ADVERTISEMENT

ರಥೋತ್ಸವ ಜರುಗಿಸಿದರೆ ಕ್ರಮ- ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:53 IST
Last Updated 15 ಜನವರಿ 2022, 8:53 IST
ಕಕ್ಕೇರಾ ಪಟ್ಟಣದ ಸೋಮನಾಥ ದೇವಾಲಯದ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿದರು
ಕಕ್ಕೇರಾ ಪಟ್ಟಣದ ಸೋಮನಾಥ ದೇವಾಲಯದ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿದರು   

ಕಕ್ಕೇರಾ: ‘ಪಟ್ಟಣದ ಆರಾಧ್ಯದೈವ ಸೋಮನಾಥ ದೇವರ ಜಾತ್ರೆ ಪ್ರಯುಕ್ತ ನಡೆಯುತ್ತಿದ್ದ ರಥೋತ್ಸವ, ಉಚ್ಛಾಯ ಹಾಗೂ ಜಾನು ಜಾತ್ರೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರದ್ದುಪಡಿಸಲಾಗಿದ್ದು, ಒಂದು ವೇಳೆ ರಥೋತ್ಸವ ನಡೆಸಿದರೆ ಎಫ್‌ಐಆರ್‌ ದಾಖಲಿಸಲಾಗುವುದು’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ದೇವಾಲಯದ ಆವರಣದಲ್ಲಿ ನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,‘ದೇಶದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಜಾತ್ರೆ ರದ್ದುಪಡಿಸಲಾಗಿದೆ. ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲು ಅವಕಾಶ ನೀಡಲಾಗಿದೆ. ಅಂಗಡಿ–ಮುಂಗಟ್ಟುಗಳನ್ನು ಹಾಕಬಾರದು. ಜನ ಗುಂಪು ಸೇರದ ಹಾಗೆ ನೋಡಿಕೊಳ್ಳಬೇಕು. ಸರ್ಕಾರದ ಆದೇಶ ಧಿಕ್ಕರಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಸಿಪಿಐ ದೌಲತ್ ಎನ್.ಕೆ ಮಾತನಾಡಿ,‘ಭಕ್ತರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಜಿಲ್ಲಾಡಳಿತ ಜಾತ್ರೆ ರದ್ದುಪಡಿಸಿದೆ. ಜನ ಸಹಕರಿಸಬೇಕು. ಶನಿವಾರ ಬೆಳಿಗ್ಗೆಯಿಂದ ಭಕ್ತರು ದೇವಸ್ಥಾನ ಪ್ರವೇಶಿಸಿದಂತೆ ನಿರ್ಬಂಧ ಹೇರಲಾಗಿದೆ. ಭಕ್ತರು ಮನೆಯಲ್ಲಿದ್ದುಕೊಂಡು ಸೋಮನಾಥ ದೇವರನ್ನು ಸ್ಮರಿಸಬೇಕು’ ಎಂದರು. ಯುವ ಮುಖಂಡ ಹಣಮಂತರಾಯಗೌಡ ಜಹಾಗೀರದಾರ ಮಾತನಾಡಿ, ಜಿಲ್ಲಾಡಳಿತಕ್ಕೆ ಸಹಕಾರ ನೀಡುತ್ತೇವೆ’ ಎಂದು ಹೇಳಿದರು.

ADVERTISEMENT

ಉಪ ತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಪಿಎಸ್ಐ ಬಾಷುಮಿಯಾ ಕೊಂಚೂರ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಪರಮಣ್ಣ ಕುಂಬಾರ, ರಾಜು ಹವಾಲ್ದಾರ್, ಗುಂಡಪ್ಪ ಸೊಲ್ಲಾಪುರ, ಪರಮಣ್ಣ ಪೂಜಾರಿ, ಅಯ್ಯಣ್ಣ ಪೂಜಾರಿ, ಚಂದ್ರು ವಜ್ಜಲ್, ಪವಾಡೆಪ್ಪ ಮ್ಯಾಗೇರಿ, ಬಸವರಾಜ ಕಮತಗಿ, ಲಕ್ಷ್ಮಣ ಲಿಂಗದಳ್ಳಿ, ಸಂಗಯ್ಯಸ್ವಾಮಿ, ಷಣ್ಮುಖಪ್ಪ ದೊರೆ, ಪರಮಣ್ಣ ತೇರಿನ್ ಸೇರಿದಂತೆ ಸೇರಿದಂತೆ ಹಲವರು ಈ ವೇಳೆಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.