ADVERTISEMENT

ವಿಕಾಸ ಅಕಾಡೆಮಿ ಸಂಚಾಲಕರ ಸಭೆ; ಸೇಡಂ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 6:12 IST
Last Updated 29 ಜನವರಿ 2023, 6:12 IST
ಯಾದಗಿರಿಯಲ್ಲಿ ಜಿಲ್ಲಾ ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ ಸಂಚಾಲಕರ ಮತ್ತು ಹಿತೈಷಿಗಳ ಸಭೆಯನ್ನು ವಿಕಾಸ ಅಕಾಡೆಮಿ ಪ್ರಮುಖ ಬಸವರಾಜ ಪಾಟೀಲ ಸೇಡಂ ಉದ್ಘಾಟಿಸಿದರು
ಯಾದಗಿರಿಯಲ್ಲಿ ಜಿಲ್ಲಾ ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ ಸಂಚಾಲಕರ ಮತ್ತು ಹಿತೈಷಿಗಳ ಸಭೆಯನ್ನು ವಿಕಾಸ ಅಕಾಡೆಮಿ ಪ್ರಮುಖ ಬಸವರಾಜ ಪಾಟೀಲ ಸೇಡಂ ಉದ್ಘಾಟಿಸಿದರು   

ಯಾದಗಿರಿ: ಪ್ರಕೃತಿಯ ವಿರುದ್ಧ ಹೋಗಿ ವಿನಾಶಕ್ಕೆ ದಾರಿ ಮಾಡಿಕೊಳ್ಳದೆ, ಪ್ರಕೃತಿ ಜತೆ ಹೊಂದಿಕೊಂಡು ಮಾನವ ತನ್ನ ಕಲ್ಯಾಣ ಮಾಡಿಕೊಳ್ಳಬೇಕು ಎಂದು ವಿಕಾಸ ಅಕಾಡೆಮಿಯ ಪ್ರಮುಖ ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.

ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲೆಯ ವಿಕಾಸ ಅಕಾಡೆಮಿ ಸಂಚಾಲಕರ ಮತ್ತು ಹಿತೈಹಿಸಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

2025ನೇ ಜನವರಿಯಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಯ ಸ್ವರ್ಣ ಮಹೋತ್ಸವ ಮತ್ತು 7ನೇ ಭಾರತೀಯ ಸಾಂಸ್ಕೃತಿಯ ಉತ್ಸವವನ್ನು ಕಲಬುರಗಿ-ಸೇಡಂ ರಾಷ್ಟ್ರೀಯ ಹೆದ್ದಾರಿಯ ಬೀರನಳ್ಳಿ ರಸ್ತೆಯ ನೀಲಹಳ್ಳಿ ಗ್ರಾಮದ ಸಮೀಪ 300 ಏಕರೆಯ ಸ್ಥಳದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ADVERTISEMENT

ಅದು ಹತ್ತು ದಿನಗಳ ಕಾಲ ಜರಗುತ್ತಿದ್ದು ಅಲ್ಲಿ ನಾಡಿನ, ದೇಶದ ಮಹಾನ್ ಶರಣರು, ತಪಸ್ವಿಗಳು, ಅನೇಕ ಕ್ಷೇತ್ರದ ಪರಿಣಿತರನ್ನು ಸಜ್ಜನರನ್ನು ಒಂದು ಕಡೆ ಸೇರಿಸುವ ಕಾರ್ಯ ಇದಾಗಿದೆ. ಅದರಲ್ಲಿ ಮಾತೃಲೋಕ, ಶಿಕ್ಷಣ, ಯುವಕರ, ರೈತರ, ಗ್ರಾಮ ಅಭಿವೃದ್ಧಿ, ಸ್ವಯಂ ಉದ್ಯಮ, ಧರ್ಮ ಸಂಸ್ಕೃತಿ ಸೇರಿದಂತೆ ದಿನಕ್ಕೊಂದು ವಿಷಯದಂತೆ ಆದರ್ಶ ವಯಕ್ತಿಗಳ ಸಮ್ಮೂಖದಲ್ಲಿ ಈ ಕಾರ್ಯಕ್ರಮಗಳು ಜರಗುತ್ತವೆ. ಇಂಥ ಜ್ಞಾನ ಯಜ್ಞದಲ್ಲಿ ಅಂದಾಜು ಪ್ರತಿ ನಿತ್ಯ 3ಲಕ್ಷ ಜನರಂತೆ 30 ಲಕ್ಷ ಕ್ಕೂ ಹೆಚ್ಚು ಜನ ಸೇರುವ ನೀರಿಕ್ಷೆಯಿದೆ ಎಂದು ತಿಳಿಸಿದರು.

ಈ ಉತ್ಸವದ ಗುರಿ ಸಜ್ಜನರನ್ನು ಒಂದುಗೂಡಿಸಿ ಭಾರತೀಯ ಸಂಸ್ಕೃತಿ ಮೌಲ್ಯದ, ತನ್ನ ಜೀವನ ಪದ್ಧತಿಯ ಮೇಲೆ ಈ ದೇಶವನ್ನು ಮತ್ತೆ ತನ್ನ ತನ್ನದ ಮೇಲೆ ಭಾರತೀಯ ಮಾತೆಯನ್ನು ತಾಯಿಯನ್ನಾಗಿ ಮಾಡುವುದಕ್ಕೆ ಇದು ಚಿಕ್ಕ ಪ್ರಯತ್ನವಾಗಿದೆ. ನನ್ನ ಹಳ್ಳಿ, ನನ್ನ ದೇಶ, ನನ್ನ ಜಿಲ್ಲೆ ನನ್ನ ಜಗತ್ತು ಎನ್ನುವ ಉದ್ದೇಶದಿಂದ ಕಡಿಮೆ ಖರ್ಚು ಹೆಚ್ಚು ಆದಾಯ ತತ್ವದ ಮೇಲೆ ಇಲ್ಲಿ 800 ಕ್ಕೂ ಅಧಿಕ ಮಾರಟ ಮಳಿಗೆಗಳನ್ನು ಸ್ಥಾಪಿಸಲಿದ್ದು, ಅದರಲ್ಲಿ 400ಕ್ಕೂ ಹೆಚ್ಚು ಮಳಿಗೆಯಲ್ಲಿ ಸ್ವದೇಶಿ ಉತ್ಪನ್ನಗಳು ಮತ್ತು ಸ್ಥಳೀಯ ಉತ್ಪನ್ನಗಳ ಮಾರಟಕ್ಕೆ ಅವಕಾಶ ಮಾಡಿಕೊಡಲಾಗುವುದು. ಇದಕ್ಕೆ ಸುಮಾರು 20 ಕೋಟಿ ಖರ್ಚು ಮಾಡಲಾಗುತ್ತಿದೆ
ಎಂದರು.

ಇದಕ್ಕೂ ಮುಂಚೆ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನಿಲಕಂಠರಾಯ ಎಲ್ಹೇರಿ ಮಾತನಾಡಿ ವಿಕಾಸ ಅಕಾಡೆಮಿಯು ಕೈಗೊಂಡ ಸಮಾಜಮುಖಿ ಕಾರ್ಯಗಳ ಮಾಹಿತಿ ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಕಾಸ ಅಕಾಡೆಮಿ ಸಂಚಾಲಕ ಸಿದ್ದಣ್ಣಗೌಡ ಕಾಡಂಗೇರ, ಅಮೃತರಾವ್ ಮುಳಗಿ, ಹಣಮಂತರಾಯ ಕಂದಕೂರು, ಭೀಮಣ್ಣಗೌಡ ಕ್ಯಾತ್ನಾಳ, ಪ್ರೀತಿ ಕಲಬುರಗಿ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳ ಸಂಚಾಲಕರು ಪ್ರಗತಿ ಮತ್ತು ಕೌಶಲ ಕೇಂದ್ರಗಳ ನಿರ್ವಾಹಕಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.