ಹತ್ತಿಕುಣಿ (ಯರಗೋಳ) ಸಫಲ್ ಮಾರಾಟ ಕೇಂದ್ರದಲ್ಲಿ ಜನರಿಗೆ ಸಿಗುವ ಗುಣಮಟ್ಟದ ಸಿರಿಧಾನ್ಯಗಳು ಮತ್ತು ಖಾದ್ಯ ತೈಲಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮಾರಾಟ ಹೆಚ್ಚಳಕ್ಕೆ ಗಮನ ಹರಿಸಲಾಗುವುದು’ ಎಂದು ಹತ್ತಿಕುಣಿ ಕೆಓಎಂ ಅಧ್ಯಕ್ಷ ಶರಣಪ್ಪ ಸೋಮಣ್ಣೋರ ಹೇಳಿದರು.
ಸಂಘದ ಕಚೇರಿಯಲ್ಲಿ ನಡೆದ ಸಂಘದ 3ನೇ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
‘ಈಗಾಗಲೇ ಸಂಘದ ಹೊಸ ಆಡಳಿತ ಮಂಡಳಿ ಅವರು ಕೂಡಿ, ಹೊಸ ಕಾಯಕಲ್ಪ ನೀಡುವ ಉದ್ದೇಶದಿಂದ ಸಭೆ ಕರೆದು ನಿರ್ದೇಶಕರ ಜೊತೆ ರಚನಾತ್ಮಕ ವಿಷಯಗಳನ್ನು ಚರ್ಚಿಸಿ, ಸಂಘದ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ವೈಜನಾಥರಡ್ಡಿ ಪಾಟೀಲ್ ಮಾತನಾಡಿ,‘ಸಂಘದ ಸಫಲ್ ಮಾರಾಟ ಕೇಂದ್ರದ ಮೂಲಕ 2 ತಿಂಗಳಲ್ಲಿ 1 ಸಾವಿರ ಲೀಟರ್‌ಗೂ ಹೆಚ್ಚು ಶೇಂಗಾ, ಸೂರ್ಯಕಾಂತಿ ತೈಲ ಮಾರಾಟ ಹಾಗೂ ಜನರು ದೈನಂದಿನ ಬಳಕೆಗೆ ಬೇಕಾಗುವ ಆಹಾರ ಪದಾರ್ಥಗಳ ಮಾರಾಟದಲ್ಲಿ ಪ್ರಗತಿ ಕಂಡಿದ್ದೇವೆ’ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಖಾಜಾ ಮೈನೋದ್ದೀನ್ ಇನಾಂದಾರ, ನಿರ್ದೇಶಕರಾದ ಕೀರಲಿಂಗಪ್ಪ ದೇವಕರ್, ಶರಣಪ್ಪ ಬಡ್ಡರ್, ಶರಣಪ್ಪ ದ್ಯಾರನೋರ, ಚಂದಪ್ಪ ತಮ್ಮಣ್ಣೋರ, ಶಿವಪ್ಪ ಗಣಪೂರ, ಶರಣಪ್ಪ ಗಂಡೆನೋರ, ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.