ADVERTISEMENT

ಹಳ್ಳಿ ಪ್ರತಿಭೆ ದೊಡ್ಡಪ್ಪಗೆ ಬೇಕು ಪ್ರೋತ್ಸಾಹ

ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ, ಆರ್ಥಿಕ ಸಂಕಷ್ಟದಿಂದ ಪ್ರತಿಭೆಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 10:45 IST
Last Updated 13 ಮಾರ್ಚ್ 2020, 10:45 IST
ವಡೋಡರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿರುವ ದೊಡ್ಡಪ್ಪ ನಾಯಕ (ಬಲತುದಿ)
ವಡೋಡರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿರುವ ದೊಡ್ಡಪ್ಪ ನಾಯಕ (ಬಲತುದಿ)   

ಯಾದಗಿರಿ: ತಾಲ್ಲೂಕಿನ ಹಳಿಗೇರಾ ಗ್ರಾಮದ ಯುವಕ ದೊಡ್ಡಪ್ಪ ನಾಯಕ ಅವರು ಆಸ್ಟ್ರೇಲಿಯಾದಲ್ಲಿ ನವೆಂಬರ್‌ ತಿಂಗಳಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಆರ್ಥಿಕ ಸಂಕಷ್ಟ ಎದುರಾಗಿದ್ದು, ಅನಿಶ್ಚಿತತೆ ಕಾಡುತ್ತಿದೆ.

ದೊಡ್ಡಪ್ಪ ತಮ್ಮದೇ ಆದ ಕನಸು ಕಟ್ಟಿಕೊಂಡವರು. ಆದರೆ, ಬಡತನ, ಆರ್ಥಿಕ ಸಂಕಷ್ಟದಿಂದ ಪ್ರತಿಭೆ ಇದ್ದರೂ ಪ್ರದರ್ಶಿಸಲು ಆಗುತ್ತಿಲ್ಲ. ಅಸಹಾಯಕರಾಗಿ ತಮ್ಮಲ್ಲಿನ ಪ್ರತಿಭೆ ಮರೆ ಮಾಚಿ ಬಾಳುವ ಪರಿಸ್ಥಿತಿ ಇದೆ. ಒದಗಿದೆ. ಅವರದ್ದು ಕೃಷಿ ಕುಟುಂಬ. ಚಿಕ್ಕಂದಿನಿಂದ ಓಟದಲ್ಲಿ ಆಸಕ್ತಿ ಉಳ್ಳವರು.

ಗುಜರಾತ್‌ ರಾಜ್ಯದ ವಡೋಡರದಲ್ಲಿ ಫೆಬ್ರುವರಿ 5 ರಿಂದ 9 ರವರೆಗೆ 5 ದಿನ ಜರುಗಿದ (30 ವರ್ಷಗಳ ಮೇಲ್ಪಟ್ಟವರ ಮಾಸ್ಟರ್ಸ್‌ ಗೇಮ್ಸ್) ಸ್ಪರ್ಧೆಗಳಲ್ಲಿ 4X100 ರಿಲೇ ಓಟದಲ್ಲಿ ಕರ್ನಾಟಕ ತಂಡದಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಗೆದ್ದು ರಾಷ್ಟ್ರಕ್ಕೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದರು.

ವೈಯಕ್ತಿಕ 400 ಮೀಟರ್ ಓಟದಲ್ಲಿ ದೇಶಕ್ಕೆ ದ್ವಿತೀಯ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡು ಇದರಲ್ಲೂ ಅಂತರರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ADVERTISEMENT

ಈಗ ಆಸ್ಟ್ರೇಲಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಆದರೆ, ಆಸ್ಟ್ರೇಲಿಯಾಕ್ಕೆ ಹೋಗಲು ವಿಸಾ, ಪಾಸ್‌ಪೋರ್ಟ್‌ ಮಾಡಿಸಬೇಕು. ಆದರೆ, ಅವರ ಬಳಿ ಅಷ್ಟು ದುಡ್ಡಿಲ್ಲದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಸ್ತುತ ಜಿಲ್ಲಾ ಕ್ರಿಡಾಂಗಣದಲ್ಲಿ ಅಥ್ಲೆಟಿಕ್‌ ತಾತ್ಕಾಲಿಕ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮನೆಯಲ್ಲಿ ಬಡತನವಿದೆ. ಕುಟುಂಬದವರ ಪ್ರೋತ್ಸಾಹವಿದೆ. ಆದರೆ, ವಿಸಾ, ಪಾಸ್‌ಪೋರ್ಟ್‌ ಮಾಡಿಸಲು ಹಣವಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಹಾಯ ನೀಡಿದರೆ ಆಸ್ಟ್ರೇಲಿಯಾದಲ್ಲಿ ನಡೆಯುವ ಸ್ಪರ್ಧೆಗೆ ತೆರಳುತ್ತೇನೆ’ ಎಂದು ದೊಡ್ಡಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಅವಕಾಶ ಇದೆ. ಸದ್ಯ ಕೋಚ್‌ ಆಗಿ ಕಾರ್ಯನಿರ್ವಹಿಸುವ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರೋತ್ಸಾಹ ಸಿಗುತ್ತಿದೆ. ಮುಂದೆ ಏನಾಗುತ್ತದೆ ನೋಡಬೇಕು’ ಎಂದರು.

ಹಿಂದುಳಿದ ಜಿಲ್ಲೆಯಲ್ಲಿ ಇಂಥ ಪ್ರತಿಭೆಯುಳ್ಳ ದೊಡ್ಡಪ್ಪ ನಾಯಕ ಅವರ ಪ್ರತಿಭೆ ಗುರುತಿಸಿ, ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಧನ ಸಹಾಯ ಮಾಡಬೇಕಿದೆ. ಕ್ರೀಡಾ ಪ್ರತಿಭೆಯನ್ನು ಬೆಳೆಸಬೇಕಿದೆ ಎಂದು ಸ್ಥಳೀಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.