ADVERTISEMENT

ಯಾದಗಿರಿ: ರಥ ಮುರಿದು ನಾಲ್ವರಿಗೆ ಗಾಯ 

ಬಳಿಚಕ್ರ ಗ್ರಾಮದಲ್ಲಿ ಭಕ್ತಿಲಿಂಗೇಶ್ವರ ರಥೋತ್ಸವದ ವೇಳೆ ದುರ್ಘಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 17:14 IST
Last Updated 17 ಏಪ್ರಿಲ್ 2021, 17:14 IST
   

ಯಾದಗಿರಿ: ತಾಲ್ಲೂಕಿನ ಬಳಿಚಕ್ರ ಗ್ರಾಮದಲ್ಲಿ ಭಕ್ತಿಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ರಥೋತ್ಸವದ ವೇಳೆ ರಥ ಅರ್ಧಕ್ಕೆ ಮುರಿದು ಬಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ನಾಲ್ವರಲ್ಲಿ ಇಬ್ಬರಿಗೆ ಗಂಭೀರ ಗಾಯಾಗಳಾಗಿದ್ದು, ಅವರನ್ನು ರಾಯಚೂರಿನ ಬಾಲಂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಭಕ್ತಿಲಿಂಗೇಶ್ವರ 15ನೇ ಜಾತ್ರಾ ಮಹೋತ್ಸವದಲ್ಲಿ 6 ಗಾಲಿಯ ರಥೋತ್ಸವ ನಡೆಯುತಿತ್ತು. ನೂರಾರು ಜನರು ರಥ ಎಳೆಯುತ್ತಿದ್ದರು. ಸ್ವಲ್ವ ದೂರ ಎಳೆದ ನಂತರ ರಥದ ಮೇಲ್ಭಾಗ ಮುರಿದು ಬಿದ್ದಿದೆ.

ADVERTISEMENT

‘ರಥ ತುಕ್ಕು ಹಿಡಿದಿರುವುದನ್ನು ಗಮನಿಸದೆ ಭಕ್ತರು ವೇಗವಾಗಿ ಎಳೆದ ಪರಿಣಾಮವಾಗಿ ಈ ದುರಂತ ನಡೆದಿದೆ’ ಎಂದು ಗ್ರಾಮದ ಭಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.