ಯಾದಗಿರಿ: ಯಾದಗಿರಿ ಜಾಲತಾಣದಲ್ಲಿ ತಪ್ಪು ತಪ್ಪಾಗಿ ಪ್ರಕಟವಾಗಿದ್ದ ತಾಲ್ಲೂಕು, ಅಧಿಕಾರಿಗಳ ಹೆಸರುಗಳನ್ನು ಬದಲಾವಣೆ ಮಾಡಲಾಗಿದೆ.
ನವೆಂಬರ್ 11ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ನವೀಕರಿಸದ ‘ಅಧಿಕಾರಿ ಸಂಪರ್ಕ ಕೋಶ’ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ಬುಧವಾರ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದ ಜಿಲ್ಲಾಡಳಿತ ಅಧಿಕಾರಿಗಳು ತಾಲ್ಲೂಕು ಹೆಸರುಗಳನ್ನು ಸರಿಪಡಿಸಿದ್ದಾರೆ. ಅಲ್ಲದೆ ಅಧಿಕಾರಿಗಳ ಅಪಾರ್ಥ ಹೆಸರುಗಳನ್ನು ತಿದ್ದಿದ್ದಾರೆ.
ಜಿಲ್ಲಾಡಳಿತದ ಅಧಿಕಾರಿಗಳೇ ನೇರವಾಗಿ ‘ಪ್ರಜಾವಾಣಿ’ ಪ್ರತಿನಿಧಿಗೆ ಕರೆ ಮಾಡಿ ಕಾಲಕಾಲಕ್ಕೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಹೆಸರುಗಳು ಬದಲು: ವರ್ಗಾವಣೆ ಆಗಿದ್ದರೂ ಜಾಲತಾಣದಲ್ಲಿ ಅವರ ಹೆಸರು ಇರುವ ಕುರಿತು ವರದಿಯಲ್ಲಿ ಅಧಿಕಾರಿಗಳ ಗಮನ ಸೆಳೆದಿತ್ತು. ಇದರಿಂದ ಬುಧವಾರ ಮಧ್ಯಾಹ್ನಕ್ಕೆಲ್ಲ ಸದ್ಯಕ್ಕೆ ಆಡಳಿತ ನಡೆಸುವ ಆಯಾ ತಾಲ್ಲೂಕುಗಳ ತಹಶೀಲ್ದಾರ್ ಹೆಸರುಗಳನ್ನು ಸರಿಪಡಿಸಲಾಗಿದೆ. ಇದರಿಂದ ಕೊಂಚ ಮಟ್ಟಿಗೆ ಸಾರ್ವಜನಿಕರ ಗೊಂದಲ ನಿವಾರಣೆ ಆದಂತೆ ಆಗಿದೆ.
ಸದ್ಯಕ್ಕೆ ಉಪವಿಭಾಗಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಡಿಪಿಯುಹೆಸರು, ಜಿಲ್ಲಾ ಮಲೇರಿಯಾ ಅಧಿಕಾರಿ ಊರಿನ ಹೆಸರು ಸರಿಯಾಗಿ ಬರೆಯಲಾಗಿದೆ. ಇನ್ನೂ ಹಲವು ಅಧಿಕಾರಿಗಳ ಹೆಸರು ಬದಲಾವಣೆ ಮಾಡಬೇಕಾಗಿದೆ. ಕನ್ನಡ ಭಾಷೆಯನ್ನು ಸರಿಯಾಗಿ ಬರೆಯದ ಅಧಿಕಾರಿಗಳ ವಿರುದ್ಧ ಓದುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್
ತಿಂಗಳಲ್ಲಿ ಕನ್ನಡ ಭಾಷೆಯ ಕೊಲೆ ಮಾಡುವ ರೀತಿಯಲ್ಲಿ ಅಕ್ಷರಗಳನ್ನು ಬಳಸಿರುವುದಕ್ಕೆ ಕನ್ನಡಪರ ಸಂಘಟನೆಗಳು ಸರಿಯಾಗಿ ಜಾಲತಾಣದಲ್ಲಿ ಕನ್ನಡ ಬರೆಯಲು ಆಗ್ರಹಿಸಿದ್ದಾರೆ.
ವರ್ಗಾವಣೆ ಆದವರ ಪಟ್ಟಿ ಮಾಡಿ ಅವರ ಜಾಗಕ್ಕೆ ಬಂದವರನ್ನು ಹೆಸರುಗಳನ್ನು ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳಿಂದ ತಿಳಿದುಬಂದಿದೆ.
***
ನಮ್ಮ ಗಮನಕ್ಕೆ ತಂದಿದ್ದರಿಂದ ಜಾಲತಾಣವನ್ನು ನವೀಕರಿಸಲಾಗಿದೆ. ಮುಂದೆಯೂ ಸರಿಪಡಿಸಲಾಗುತ್ತಿದೆ
ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.