುರುಸ್ವಾಮಿ ಹಿರೇಮಠ, ಮೈನುದ್ದೀನ್, ಸಮುದಾಯ ಸಂಘಟಕ ದುರ್ಗಪ್ಪ ನಾಯಕ ಸೇರಿ ಇತರರಿದ್ದರು.

ಹಸಿದವನ ಅನ್ನಭಾಗ್ಯ ಇಂದಿರಾ ಕ್ಯಾಂಟೀನ್ ಬಡವರ ಬಂಧು. ಇದು ಹಸಿದವನ ಅನ್ನಭಾಗ್ಯ. ಕಚೇರಿ ಕೆಲಸಗಳಿಗೆ ದೂರದ ಊರಿನಿಂದ ಬಂದವರಿಗೆ ಕಡಿಮೆ ದರದಲ್ಲಿ ಉತ್ತಮ ಉಪಹಾರ ಊಟ ದೊರೆಯುತ್ತದೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು. ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರ ಕಷ್ಟಗಳಲ್ಲಿ ಸಹಕಾರಿಯಾಗಿ ಸೇವೆ ಸಲ್ಲಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.