ADVERTISEMENT

ಯಾದಗಿರಿ: ಚರ್ಚ್‌ಗಳಲ್ಲಿ ವೆಲ್‌ಕಮ್‌ ಕ್ರಿಸ್‌ಮಸ್‌ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 4:52 IST
Last Updated 3 ಡಿಸೆಂಬರ್ 2021, 4:52 IST
ಯಾದಗಿರಿಯ ಕೇಂದ್ರ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ‘ವೆಲ್‌ಕಮ್‌ ಕ್ರಿಸ್‌ಮಸ್‌’ ಅಂಗವಾಗಿ ಮಕ್ಕಳು ಸಂಟಾಕ್ಲಾಸ್‌ ಉಡುಗೆ ಧರಿಸಿ ಆಕರ್ಷಕ ನೃತ್ಯ ಮಾಡಿದರು
ಯಾದಗಿರಿಯ ಕೇಂದ್ರ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ‘ವೆಲ್‌ಕಮ್‌ ಕ್ರಿಸ್‌ಮಸ್‌’ ಅಂಗವಾಗಿ ಮಕ್ಕಳು ಸಂಟಾಕ್ಲಾಸ್‌ ಉಡುಗೆ ಧರಿಸಿ ಆಕರ್ಷಕ ನೃತ್ಯ ಮಾಡಿದರು   

ಯಾದಗಿರಿ: ನಗರ ಸೇರಿ ಜಿಲ್ಲೆಯಲ್ಲಿ ಬುಧವಾರ ವಿವಿಧ ಚರ್ಚ್‌ಗಳಲ್ಲಿ ‘ವೆಲ್‌ಕಮ್‌ ಕ್ರಿಸ್‌ಮಸ್‌’ ಸಂಭ್ರಮ ಆಚರಿಸಲಾಯಿತು.

ನಗರದ ಪ್ರಮುಖ ಚರ್ಚ್‌ಗಳಾದ ಕೇಂದ್ರ ಮೆಥೋಡಿಸ್ಟ್‌ ದೇವಾಲಯ, ತಾತಾ ಸಿಮೆಂಡ್‌ ಸ್ಮಾರಕ ಚರ್ಚ್‌, ಅಂಬೇಡ್ಕರ್‌ ನಗರದ ಮೆಥೋಡಿಸ್ಟ್‌ ಚರ್ಚ್‌ಗಳಲ್ಲಿ ಕೆಕ್‌ ಕತ್ತರಿಸಿ ಹಬ್ಬವನ್ನು ಸ್ವಾಗತಿಸಲಾಯಿತು. ಸ್ವತಂತ್ರ ಚರ್ಚ್‌ಗಳಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಕೆಲ ಚರ್ಚ್‌ಗಳಲ್ಲಿ ಬೆಳಿಗ್ಗೆಯಿಂದಲೇ ಕ್ರಿಸ್‌ಮಸ್‌ಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮ ನಡೆದವು.

ಮಕ್ಕಳಿಂದ ನೃತ್ಯ: ಪ್ರತಿ ವರ್ಷ ಡಿಸೆಂಬರ್ 1ರಂದು ಕ್ರಿಸ್‌ಹಬ್ಬವನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರಂತೆ ವಿವಿಧ ಚರ್ಚ್‌ಗಳಲ್ಲಿ ಮಕ್ಕಳಿಂದ ಸಾಮೂಹಿಕ ನೃತ್ಯ ನಡೆಯಿತು. ಒಂದೇ ವಿಧವಾದ ಬಟ್ಟೆ ಧರಿಸಿ ಮಕ್ಕಳು ಆಕರ್ಷಕ ನೃತ್ಯ ಮಾಡಿದರು. ಸಂಟಾಕ್ಲಾಸ್‌ ಉಡುಗೆ ಧರಿಸಿ ದೊಡ್ಡವರು ಆಕರ್ಷಿಸಿದರು. ಇದಾದ ನಂತರ ಪರಸ್ಪರ ಕ್ರಿಸ್‌ಮಸ್‌ ಹಬ್ಬದ ಶುಭಾಶಯಗಳನ್ನು ಪರಸ್ಪರ ಕೋರಿದರು.

ADVERTISEMENT

ಕೆಲವೆಡೆ ಕೇಕ್‌ ಕತ್ತರಿಸಿ, ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿತ್ತು. ಧರ್ಮ ಗುರುಗಳು ಕ್ರಿಸ್‌ಮಸ್‌ ಹಿನ್ನೆಲೆ, ಆಚರಣೆ ಬಗ್ಗೆ ಭಕ್ತರಿಗೆ ಮಾಹಿತಿ ನೀಡಿದರು. ಕೇಂದ್ರ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮೇಲ್ವಿಚಾರಕ ರೆವ ಸತ್ಯಮಿತ್ರ, ಯೇಸುಮಿತ್ರ ಸೇರಿದಂತೆ ಭಕ್ತರು ಭಾಗಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.