ADVERTISEMENT

‘ಬ್ಯಾಂಕ್ ಬಡವರಿಗೆ ಆರ್ಥಿಕ ಶಕ್ತಿ ತುಂಬಲಿ’

ಗ್ರಾಹಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಿ: ಚಿಂಚನಸೂರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 12:20 IST
Last Updated 29 ಅಕ್ಟೋಬರ್ 2019, 12:20 IST
ಯಾದಗಿರಿಯಲ್ಲಿ ಅಮೃತ ಮಾಣಿಕ್ಯ ಸೌಹಾರ್ದ ಸಹಕಾರಿ ಬ್ಯಾಂಕ್‍ ಅನ್ನು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಉದ್ಘಾಟಿಸಿದರು
ಯಾದಗಿರಿಯಲ್ಲಿ ಅಮೃತ ಮಾಣಿಕ್ಯ ಸೌಹಾರ್ದ ಸಹಕಾರಿ ಬ್ಯಾಂಕ್‍ ಅನ್ನು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಉದ್ಘಾಟಿಸಿದರು   

ಯಾದಗಿರಿ: ‘ಅಮೃತ ಮಾಣಿಕ್ಯ ಸೌಹಾರ್ದ ಸಹಕಾರಿ ಬ್ಯಾಂಕ್ ಬಡವರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುವ ಮೂಲಕ ಆರ್ಥಿಕ ಶಕ್ತಿ ತುಂಬಲಿ’ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.

ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅಮೃತ ಮಾಣಿಕ್ಯ ಸೌಹಾರ್ದ ಸಹಕಾರಿ ಬ್ಯಾಂಕ್‍ನ್ನು ಉದ್ಘಾಟಿಸಿ ಮಾತನಾಡಿದರು.

’ಆಡಳಿತ ಮಂಡಳಿಯವರು ಗ್ರಾಹಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಆರ್ಥಿಕ ವಹಿವಾಟು ನಡೆಸಿ ಎಲ್ಲರ ವಿಶ್ವಾಸದೊಂದಿಗೆ ಆರ್ಥಿಕವಾಗಿ ಬದಲಾವಣೆಯಾಗಲಿ. ಬೀದರ್‌ನಲ್ಲಿ ನನ್ನ ಪತ್ನಿ ಅಮರೇಶ್ವರಿ ಚಿಂಚನಸೂರ ನೇತೃತ್ವದಲ್ಲಿ ಮಹಿಳಾ ಸಹಕಾರ ಸಂಘ ಹಲವಾರು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ₹200 ಕೋಟಿ ವಹಿವಾಟು ನಡೆಸಿ ಎಲ್ಲರ ಗಮನ ಸೆಳೆದಿದೆ’ ಎಂದರು.

ADVERTISEMENT

‘ಸಾಲ ವಸೂಲಾತಿಯಲ್ಲಿ ಹಿಂದೆ ಬೀಳಬಾರದು. ಯಾರಿಗೆ ಸಾಲ ನೀಡಬೇಕು ಎನ್ನುವುದನ್ನು ವಿವೇಚಿಸಿಕೊಂಡು ನೀಡಬೇಕು. ಸಹಕಾರಿ ಬ್ಯಾಂಕ್‌ ಮುಂದೆ ರಾಷ್ಟ್ರೀಯ ಬ್ಯಾಂಕ್‌ ವಹಿವಾಟಿನಂತೆ ಬೆಳೆಯಲಿ’ ಎಂದು ಶುಭ ಹಾರೈಸಿದರು.

ಶಾಸಕ ವೆಂಕಟರಡ್ಡಿ ಮುದ್ನಾಳ ಮಾತನಾಡಿ, ‘ಬ್ಯಾಂಕ್‌ಗಳಿಂದ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ಸಾಧ್ಯವಾಗಿದೆ. ಆಡಳಿತ ಮಂಡಳಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಿಕೊಳ್ಳುವ ಮೂಲಕ ಬ್ಯಾಂಕ್ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಬ್ಯಾಂಕ್‍ನ ಅಧ್ಯಕ್ಷ ಹಣಮಂತ ಮಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಪ್ಪ ಯಲಸತ್ತಿ, ಮೋಹನ ಬಾಬು, ಸಿ.ಎಂ.ಪಟ್ಟೆದಾರ, ಮೂರ್ತಿ ಅನಪುರ, ಆಡಳಿತ ಮಂಡಳಿಯ ಉಪಾಧ್ಯಕ್ಷ ಬಸವರಾಜಪ್ಪ ಬಾಗ್ಲಿ, ಸಣ್ಣ ಹಣಮಂತಪ್ಪ ಬಳಿಚಕ್ರ, ಶರಣಪ್ಪ ಮೋಟ್ನಳ್ಳಿ, ಆಶಪ್ಪ ಸುಕಾಂರ್, ನರಸಪ್ಪ ಇದ್ಲಿ, ಶಶಿಕಲಾ ಶರಣಪ್ಪ ಹಂದರಕಿ, ಸುರೇಶ ಮಡ್ಡಿ, ಸಿದ್ದಣಗೌಡ ಕಾಡಂನೋರ, ದೇವಿಂದ್ರಪ್ಪ ಬೇಸ್ತ, ಶಂಕರ ಗೋಶಿ, ಮಲ್ಲಪ್ಪ ಬಡಿಗೇರ, ಜಗದೀಶ ಅಬ್ಬೆತುಮಕೂರ, ಅನಂತಪ್ಪ ಯದ್ಲಾಪುರ, ಚಂದಪ್ಪ ಕಾವಲಿ, ಮಲಪ್ಪ ಹೊನಗೇರಾ ಹಾಗೂ ಮೇಘರಾಜ ಪಟ್ಟೆದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.