ADVERTISEMENT

ಉದ್ಯೋಗ ವಾರ್ತೆ: ಜಿಲ್ಲಾ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 19:30 IST
Last Updated 28 ಸೆಪ್ಟೆಂಬರ್ 2022, 19:30 IST
   

ಕರ್ನಾಟಕ ಹೈಕೋರ್ಟ್‌ 16 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತು ಸೆಪ್ಟೆಂಬರ್ 20, 2022 ರಂದು ಅಧಿಸೂಚನೆ ಹೊರಡಿಸಿದೆ.

ಅಭ್ಯರ್ಥಿಗಳು ಹೈಕೋರ್ಟ್‌ ಜಾಲತಾಣ http://karnatakajudiciary.kar.nic.in/recruitment.php – ಇದರ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 19, 2022 ಕೊನೆ ದಿನ.

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದಕಾನೂನು ಪದವಿ (ಎಲ್‌ಎಲ್‌ಬಿ) ಪೂರ್ಣಗೊಳಿಸಿರಬೇಕು.

ADVERTISEMENT

* ಹೈಕೋರ್ಟ್‌ ಅಥವಾ ಕೆಳ ಹಂತದ ನ್ಯಾಯಾಲಯಗಳಲ್ಲಿ ಕನಿಷ್ಠ 7 ವರ್ಷಗಳಿಂದ ವಕೀಲರಾಗಿ ಕಾರ್ಯನಿರ್ವಹಿಸುತ್ತಿರಬೇಕು.

ಗಮನಿಸಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪಬ್ಲಿಕ್ ಪ್ರಾಸಿಕ್ಯೂಟರ್/ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್/ಸರ್ಕಾರಿ ವಕೀಲರು ಕನಿಷ್ಠ ಏಳು ವರ್ಷಗಳ ಕಾಲ ನಿರಂತರವಾಗಿ ತಮ್ಮ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರಬೇಕು.

ವಯೋಮಿತಿ: ಗರಿಷ್ಠ ವಯೋಮಿತಿ (19 ಅಕ್ಟೋಬರ್‌ 2022) 45 ವರ್ಷಗಳು. ಎಸ್‌.ಸಿ, ಎಸ್‌.ಟಿ ಅಭ್ಯರ್ಥಿಗಳಿಗೆ 3 ವರ್ಷಯ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ಪೂರ್ವಭಾವಿ ಪರೀಕ್ಷಾ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ ₹500. ಎಸ್‌.ಸಿ/ ಎಸ್‌.ಟಿ/ಪ್ರವರ್ಗ 1ರ ಅಭ್ಯರ್ಥಿಗಳಿಗೆ ₹250

ಮುಖ್ಯ ಪರೀಕ್ಷಾ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹ 1ಸಾವಿರ, ಎಸ್‌.ಸಿ/ ಎಸ್‌.ಟಿ/ಪ್ರವರ್ಗ 1ರ ಅಭ್ಯರ್ಥಿಗಳಿಗೆ ₹750/-

ಶುಲ್ಕ ಪಾವತಿ ವಿಧಾನ: ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸುವಂತೆ, ಅರ್ಜಿ ಶುಲ್ಕವನ್ನು ರಾಜ್ಯ ಹೈಕೋರ್ಟ್‌ನ ಅಧಿಕೃತ ಜಾಲತಾಣದಲ್ಲಿ (http://karnatakajudiciary.kar.nic.in/distJudges2022.php) ನಿಗದಿಪಡಿಸಿರುವ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೂಲಕ ಪಾವತಿಸಬಹುದು. ಇಲ್ಲವೇ, ಜಾಲತಾಣದಲ್ಲಿರುವ ಎಸ್‌ಬಿಐ ಬ್ಯಾಂಕ್‌ ಚಲನ್ ಡೌನ್‌ಲೋಡ್ ಮಾಡಿಕೊಂಡು, ಸಮೀಪದ ಯಾವುದೇ ಬ್ಯಾಂಕ್‌ನ ಶಾಖೆಯ ಮೂಲಕ ಶುಲ್ಕವನ್ನು ಪಾವತಿಸಬಹುದು. ಅರ್ಜಿ ಶುಲ್ಕ ಪಾವತಿಸಲು ಅಕ್ಟೋಬರ್ 21,2022 ಕೊನೆ ದಿನ.

ಜಲ ಸಂಪನ್ಮೂಲ ಇಲಾಖೆ– 155 ಎಸ್‌ಡಿಎ ಹುದ್ದೆಗಳು

ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

ಹುದ್ದೆಗಳು ಬ್ಲ್ಯಾಕ್‌ಲಾಗ್‌ (ಎಸ್‌ಸಿ) ಹುದ್ದೆಗಳಾಗಿರುತ್ತೇವೆ. ಆಸಕ್ತಿ ಇರುವ, ದ್ವಿತೀಯ ಪಿಯು ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಹೆಸರು: ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ)

ಹುದ್ದೆಗಳ ಸಂಖ್ಯೆ :155

ಶೈಕ್ಷಣಿಕ ಅರ್ಹತೆ:ದ್ವಿತೀಯ ಪಿಯುಸಿ /12ನೇ ತರಗತಿ ಅಥವಾ

ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವೇತನ ಶ್ರೇಣಿ : ₹21,400 ರಿಂದ ₹ 42,000

ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 25-10-2022 ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ನೋಡಬಹುದು: https://bit.ly/3RduMD4 ವೆಬ್‌ಸೈಟ್‌:https://waterresources.karnataka.gov.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.