
ನಾರಾಯಣಪುರ: ‘ಬಸವಸಾಗರ ಜಲಾಶಯದಿಂದ ಭಾನುವಾರ ರಾತ್ರಿ ಅಣೆಕಟ್ಟೆಯ ಒಂದು ಕ್ರಸ್ಟ್‌ಗೇಟ್ ಮೂಲಕ 2 ಸಾವಿರ ಕ್ಯೂಸೆಕ್ ಹಾಗೂ ಮುರಡೇಶ್ವರ ಜಲವಿದ್ಯುತ್ ಸ್ಥಾವರದ ಮೂಲಕ 4 ಸಾವಿರ ಕ್ಯೂಸೆಕ್ ಸೇರಿ ಒಟ್ಟು 6 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಸಲಾಯಿತು’ ಎಂದು ಕೆಬಿಜೆಎನ್ಎಲ್ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕರೆಡ್ಡಿ ಪಾಟೀಲ ಮಾಹಿತಿ ನೀಡಿದ್ದಾರೆ.
‘ಮೇಲಧಿಕಾರಿಗಳ ನಿರ್ದೇಶನದಂತೆ ಕುಡಿಯುವ ಉದ್ದೇಶಕ್ಕಾಗಿ ಎಂದು ಬಸವಸಾಗರ ಜಲಾಶಯದಿಂದ 1.25 ಟಿಎಂಸಿ ಅಡಿ ನೀರನ್ನು ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ನಿಗದಿಪಡಿಸಿದ ನೀರು ಪೂರ್ಣಗೊಂಡ ಬಳಿಕ ನದಿ ಪಾತ್ರಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಸದ್ಯ ಬಸವಸಾಗರಕ್ಕೆ ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ 7 ಸಾವಿರ ಕ್ಯೂಸೆಕ್‌ನಷ್ಟು ನೀರಿನ ಒಳಹರಿವು ಇದೆ. ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ(ಎನ್ಎಲ್‌ಬಿಸಿ) ಕಳೆದ ಮೂರು ದಿನಗಳಿಂದ ನಿತ್ಯ 1,700 ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ. ಒಟ್ಟು ಒಟ್ಟು 1.70 ಟಿಎಂಸಿ ಅಡಿಯಷ್ಟು ನೀರನ್ನು ಕಾಲುವೆಗೆ ಹರಿಬಿಡಲಾಗುವುದು. ನೀರು ಐಬಿಸಿ, ಎಸ್‌ಬಿಸಿ, ಐಎಲ್‌ಸಿ ಶಾಖಾ ಕಾಲುವೆಗಳಿಗೆ ಹರಿದು ಆಯಾ ಕಾಲುವೆ ಜಾಲಗಳಿಂದ ಕೆರೆಗಳಿಗೆ, ಬಹು ಹಳ್ಳಿ ಕುಡಿಯುವ ನೀರಿನ ಯೋಜನಾ ಸ್ಥಾವರಗಳ ಮೂಲಕ ಉದ್ದೇಶಿತ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಬಾರ ಎಇಇ ವಿಜಯಕುಮಾರ ಅರಳಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.