ಬಂಧನ
(ಪ್ರಾತಿನಿಧಿಕ ಚಿತ್ರ)
ಶಹಾಪುರ (ಯಾದಗಿರಿ ಜಿಲ್ಲೆ): ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಜೆಎಂಎಫ್‌ಸಿ ಕೋರ್ಟ್ ಶುಕ್ರವಾರ ಸಿಆರ್‌ಪಿಎಫ್ ಯೋಧ ಸೇರಿ ಮೂವರಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹28 ಸಾವಿರ ದಂಡ ಶುಕ್ರವಾರ ವಿಧಿಸಿದೆ.
ನಗರದ ನಿವಾಸಿ, ಪ್ರಸ್ತುತ ತ್ರಿಪುರಾದ ಅಮಬಾಸ್‌ನ 140 ಬೆಟಾಲಿಯನ್‌ನ ಸಿಆರ್‌ಪಿಎಫ್ ಯೋಧ ಮಹ್ಮಮದ್ ಶಕೀಲ್, ಖಲೀಲ್ ಅಹಮದ್ ಹಾಗೂ ಇಮಾಂಬಿ ಶೇಖ್ ಶಿಕ್ಷೆಗೆ ಒಳಗಾದವರು.
ಕೃಷಿ ಇಲಾಖೆಯಲ್ಲಿ ಬೆರಳಚ್ಚುಗಾರ್ತಿ ಆಗಿರುವ ನಿಶರತ್ ವರದಕ್ಷಿಣೆ ಕಿರುಕುಳ ಆರೋಪದಡಿ ಶಹಾಪುರ ಪೊಲೀಸ್ ಠಾಣೆಯಲ್ಲಿ 2020ರ ಮಾರ್ಚ್‌ನಲ್ಲಿ ದೂರು ದಾಖಲಿಸಿದ್ದರು.
ಆಗಿನ ಪಿಐ ಹನುಮರೆಡ್ಡಪ್ಪ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಶೋಭಾ ಆದೇಶ ಪ್ರಕಟಿಸಿದರು ದೂರುದಾರರ ಪರ ಎಪಿಪಿ ದಿವ್ಯಾರಾಣಿ ನಾಯಕ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.