ADVERTISEMENT

ಜಿಸಿಐಎಲ್ ಅಪ್ರೆಂಟಿಸ್‌ಷಿಪ್‌ಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 23:45 IST
Last Updated 25 ಡಿಸೆಂಬರ್ 2022, 23:45 IST
   

ಜಿಸಿಐಎಲ್ ಅಪ್ರೆಂಟಿಸ್‌ಷಿಪ್‌ಗೆ ಅರ್ಜಿ ಆಹ್ವಾನ

ಗ್ರಿಡ್‌ ಕಂಟ್ರೋಲರ್ ಆಫ್ ಇಂಡಿಯಾ ಲಿಮಿಟೆಡ್‌(ಜಿಸಿಐಎಲ್‌- ಕೇಂದ್ರ ವಿದ್ಯತ್ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಂಪನಿ) ಕಂಪನಿಯು ಬಿ.ಇ/ಬಿ.ಟೆಕ್‌ ಪದವಿಧರರಿಂದ ಅಪ್ರೆಂಟಿಸ್‌ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.

ಅರ್ಹತೆ: ಭಾರತ ಸರ್ಕಾರದ ಎಐಸಿಟಿಐನಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಯಲ್ಲಿ ಬಿ.ಇ/ಬಿ.ಟೆಕ್‌ – ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ವಿಷಯದಲ್ಲಿ ಪದವಿ ಪಡೆದಿರಬೇಕು. ಒಂದು ವರ್ಷ ಯಾವುದೇ ಕಂಪನಿಯಲ್ಲಿ ಅಪ್ರೆಂಟಿಸ್‌ ತರಬೇತಿ ಪೂರ್ಣಗೊಳಿಸಿರಬೇಕು.‌

ADVERTISEMENT

ಆರ್ಥಿಕ ನೆರವು: ಮಾಸಿಕ ₹15 ಸಾವಿರ ಸ್ಟೈಫಂಡ್‌

ಅರ್ಜಿ ಸಲ್ಲಿಕೆಗೆ ಕೊನೆ ದಿನ: 08/01/2022

ಅರ್ಜಿ ಸಲ್ಲಿಕೆ ವಿಧಾನ:nerldchr@posoco.in; nerldchr@grid-india.in – ಈ ಮೇಲ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ: www.b4s.in/praja/GPIL2

––––––––

ಇಂಡಿಯಾ ಫೆಲೊ ಸೋಷಿಯಲ್‌ ಲೀಡರ್‌ಷಿಪ್‌ ಪ್ರೊಗ್ರಾಂ 2023‌

ಸಮುದಾಯಗಳೊಡನೆ ಕೆಲಸ ಮಾಡುತ್ತಾ ಅವರೊಳಗಿನ ನಾಯಕತ್ವ ಸಾಮರ್ಥ್ಯವನ್ನು ಗುರುತಿಸಿ, ಅವರಲ್ಲಿ ಉತ್ತಮ ಬದಲಾವಣೆ ತರುವ ‘ಇಂಡಿಯಾ ಫೆಲೊ ಸೋಷಿಯಲ್‌ ಲೀಡರ್‌ಷಿಪ್‌ ಪ್ರೊಗ್ರಾಂ–2023‘ಗಾಗಿ, ದಿ ಇಂಡಿಯಾ ಫೆಲೊ ಸಂಸ್ಥೆ ವಿವಿಧ ವೃತ್ತಿಪರ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ.

ಅರ್ಹತೆ: 20 ರಿಂದ 30 ವರ್ಷ ವಯೋಮಾನದ, ಯಾವುದೇ ವೃತ್ತಿಪರ ಪದವೀಧರರು ಅರ್ಜಿಸಲ್ಲಿಸಬಹುದು. 18 ತಿಂಗಳ ನಡೆಯುವ ಈ ಫೆಲೊಷಿಪ್‌ ಅವಧಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಲು ಅರ್ಜಿದಾರರು ಬದ್ಧರಾಗಿರಬೇಕು. ದೇಶದ ಯಾವುದೇ ಭಾಗದಲ್ಲಿ, ಯಾವುದೇ ವಿಷಯದ ಮೇಲೆ ಕಾರ್ಯನಿರ್ವಹಿಸಲುಸಿದ್ಧರಾಗಿರಬೇಕು.

ಆರ್ಥಿಕ ನೆರವು: ₹20 ಸಾವಿರದವರೆಗೆ ಮಾಸಿಕ ಸ್ಟೈಫಂಡ್‌ ಮತ್ತು ಇತರ ಸೌಲಭ್ಯಗಳು.

ಅರ್ಜಿ ಸಲ್ಲಿಸಲು ಕೊನೆ ದಿನ: 31/01/2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಹೆಚ್ಚಿನ ಮಾಹಿತಿಗೆ:www.b4s.in/praja/IFSL5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.