ADVERTISEMENT

ಗ್ರಂಥಾಲಯಕ್ಕೆ ಖಾರೀಜ್ ಭೂಮಿ ಮಂಜೂರು ಮಾಡಲು ಆಗ್ರಹ: ದಲಿತ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:38 IST
Last Updated 26 ಜುಲೈ 2025, 7:38 IST
ಸುರಪುರದಲ್ಲಿ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದವರು ಶುಕ್ರವಾರ ಪ್ರತಿಭಟನೆ ನಡೆಸಿದರು 
ಸುರಪುರದಲ್ಲಿ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದವರು ಶುಕ್ರವಾರ ಪ್ರತಿಭಟನೆ ನಡೆಸಿದರು    

ಸುರಪುರ: ನಗರದ ಸರ್ಕಾರಿ ಖಾರೀಜ್ ಭೂಮಿ ಶೀಘ್ರವೇ ಸರ್ವೆ ಮಾಡಿಸಿ ಒತ್ತುವರಿಯಾಗಿರುವ ಜಾಗ ಗುರುತಿಸಿ ಡಾ.ಅಂಬೇಡ್ಕರ್ ಗ್ರಂಥಾಲಯಕ್ಕೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದವರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಒಕ್ಕೂಟದ ಮುಖಂಡರು ಮಾತನಾಡಿ, ‘ನಗರದ ಸರ್ವೆ ನಂ 7/1ರಲ್ಲಿ ಸರ್ಕಾರಿ ಖಾರೀಜ್ ಖಾತಾ ಭೂಮಿಗೆ ಹೊಂದಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸುತ್ತ ಅಭಿವೃದ್ಧಿಪಡಿಸಲು ಒತ್ತುವರಿಯಾದ 2 ಎಕರೆ 26 ಗುಂಟೆ ಭೂಮಿಯನ್ನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

‘ಈ ಸ್ಥಳದಲ್ಲಿ ಡಾ.ಅಂಬೇಡ್ಕರ್‌ ಅವರ ಹೆಸರಿನಲ್ಲಿ ಉದ್ಯಾನ, ಸಾಂಸ್ಕೃತಿಕ ಭವನ ಮತ್ತು ಗ್ರಂಥಾಲಯವನ್ನು ನಿರ್ಮಾಣ ಮಾಡಬೇಕು. ದಲಿತರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದನ್ನು ಕೂಡಲೇ ರದ್ದುಗೊಳಿಸಬೇಕು. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಪೊಲೀಸ್ ಇನ್‍ಸ್ಪೆಕ್ಟರ್ ಅವರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಚ್.ಎ.ಸರಕಾವಸ ಮತ್ತು ಡಿವೈಎಸ್‍ಪಿ ಜಾವೇದ್ ಇನಾಮದಾರ್ ಮೂಲಕ ಸಲ್ಲಿಸಲಾಯಿತು. ಮನವಿಗೆ ಸ್ಪಷ್ಟತೆ ಕೊಡಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಆ.11ರಂದು ಸುರಪುರ ಬಂದ್ ಘೋಷಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಲ್ಲಿಕಾರ್ಜುನ ಕ್ರಾಂತಿ, ಮಾನು ಗುರಿಕಾರ, ಮಾನಪ್ಪ ಕಟ್ಟಿಮನಿ, ಚಂದ್ರಶೇಖರ ಜಡಿಮರಳ, ನಾಗಣ್ಣ ಕಲ್ಲದೇವನಹಳ್ಳಿ, ರಾಹುಲ್ ಹುಲಿಮನಿ, ವೆಂಕಟೇಶ ಹೊಸಮನಿ, ಭೀಮರಾಯ ಸಿಂದಗೇರಿ, ಆದಪ್ಪ ಹೊಸಮನಿ, ಮಾನಪ್ಪ ಕರಡಕಲ್, ಶಿವಲಿಂಗ ಹಸನಾಪುರ, ಚಂದ್ರಶೇಖರ ಕಟ್ಟಿಮನಿ, ಮೂರ್ತಿ ಬೊಮ್ಮನಳ್ಳಿ, ಶ್ರೀನಿವಾಸ ನಾಯಕ, ಮಾಳಪ್ಪ ಕಿರದಳ್ಳಿ, ನಿಂಗಣ್ಣ ಗೋನಾಲ, ಮಲ್ಲಿಕಾರ್ಜುನ ತಳ್ಳಳ್ಳಿ, ಹಣಮಂತ ಹೊಸಮನಿ, ಗೋಪಾಲ ವಜ್ಜಲ, ರಾಜು ಕಟ್ಟಿಮನಿ, ಶಿವಶಂಕರ ಹೊಸಮನಿ, ಹಣಮಂತ ಭದ್ರಾವತಿ, ಮಲ್ಲಿಕಾರ್ಜುನ ವಾಗಣಗೇರಾ, ಮರೆಪ್ಪ ಕಾಂಗ್ರೆಸ್, ಅವಿನಾಶ ಹೊಸಮನಿ, ರಾಜು ದೊಡ್ಡಮನಿ, ಚಂದಪ್ಪ ಪಂಚಮ, ರಮೇಶ ಅರಕೇರಿ, ಮರಲಿಂಗ ಗುಡಿಮನಿ, ಮಹಾದೇವ ಚಲುವಾದಿ, ತಿಪ್ಪಣ್ಣ ಶೆಳ್ಳಗಿ, ವೀರಭದ್ರ ತಳವಾರಗೇರಾ, ಮಾನಪ್ಪ ಶೆಳ್ಳಗಿ, ವೈಜನಾಥ ಹೊಸಮನಿ, ಶೇಖರ ಮಂಗಳೂರು, ರಮೇಶ ಬಡಗೇರ, ಮಲ್ಲು ಮುಷ್ಠಳ್ಳಿ, ನಾಗು ಗೋಗಿಕೇರಾ, ಜಟ್ಟೆಪ್ಪ ನಾಗರಾಳ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.