ADVERTISEMENT

ಹೆಣ್ಣುಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ರಾಷ್ಟ್ರೀಯ ಐಕ್ಯತಾ ಸಪ್ತಾಹ; ನ್ಯಾ.ಕುನ್ನಿಭಾವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 7:27 IST
Last Updated 28 ನವೆಂಬರ್ 2022, 7:27 IST
ಯಾದಗಿರಿಯಲ್ಲಿ ಜರುಗಿದ ರಾಷ್ಟ್ರೀಯ ಐಕ್ಯತಾ ದಿನ ಹಾಗೂ ಮಹಿಳಾ ದಿನ ಕಾರ್ಯಕ್ರಮದಲ್ಲಿ ನ್ಯಾ.ಸಾಹೀಲ್ ಅಹ್ಮದ್ ಕುನ್ನಿಭಾವಿ ಮಾತನಾಡಿದರು
ಯಾದಗಿರಿಯಲ್ಲಿ ಜರುಗಿದ ರಾಷ್ಟ್ರೀಯ ಐಕ್ಯತಾ ದಿನ ಹಾಗೂ ಮಹಿಳಾ ದಿನ ಕಾರ್ಯಕ್ರಮದಲ್ಲಿ ನ್ಯಾ.ಸಾಹೀಲ್ ಅಹ್ಮದ್ ಕುನ್ನಿಭಾವಿ ಮಾತನಾಡಿದರು   

ಯಾದಗಿರಿ: ‘ಹೆಣ್ಣು ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿ ಮಹಿಳೆಯೂ ಸಂವಿಧಾನಿಕವಾದ ಅವಕಾಶಗಳ ಬಗ್ಗೆ ಅರಿತು ಅವುಗಳ ಸದ್ಬಳಕೆಯಿಂದ ಸ್ವಾವಲಂಭಿ ಮತ್ತು ಸಬಲತೆ ಸಾಧಿಸಬೇಕಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ನ್ಯಾ.ಸಾಹೀಲ್ ಅಹ್ಮದ್ ಎಸ್.ಕುನ್ನಿಭಾವಿ ಸಲಹೆ ನೀಡಿದರು.

ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಹ ಹಾಗೂ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಸಮಗ್ರ ಸಬಲೀಕರಣ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಭಾಕರ, ಜಿಲ್ಲಾ ನಿರೂಪಣಾಧಿಕಾರಿಗಳು ಪ್ರೇಮಮೂರ್ತಿ ಮಾತನಾಡಿ, ಯಾವುದೇ ಸಮಸ್ಯೆಗೆ 112ಕ್ಕೆ ಕರೆ ಮಾಡುವುದು, ಮಹಿಳಾದಿನದ ಮಹತ್ವ, ಸ್ಥಳೀಯ ದೂರು ಸಮಿತಿ ರಚನೆ ಮತ್ತು ಕಾರ್ಯಗಳ ಕುರಿತು ವಿವರಿಸಿದರು.

ADVERTISEMENT

ಸಿಡಿಪಿಒ ಲಾಲ್ ಸಾಬ್ ಪಿರಾಪೂರ, ವಕೀಲೆ ನಿರ್ಮಲ ಎಸ್.ಹೂಗಾರ, ಕಾನೂನು ಸಲಹೆಗಾರರು ಲತಾ, ಜಿಲ್ಲಾ ಕಾರ್ಯಕ್ರಮ ಸಹಾಯಕಿ ಆಶಾ ಬೇಗಂ, ಸಖಿ ಕೇಂದ್ರದ ಸಿಬ್ಬಂದಿ ಹಾಗೂ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಇದ್ದರು.

ಜಿಲ್ಲಾ ಸಂಯೋಜಕರು ಯಲ್ಲಪ್ಪ ಕುಂಚಾವರಂ ನಿರ್ವಹಿಸಿ, ಮೇಲ್ವಿಚಾರಕಿ ಉಷಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.