ADVERTISEMENT

ಯಾದಗಿರಿ: ಬಯಲು ಬಹಿರ್ದೆಸೆ ಮುಕ್ತ ‘ಚಂದಾಪುರ’

400 ಮನೆಗಳಲ್ಲಿ ಪ್ರತಿಯೊಂದು ಮನೆಯಲ್ಲಿಯೂ ವೈಯಕ್ತಿಕ ಶೌಚಾಲಯ

ಬಿ.ಜಿ.ಪ್ರವೀಣಕುಮಾರ
Published 30 ಸೆಪ್ಟೆಂಬರ್ 2019, 19:45 IST
Last Updated 30 ಸೆಪ್ಟೆಂಬರ್ 2019, 19:45 IST
ಯಾದಗಿರಿ ತಾಲ್ಲೂಕಿನ ಚಂದಾಪುರದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿರುವುದು
ಯಾದಗಿರಿ ತಾಲ್ಲೂಕಿನ ಚಂದಾಪುರದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿರುವುದು   

ಯಾದಗಿರಿ: ತಾಲ್ಲೂಕಿನ ಗಡಿ ಅಂಚಿನ ಗ್ರಾಮದ ಚಂದಾಪುರದಲ್ಲಿ 400 ಮನೆಗಳಿವೆ. ಇಲ್ಲಿಪ್ರತಿಯೊಂದು ಮನೆಯೂ ಶೌಚಾಲಯ ಹೊಂದಿದ್ದು, ಗ್ರಾಮಕ್ಕೆಗಾಂಧಿ ಗ್ರಾಮಪ್ರಶಸ್ತಿ ಬಂದಿದೆ.

ಈ ಊರಿನ ವಿಶೇಷವೆಂದರೆ 400 ಮನೆಗಳಲ್ಲಿ ಕೇವಲ 4 ಮನೆಗಳು ಮಾತ್ರ ಬೇರೆ ಸಮುದಾಯವರಿದ್ದಾರೆ. ಮಿಕ್ಕ 396 ಕುಟುಂಬಗಳು ಮುಸ್ಲಿಂ ಕುಟುಂಬಗಳಾಗಿವೆ. ಅಣ್ಣತಮ್ಮಂದಿರು ಹೆಚ್ಚಿರುವವರು ಎರಡೆರಡು ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಈ ಮೂಲಕ ನೈರ್ಮಲ್ಯ ಮುಕ್ತ ಗ್ರಾಮವಾಗಿದೆ.

ಗ್ರಾಮದಲ್ಲಿ 1600 ಜನಸಂಖ್ಯೆ ಇದ್ದು, ಮೂವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಕಡೇಚೂರು ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಚಂದಾಪುರದಲ್ಲಿ 6ನೇ ತರಗತಿ ವರೆಗೆ ಉರ್ದು ಶಾಲೆ ಇದೆ. 7 ನೇ ವರ್ಗಕ್ಕೆ ಕಡೇಚೂರುಗೆ ತೆರಳಬೇಕಿದೆ.

ADVERTISEMENT

ಕೆಲ ವರ್ಷಗಳ ಹಿಂದೆ ಕೋಕಾಕೋಲಾ ಕಂಪನಿ ಈ ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡಿದೆ.
ಕೋಕಾಕೋಲಾ ಕಂಪನಿ ₹8,500 ಸಹಾಯ ಧನ ನೀಡಿದ್ದು, ಗ್ರಾಮ ಪಂಚಾಯಿತಿ ₹3,500 ಭರಿಸಿದೆ. ಒಟ್ಟು ₹12 ಸಾವಿರ ವೆಚ್ಚದಲ್ಲಿ ಗ್ರಾಮಸ್ಥರು ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.

ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುಮ್ತಾಜ್ ಆಲಿಖಾನ್‌ ಈ ಗ್ರಾಮಕ್ಕೆ ಭೇಟಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಅಲ್ಲಿಂದ ಇಲ್ಲಿಯ ತನಕ ಗ್ರಾಮಸ್ಥರು ಮನೆ ಮುಂದುಗಡೆ ನಿರ್ಮಿಸಿಕೊಂಡಿರುವ ಶೌಚಾಲಯ ಬಳಸುತ್ತಿದ್ದಾರೆ.

ಕೇವಲ ಸಹಾಯಧನಕ್ಕಾಗಿ ಶೌಚಾಲಯ ಕಟ್ಟಿಕೊಳ್ಳುವವರ ಮಧ್ಯೆ ಈ ಗ್ರಾಮದವರು ಮನೆಗೊಂದರಂತೆ ಶೌಚಾಲಯ ಕಟ್ಟಿಕೊಂಡು ಆದರ್ಶವಾಗಿದ್ದಾರೆ.ಶೌಚಾಲಯಗಳನ್ನು ನಿರ್ಮಾಣ ಮಾಡಿದರಷ್ಟೇ ಸಾಲದು. ಜನಬಳಕೆಯಾದಾಗ ಮಾತ್ರ ಸ್ವಚ್ಛತೆ ಕಾಪಾಡಿದಂತೆ ಆಗುತ್ತದೆ.

ಕಡೇಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಂದಾಪುರ ಗ್ರಾಮದಲ್ಲಿ ಒಬ್ಬರಿಂದೊಬ್ಬರಿಗೆ ಅರಿವು ಹೆಚ್ಚಳವಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಇದರಿಂದ 2014ರಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಇದರಿಂದ ಇದು ಗ್ರಾಮಕ್ಕೆ ಮೂಡಿದ ಗರಿಯಾಗಿದೆ.

‘ಸಾರ್ವಜನಿಕರ ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆ ಇದೆ. ನೀರಿಗೆ ಸಮಸ್ಯೆ ಇಲ್ಲ. ಬೇಸಿಗೆಯಲ್ಲಿ ಮಾತ್ರ ನೀರಿನ ಸಮಸ್ಯೆ
ಉಂಟಾಗಿತ್ತು. ಆದರೂ ಗ್ರಾಮಸ್ಥರು ಬಹಿರ್ದೆಸೆಗೆ ಹೊರಗಡೆ ತೆರಳಿಲ್ಲ. ಗ್ರಾಮದಲ್ಲಿ ನಾಲ್ಕು ಬೋರೆವೆಲ್‌ ಇದೆ.
ಮೂರು ಕಿರು ನೀರು ಸರಬರಾಜು ಟ್ಯಾಂಕ್‌ನಿಂದ ನೀರು ಮಾಡಲಾಗುತ್ತದೆ. ಹೀಗಾಗಿ ಇದು ಪಂಚಾಯಿತಿಯಲ್ಲಿ
ಮಾದರಿಯಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರಪ್ಪ ಜಿ.ನಾಯಕ ಹೇಳುತ್ತಾರೆ.

*
2014 ರಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಸಂದಿದೆ. ಶೇಕಡ 60 ರಷ್ಟು ಸಾಕ್ಷರತೆ ಇದೆ. ತಾಲ್ಲೂಕಿನಲ್ಲಿ ಪುರಸ್ಕಾರ ಪಡೆದ ಮೊದಲ ಗ್ರಾಮವಾಗಿದೆ.
-ಶಂಕರಪ್ಪ ಜಿ.ನಾಯಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.