ADVERTISEMENT

ಪರಿಶಿಷ್ಟರ ಬಡಾವಣೆಯಲ್ಲಿ ನೀರಿಗೆ ತತ್ವಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 14:56 IST
Last Updated 3 ಜುಲೈ 2025, 14:56 IST
ಸುರಪುರ ತಾಲ್ಲೂಕಿನ ಮಂಗಿಹಾಳ ಗ್ರಾಮದ ಪರಿಶಿಷ್ಟರ ಬಡಾವಣೆಯ ಜನರು ಕೆಟ್ಟುಹೋದ ಕೊಳವೆಬಾವಿ ಮುಂದೆ ಗುರುವಾರ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು
ಸುರಪುರ ತಾಲ್ಲೂಕಿನ ಮಂಗಿಹಾಳ ಗ್ರಾಮದ ಪರಿಶಿಷ್ಟರ ಬಡಾವಣೆಯ ಜನರು ಕೆಟ್ಟುಹೋದ ಕೊಳವೆಬಾವಿ ಮುಂದೆ ಗುರುವಾರ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು   

ಸುರಪುರ: ತಾಲ್ಲೂಕಿನ ಮಂಗಿಹಾಳ ಗ್ರಾಮದ ದಲಿತ ಬಡಾವಣೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಗುರುವಾರ ಕೆಟ್ಟು ಹೋಗಿರುವ ಕೊಳವೆಬಾವಿ ಮುಂದೆ ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ಗ್ರಾಮದ ಹಿರಿಯರಾದ ಮಲ್ಲಮ್ಮ ಮಾತನಾಡಿ, ‘ಸುಮಾರು ದಿನಗಳಿಂದ ಕೊಳೆಬಾವಿ ಕೆಟ್ಟು ಹೋಗಿದೆ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ದುರಸ್ತಿ ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಅನೇಕ ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

‘ಬಡಾವಣೆಯಲ್ಲಿ ಒಂದೇ ಕೊಳವೆಬಾವಿ ಇದೆ. ಚರಂಡಿ ನಿರ್ಮಿಸಿಲ್ಲ. ಮಳೆ ನೀರಿನಿಂದ ಕೆಸರು ಗದ್ದೆಯಂತಾಗಿದೆ. ತಗ್ಗು ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಕೂಡಲೇ ಸ್ವಚ್ಛತೆಗೆ ಗಮನ ಹರಿಸಬೇಕು. ಕೊಳವೆಬಾವಿ ದುರಸ್ತಿ ಮಾಡಬೇಕು’ ಎಂದು ಒತ್ತಾಯಿಸಿದರು

ADVERTISEMENT

ದುರ್ಗಮ್ಮ, ನಾಗಮ್ಮ ಅರಿಕೇರಿ, ಮರೆಮ್ಮ, ನಾಗರತ್ನಾ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.