
ಹುಣಸಗಿ: ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದ್ವಿಗುಣ ಹಣ ಬರುತ್ತದೆ ಎಂದು ನಂಬಿಸಿ ಗ್ರಾಮಸ್ಥರಿಗೆ ಲಕ್ಷಾಂತರ ಹಣ ವಂಚಿಸಿದ್ದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೋಳ್ಳುವಂತೆ ಆರೋಪಿಸಿ ಮಾದಿಗ ಯುವಸೇನೆ ಮನವಿ ಸಲ್ಲಿಸಿದೆ.
ಈ ಕುರಿತು ಕಲಬುರ್ಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ್ ಆಯುಕ್ತರಿಗೆ ಮಾದಿಗ ಯುವ ಸೇನೆಯ ಜಿಲ್ಲಾ ಘಕಟದ ಅಧ್ಯಕ್ಷ ಬಸವರಾಜ ಹಗರಟಗಿ ಮನವಿ ಸಲ್ಲಿಸಿ, ‘ಶಾಲೆಯಲ್ಲಿನ ಮಕ್ಕಳಿಗೆ ಪಾಠ ಹೇಳಿಕೊಡುವುದನ್ನು ಬಿಟ್ಟು ಖಾಸಗಿ ಕಂಪನಿಯ ಜೊತೆಗೆ ಶಾಮಿಲಾಗಿ ಗ್ರಾಮೀಣ ಜನರಿಗೆ ನಂಬಿಸಿ ಲಕ್ಷಾಂತರ ಹಣವನ್ನು ವಸೂಲಿ ಮಾಡಿ ಗ್ರಾಮಸ್ಥರಿಗೆ ಮೋಸ ಮಾಡಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕುಮಾರ ಹೊಸಳ್ಳಿ, ನಿಂಗಪ್ಪ ಪೂಜಾರಿ, ಧರೇಪ್ಪ ಪೂಜಾರಿ, ಸುನೀಲ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.