ADVERTISEMENT

ಯಾದಗಿರಿ: ಸಿರಿಧಾನ್ಯ ಮೌಲ್ಯವರ್ಧನೆ ತರಬೇತಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:10 IST
Last Updated 31 ಜನವರಿ 2026, 6:10 IST
ಯಾದಗಿರಿ ತಾಲ್ಲೂಕಿನ ಠಾಣಗುಂದ ಗ್ರಾಮದಲ್ಲಿ ಈಚೆಗೆ ನಡೆದ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರು
ಯಾದಗಿರಿ ತಾಲ್ಲೂಕಿನ ಠಾಣಗುಂದ ಗ್ರಾಮದಲ್ಲಿ ಈಚೆಗೆ ನಡೆದ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರು   

ಯಾದಗಿರಿ: ಐಸಿಎಆರ್ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ವತಿಯಿಂದ ತಾಲ್ಲೂಕಿನ ಠಾಣಗುಂದ ಗ್ರಾಮದಲ್ಲಿ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವ್ಯವಸ್ಥೆ ಕುರಿತು ರೈತರಿಗೆ ತರಬೇತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಕೃಷಿ ಪರಿಕರಗಳ ವಿತರಣೆ ಕಾರ್ಯಕ್ರಮ ಈಚೆಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಕೃಷಿ ಮಹಾವಿದ್ಯಾಲಯದ ಡೀನ್ ಶಾಮರಾವ್ ಜಾಗೀರದಾರ ಮಾತನಾಡಿ, ‘ರೈತ ಉತ್ಪಾದಕ ಸಂಸ್ಥೆಯಿಂದ 55 ರೈತರನ್ನು ಆಯ್ಕೆ ಮಾಡಿ, ಸಿರಿಧಾನ್ಯ ಸಂಸ್ಕರಣಾ ಮತ್ತು ಮೌಲ್ಯವರ್ಧನೆ ತರಬೇತಿ ನೀಡಿ ಕೃಷಿಯಲ್ಲಿ ಉದ್ಯಮಶೀಲತೆ ವೃದ್ಧಿಸುವುದು ಉದ್ದೇಶ ಇರಿಸಿಕೊಳ್ಳಲಾಗಿದೆ’ ಎಂದರು.

‘ಸಿರಿಧಾನ್ಯಗಳು ಪೌಷ್ಟಿಕ ಮೌಲ್ಯ ಹೊಂದಿದ್ದು, ದೇಹದ ಆರೋಗ್ಯವನ್ನು ಕಾಪಾಡುತ್ತವೆ’ ಎಂದು ಹೇಳಿದರು.

ADVERTISEMENT

ಪ್ರಾಧ್ಯಾಪಕ ಡಿ .ಜಿ. ಸಾತಿಹಾಳ ಮಾತನಾಡಿ, ‘ಸಿರಿಧಾನ್ಯಗಳ ಬೇಸಾಯದಿಂದ ಲಾಭ ಮತ್ತು ಬೇರೆ ಬೆಳೆಗಳಿಗೆ ಹೋಲಿಸಿದರೆ ಖರ್ಚು ಕಡಿಮೆ ಇದೆ’ ಎಂದರು.

ಸಹ ಪ್ರಾಧ್ಯಾಪಕ ಶ್ಯಾಮರಾವ್ ಕುಲಕರ್ಣಿ ಮಾತನಾಡಿ, ‘ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ರೋಗಗಳು ಹೆಚ್ಚುತ್ತಿವೆ. ರೋಗಗಳ ನಿಯಂತ್ರಣಕ್ಕೆ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ತಿನ್ನಬೇಕು’ ಎಂದು ಹೇಳಿದರು.

ಪ್ರಾಧ್ಯಾಪಕ ಜಿ.ಸಿ.ಶೇಖರ್ ಮಾತನಾಡಿದರು. ಕಂಪನಿ ನಿರ್ದೇಶಕರಾದ ಮನೋಜ್ ಸುಬೇದಾರ್, ವಿನೋದ ಪಡಿಶೆಟ್ಟಿ, ಸಚಿನ್ ಕೊರಿಶೆಟ್ಟಿ, ಸಂಸ್ಥೆಯ ಸಿಬ್ಬಂದಿ ಕೈಲಾಸ್, ಅಬ್ಬು ಸೇಠ್, ಅನೂಪ್, ಗ್ರಾಮಸ್ಥರಾದ ಪ್ರಭು ಸಾಹುಕಾರ, ಗೋವಿಂದ ಮೂಲಿಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.