ADVERTISEMENT

ಯೋಗದಿಂದ ಆರೋಗ್ಯ ಸದೃಢ: ಶಾಸಕ ರಾಜೂಗೌಡ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 13:18 IST
Last Updated 22 ಜೂನ್ 2021, 13:18 IST
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಶಾಸಕ ರಾಜೂಗೌಡ ತಮ್ಮ ನಿವಾಸದಲ್ಲಿ ಯೋಗ ಮಾಡಿದರು
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಶಾಸಕ ರಾಜೂಗೌಡ ತಮ್ಮ ನಿವಾಸದಲ್ಲಿ ಯೋಗ ಮಾಡಿದರು   

ಸುರಪುರ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶಾಸಕ ರಾಜೂಗೌಡ ಅವರು ತಮ್ಮ ನಿವಾಸದಲ್ಲಿ ಸೋಮವಾರ ತಮ್ಮ ಪುತ್ರ ಮಣಿಕಂಠ ಅವರೊಂದಿಗೆ ಯೋಗ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.

'ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ ಬ್ರಹ್ಮಾಸ್ತ್ರವಿದ್ದಂತೆ. ಸದೃಢ ಆರೋಗ್ಯದೊಂದಿಗೆ ಬುದ್ಧಿ ಮತ್ತು ಮನಸ್ಸನ್ನು ಏಕಾಗೃತೆಯಲ್ಲಿಡುತ್ತದೆ. ಆರೋಗ್ಯ ಚೆನ್ನಾಗಿದ್ದಲ್ಲಿ ನಾವು ಏನನ್ನಾದರೂ ಸಾಧಿಸಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಯೋಗಭ್ಯಾಸ ಮಾಡಿ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು' ಎಂದರು

'ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ಭಾರತ. ಹೀಗಾಗಿ ಇದು ನಮ್ಮ ಪರಂಪರೆಯ ಪ್ರತೀಕವಾಗಿದೆ. ಋಷಿ ಮುನಿಗಳು ಸೇರಿದಂತೆ ಆದಿಕಾಲದಿಂದಲೂ ಈ ಪರಂಪರೆಯನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ದಿನದ ಒಂದಿಷ್ಟು ಸಮುಯನ್ನು ಯೋಗಕ್ಕೆ ಮೀಸಲಿಡಬೇಕು. ಪ್ರತಿ ದಿನವೂ ತಪ್ಪದೆ ಯೋಗ ಮಾಡಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ಸಲಹೆ ನೀಡಿದರು.

ADVERTISEMENT

ಬಿಜೆಪಿ ಸುರಪುರ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ. ಜಿ.ಪಂ ಸದಸ್ಯ ಬಸಯ್ಯ ಸ್ವಾಮಿ, ಮಾಜಿ ಸದಸ್ಯ ಎಚ್.ಸಿ.ಪಾಟೀಲ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.