ADVERTISEMENT

‘ಒಂದಾಗಿ ಕೆಲಸ ಮಾಡೋಣ’

ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:33 IST
Last Updated 29 ಮೇ 2025, 14:33 IST
ಸುರಪುರದ ಬಸವೇಶ್ವರ ಪತ್ತಿನ ಸಂಘದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಅವರನ್ನು ಗುರುವಾರ ಸನ್ಮಾನಿಸಲಾಯಿತು
ಸುರಪುರದ ಬಸವೇಶ್ವರ ಪತ್ತಿನ ಸಂಘದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಅವರನ್ನು ಗುರುವಾರ ಸನ್ಮಾನಿಸಲಾಯಿತು   

ಸುರಪುರ: ‘ವೀರಶೈವ ಲಿಂಗಾಯತ ಸಮಾಜದ ಏಳಿಗೆಗಾಗಿ ಎಲ್ಲರು ಒಂದಾಗಿ ಕೆಲಸ ಮಾಡೋಣ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಸಮಿತಿ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಕರೆ ನೀಡಿದರು.

ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈಗಾಗಲೇ ರಾಜ್ಯದಾದ್ಯಂತ ಶಂಕರ ಬಿದರಿ ಅವರ ನೇತೃತ್ವದಲ್ಲಿ ಸಂಘಟನೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ತಾಲ್ಲೂಕಿನಲ್ಲಿ ನೂತನವಾಗಿ ನೇಮಕಗೊಂಡ ಎಲ್ಲ ಪದಾಧಿಕಾರಿಗಳು ಪ್ರಕಾಶ ಅಂಗಡಿ ಅವರ ನೇತೃತ್ವದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ತಾಲ್ಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ, ‘ಮಹಾಸಭೆಯಾಗಲಿ, ನಮ್ಮ ಸಮಿತಿಯಾಗಲಿ ಎರಡೂ ಒಂದಾಗಿ ತಾಲ್ಲೂಕಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತವೆ. ಸಮಿತಿಯು ಮಹಾಸಭಾದ ಎಲ್ಲ ಕಾರ್ಯಗಳಿಗೆ ನೆರವು ನೀಡಲಿದೆ’ ಎಂದರು.

‘ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಸಭಾ ಸುರಪುರದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಅಥವಾ ಬೇರೆ ಯಾವುದೇ ಕಟ್ಟಡ ನಿರ್ಮಾಣಕ್ಕೆ 30 ಗುಂಟೆ ಜಾಗ ನೀಡಲು ಸಮಿತಿ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಸಮಿತಿ ಅಧ್ಯಕ್ಷ ಚನ್ನಪ್ಪ ಮೋಸಂಬಿ ಅವರನ್ನು ಹಾಗೂ ಮಹಾಸಭಾಕ್ಕೆ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಹಿರಿಯ ಮುಖಂಡ ಮಲ್ಲಣ ಸಾಹುಕಾರ ನರಸಿಂಗಪೇಟ ಉಪಸ್ಥಿತರಿದ್ದರು. ಮಹಾಸಭಾ ತಾಲ್ಲೂಕು ಸಮಿತಿ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖಂಡರಾದ ಶಿವಶರಣಪ್ಪ ಹೆಡಗಿನಾಳ, ಚನ್ನಯ್ಯಸ್ವಾಮಿ ಜೇಟಗಿಮಠ, ಶಿವು ಸಾಹುಕಾರ ಸೂಗೂರ, ಚೆನ್ನಪ್ಪಗೌಡ ಜಕ್ಕನಗೌಡ್ರ, ಸಿದ್ದಣ್ಣ ಮುಧೋಳ, ನೀಲಾಂಬಿಕಾ ಪಾಟೀಲ, ಸುನೀತಾ ಪಾಟೀಲ, ರವಿ ಸೊನ್ನದ್, ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ, ರವಿಗೌಡ ಹೆಮನೂರ, ಪ್ರಕಾಶ ಬಣಗಾರ, ಶರಣಬಸವ ಹೂಗಾರ, ಆನಂದ ಮಡ್ಡಿ, ವೀರಭಧ್ರಪ್ಪ ಸತ್ಯಂಪೇಟ, ಅಶೋಕ ಶೆಳ್ಳಗಿ, ಮಡಿವಾಳಪ್ಪ ಪಾಟೀಲ, ಮಲ್ಲಿಕಾರ್ಜುನ ಮುಧೋಳ, ಮಲ್ಲು ಬಾದ್ಯಾಪುರ, ಬಸನಗೌಡ ಸೂಗೂರ, ಅಭಿಷೇಕ ಹೊನಕಲ್ ಅನೇಕರು ಭಾಗವಹಿಸಿದ್ದರು.

ಪದಾಧಿಕಾರಿಗಳು: ಶಿಲ್ಪಾ ಅವಂಟಿ (ಮಹಿಳಾ ಘಟಕದ ಅಧ್ಯಕ್ಷೆ), ಕೃಷ್ಣಾರೆಡ್ಡಿ ಹೊಸಮನಿ ಮುದನೂರ (ಯುವ ಘಟಕದ ಅಧ್ಯಕ್ಷ), ವೀರೇಶ ಪಂಚಾಂಗಮಠ (ನಗರ ಘಟಕದ ಅಧ್ಯಕ್ಷ), ಶರಭಣ್ಣ ಹೊಸಮನಿ (ನಗರ ಯುವ ಘಟಕ ಅಧ್ಯಕ್ಷ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.