ADVERTISEMENT

ಇಸ್ರೋದಲ್ಲಿ ನೇರ ಸಂದರ್ಶನ: ITI, ENGINEERING ಆದವರಿಂದ 179 ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 6:13 IST
Last Updated 13 ಡಿಸೆಂಬರ್ 2019, 6:13 IST
   

ಬೆಂಗಳೂರು:ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಟೆಕ್ನಿಷಿಯನ್‌ ಮತ್ತು ಟ್ರೇಡ್‌ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ನೇರ ಸಂದರ್ಶನಕ್ಕೆ ಕರೆಯಲಾಗಿದೆ.

ಐಟಿಐ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ತಮಿಳುನಾಡಿನ ಮಹೇಂದ್ರಗಿರಿಯಲ್ಲಿ ನಡೆಯಲಿದೆ.

ಹುದ್ದೆಗಳ ವಿವರ

ADVERTISEMENT

1)ಟೆಕ್ನಿಷಿಯನ್‌ಅಪ್ರೆಂಟಿಸ್‌– 59

2)ಟ್ರೇಡ್‌ ಅಪ್ರೆಂಟಿಸ್‌–120

ತರಬೇತಿ ಭ್ಯತೆ:ಟೆಕ್ನಿಷಿಯನ್‌ ಮತ್ತು ಟ್ರೇಡ್‌ ಅಪ್ರೆಂಟಿಸ್‌ಗಳಿಗೆ ತರಬೇತಿ ಭತ್ಯೆಯಾಗಿ ಮಾಸಿಕ ₹ 9000 ನೀಡಲಾಗುವುದು.

ವಯಸ್ಸು: ಗರಿಷ್ಠ ವಯೋಮಿತಿಯನ್ನು 35 ವರ್ಷಕ್ಕೆ ನಿಗದಿಪಡಿಸಲಾಗಿದೆ. (ಸರ್ಕಾರದ ನಿಯಮಗಳ ಅನ್ವಯ ಮಯೋಮಿತಿಯಲ್ಲಿ ಸಡಿಲಿಕೆ ಇರುವುದು)

ಅರ್ಜಿ ಶುಲ್ಕ: ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಆಸಕ್ತ ಅಭ್ಯರ್ಥಿಗಳುwww.iprc.gov.in ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಸಂದರ್ಶನ ದಿನಾಂಕ

ಟೆಕ್ನಿಷಿಯನ್‌ ಅಪ್ರೆಂಟಿಸ್‌:21.12.2019 (ಶನಿವಾರ)

ಟ್ರೇಡ್‌ ಅಪ್ರೆಂಟಿಸ್‌ :04.01.2020 (ಶನಿವಾರ)

ಸಂದರ್ಶನ ಸ್ಥಳ

ISRO Propulsion Complex (IPRC),

Mahendragiri, Tirunelveli District,

TamilNadu

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ವೆಬ್‌ಸೈಟ್‌ ಹಾಗೂ ಅಧಿಸೂಚನೆಯ ಲಿಂಕ್‌ ಅನ್ನು ಕ್ಲಿಕ್ಕಿಸಿ ನೋಡಬಹುದು.

ಅಧಿಸೂಚನೆ ಲಿಂಕ್‌: https://bit.ly/2tfGesL

ವೆಬ್‌ಸೈಟ್‌:www.iprc.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.