ಎಫ್ಐಆರ್
ಶಹಾಪುರ: ನಗರದ ಹಳಿಸಗರದ ಸೈದರ ಓಣಿಯಲ್ಲಿ ಮಂಗಳವಾರ ಅಲಾಯಿ ದೇವರು ಕೂಡಿಸುವ ವಿಚಾರದಲ್ಲಿ ನಾಯಕ ಹಾಗೂ ಕಬ್ಬಲಿಗ ಸಮುದಾಯದ ಕೆಲವು ಜನರು ಸಣ್ಣಪುಟ್ಟ ಜಗಳ ಮಾಡಿಕೊಂಡ ಬಗ್ಗೆ ಶುಕ್ರವಾರ ರಾಘವೇಂದ್ರ ಎಂಬುವವರು ಸೇರಿದಂತೆ 34 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೊಹರಂ ಹಬ್ಬದ ನಿಮಿತ್ಯ ಅಲಾಯಿ ದೇವರು (ಪೀರಾಗಳು) ಕೂಡಿಸುವ ಸಮಯದಲ್ಲಿ ಎಸ್.ಟಿ ಜನಾಂಗ(ನಾಯಕ) ಹಾಗೂ ಕಬ್ಬಲಿಗ ಜನಾಂಗದ ಕೆಲವರು ಸ್ವಪ್ರತಿಷ್ಠೆಗಾಗಿ ಒಬ್ಬರಿಗೊಬ್ಬರು ಸಣ್ಣಪುಟ್ಟ ಜಗಳ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದಿರುತ್ತದೆ ಎಂದು ಸರ್ಕಾರದ ಪರವಾಗಿ ಶಹಾಪುರ ಠಾಣೆಯ ಪಿಎಸ್‌ಐ ಡಿ.ವಿ ನಾಯಕ ದೂರಿನಲ್ಲಿ ತಿಳಿಸಿದ್ದಾರೆ.
ಶಹಾಪುರ ಠಾಣೆಯಲ್ಲಿ ಕಲಂ 194(2) ಬಿ.ಎನ್ ಎಸ್ -2023 ಅಡಿಯಲ್ಲಿ (ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಮಾಡುವುದು) ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.