ADVERTISEMENT

ಮಹಾಶಿವರಾತ್ರಿಗೆ ಯಾದಗಿರಿ ಜಿಲ್ಲೆಯ ದೇಗುಲಗಳು ಸಿದ್ಧ

ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಶಿವನ ಆರಾಧನೆಗೆ ಅಲಂಕಾರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 3:44 IST
Last Updated 11 ಮಾರ್ಚ್ 2021, 3:44 IST
ಯಾದಗಿರಿಯ ಅಮೃತೇಶ್ವರ ದೇವಸ್ಥಾನ
ಯಾದಗಿರಿಯ ಅಮೃತೇಶ್ವರ ದೇವಸ್ಥಾನ   

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ನಡೆಯುವ ಶಿವರಾತ್ರಿ ಜಾಗರಣೆಗೆ ದೇಗುಲಗಳು ಸಜ್ಜಾಗಿವೆ. ಸುಣ್ಣ ಬಣ್ಣ ಬಳಿದು ದೇವಸ್ಥಾನಗಳನ್ನು ಸ್ವಚ್ಛತೆ ಮಾಡಲಾಗಿದೆ.

ಈಶ್ವರ, ಪರಮೇಶ್ವರ ಇನ್ನಿತರ ಹೆಸರಿಗಳಿಂದ ಕೂಡಿರುವ ಪರಮ ಶಿವನನ್ನು ಧ್ಯಾನಿಸುವ, ಪೂಜಿಸುವ ಉಪವಾಸ ವ್ರತ ಮಾಡುವೇ ದಿನವೇ ಶಿವರಾತ್ರಿಯಾಗಿದೆ. ಈ ದಿನದಲ್ಲಿ ಮಾಡುವ ಪ್ರಾರ್ಥನೆ, ಉಪಾವಾಸ ಶ್ರೇಷ್ಠವೆಂದು ಭಕ್ತರ ನಂಬಿಕೆಯಾಗಿದೆ.

ಅಮೃತೇಶ್ವರ ದೇವಸ್ಥಾನ: ನಗರದ ಅಮೃತೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಪೂಜೆಗಳು ಆರಂಭಗೊಳ್ಳಲಿವೆ. ಬೆಳಿಗ್ಗೆ 7 ಗಂಟೆಗೆ ಬಿಲ್ವಾರ್ಚನೆ, ಮಹಾ ಮಂಗಳಾರತಿ ನಡೆಯಲಿದೆ.

ADVERTISEMENT

ಲಕ್ಷ್ಮೀ ದೇವಸ್ಥಾನ: ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಬೆಳಿಗ್ಗೆ 9.30ಕ್ಕೆ ಮಹಾರುದ್ರಭಿಷೇಕ, 1001 ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ.

***

ಗುರುವಾರ ಬೆಳಿಗ್ಗೆ ಅಮೃತೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ 5ರಿಂದಲೇ ಮಹಾ ಪ್ರಸಾದ ವಿತರಿಸಲಾಗುತ್ತದೆ. ಭಕ್ತರೊಬ್ಬರಿಂದ ಪೂಜೆ ಹಮ್ಮಿಕೊಳ್ಳಲಾಗಿದೆ
ಮಲ್ಲಮ್ಮ ಶಿವಯ್ಯಸ್ವಾಮಿ, ಅಮೃತೇಶ್ವರ ದೇವಸ್ಥಾನ ಆರ್ಚಕಿ

***

ದೇವಸ್ಥಾನಕ್ಕೆ ಬರುವ ಭಕ್ತರಿಂದ ಹಾಲಾಭಿಷೇಕ ಮತ್ತು ಬಿಲ್ವಾರ್ಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಂಜೆ ವೇಳೆ ದೇಗುಲಕ್ಕೆ ಭಕ್ತರ ಸಂಖ್ಯೆ ಹೆಚ್ಚು
ಸೂಗಯ್ಯ ಸ್ವಾಮಿ, ಲಕ್ಷ್ಮಿ ದೇವಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.