ADVERTISEMENT

ಪದವಿ ವಿದ್ಯಾರ್ಹತೆ | RBIನಲ್ಲಿ 294 ಗ್ರೇಡ್‌ ಬಿ ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 11:49 IST
Last Updated 23 ಮಾರ್ಚ್ 2022, 11:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗ್ರೇಡ್‌ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ: 294

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಈ ಮಾಹಿತಿಗೆ ವೆಬ್‌ಸೈಟ್‌ ನೋಡುವುದು.

ADVERTISEMENT

ವೇತನ ಶ್ರೇಣಿ: ವಿವಿಧ ಭತ್ಯೆಗಳು ಸೇರಿದಂತೆ ಮಾಸಿಕ₹ 83,254 ವೇತನ ನೀಡಲಾಗುವುದು ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 30

ವಯೋಮಿತಿ ಸಡಿಲಿಕೆ

ಎಸ್‌ಸಿ/ಎಸ್‌ಟಿ: 5 ವರ್ಷಗಳು

ಒಬಿಸಿ: 3 ವರ್ಷಗಳು

ಅಂಗವಿಕಲರು 10 ವರ್ಷಗಳು

ನೇಮಕಾತಿ: ನೇಮಕಾತಿ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯುವುತ್ತದೆ. ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ ರಾಜ್ಯದ ಬೆಂಗಳೂರಿನಲ್ಲೂ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ www.rbi.org.in ಗೆ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಕಡೆಯ ದಿನಾಂಕ: 18–04–2022

ಹೆಚ್ಚಿನ ಮಾಹಿತಿಗೆ: https://www.rbi.org.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.