ADVERTISEMENT

KSISF ಸಬ್‌ಇನ್‌ಸ್ಪೆಕ್ಟರ್‌: ಆಕರ ಗ್ರಂಥಗಳ ಅಧ್ಯಯನಕ್ಕಿರಲಿ ಆದ್ಯತೆ

ಕೆಎಸ್‌ಐಎಸ್‌ಎಫ್‌ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ

ಕೆ ಎಚ್ ಮಂಜುನಾಥ
Published 16 ಫೆಬ್ರುವರಿ 2022, 19:30 IST
Last Updated 16 ಫೆಬ್ರುವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಿನಪತ್ರಿಕೆಗಳಲ್ಲಿನ ಪ್ರಚಲಿತ ವಿದ್ಯಮಾನಗಳು, ವಿಷಯಾಧಾರಿತ ಕೃತಿಗಳ ಪರಾಮರ್ಶೆಯೊಂದಿಗೆ ಕೆಎಸ್‌ಐಎಸ್‌ಎಫ್‌ ಸಬ್‌ಇನ್‌ಸ್ಪೆಕ್ಟರ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬೇಕು.

ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಕೆಎಸ್‌ಐಎಸ್‌ಎಫ್) ಖಾಲಿಯಿರುವ 63 ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಈ ಸಂಬಂಧ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಕೆಗೆ ಕೊನೆ ದಿನ ಮಾರ್ಚ್‌ 3.

ದೇಹದಾರ್ಢ್ಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯುತ್ತದೆ. ದೇಹದಾರ್ಢ್ಯ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ADVERTISEMENT

ಪರೀಕ್ಷೆ ಸ್ವರೂಪ

ಈ ಪರೀಕ್ಷೆಯಲ್ಲಿ ಪದವಿ ತರಗತಿ ಹಂತದ ವಿಷಯಗಳನ್ನು ಒಳಗೊಂಡ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ.

ಪತ್ರಿಕೆ-1: ಈ ಪತ್ರಿಕೆಯಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಪ್ರಬಂಧ ರಚನೆ ಇರುತ್ತದೆ. ಇದಕ್ಕೆ 30 ಅಂಕಗಳು. ಎರಡನೇ ಭಾಗದಲ್ಲಿ ಕನ್ನಡದಿಂದ ಇಂಗ್ಲಿಷ್‌ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರವಿರುತ್ತದೆ. ಇದಕ್ಕೆ 20 ಅಂಕಗಳು. ಒಟ್ಟು 50 ಅಂಕಗಳು. ಪರೀಕ್ಷೆಯ ಅವಧಿ ಒಂದು ಗಂಟೆ. ಇದರಲ್ಲಿ ಕನಿಷ್ಟ ಅಂಕಗಳು ಇರುವುದಿಲ್ಲ.

ಪತ್ರಿಕೆ-2: ಈ ಪತ್ರಿಕೆಯಲ್ಲಿ ಸಾಮಾನ್ಯ ಅಧ್ಯಯನ ವಿಭಾಗದಲ್ಲಿ, ಎ)ಸಾಮಾನ್ಯ ಜ್ಞಾನ ಬಿ) ವಿಜ್ಞಾನ, ಸಿ) ಭೂಗೋಳ, ಡಿ)ಆಧುನಿಕ ಭಾರತೀಯ ಇತಿಹಾಸ, ಇ)ಸ್ವಾತಂತ್ರ್ಯ ಚಳವಳಿ ಮತ್ತು ಎಫ್‌) ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನಾತ್ಮಕ ತತ್ವಗಳು–ಈ ವಿಷಯಗಳ ಪ್ರಶ್ನೆಗಳಿರುತ್ತವೆ

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ವಿಭಾಗದಲ್ಲಿ ಎ)ಗಣನಾಕೌಶಲ, ಬಿ)ಪ್ರಾದೇಶಿಕ ಮನ್ನಣೆ ಕೌಶಲ್ಯ ಗ್ರಹಿಸುವಿಕೆ, ಸಿ) ತೀರ್ಮಾನ
ಡಿ)ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣ ವಿಷಯಗಳ ಪ್ರಶ್ನೆಗಳಿರುತ್ತವೆ.

ಇದು ಬಹು ಆಯ್ಕೆ(Multiple Choice), ವಸ್ತುನಿಷ್ಠ (objective) ಮಾದರಿಯದಾಗಿದ್ದು,150 ಅಂಕ
ಗಳ,ಒಂದೂವರೆ ಗಂಟೆ ಅವಧಿಯ ಪರೀಕ್ಷೆ. ಪ್ರತಿ ತಪ್ಪು ಉತ್ತರಕ್ಕೆ ಅಂತಹುದೇ ಪ್ರಶ್ನೆಯ ಸರಿ ಉತ್ತರದ ಶೇ 25 (0.375) ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ..

ಏನನ್ನು ಓದಬೇಕು?

ಪರೀಕ್ಷೆ ಬರೆಯುವವರು, ಇತಿಹಾಸ (ಕರ್ನಾಟಕ ಮತ್ತು ಭಾರತೀಯ ಸಾಂಸ್ಕೃತಿ ಇತಿಹಾಸ), ಭೂಗೋಳ, ಭಾರತೀಯ ಅರ್ಥ ಶಾಸ್ತ್ರ, ವಿಜ್ಞಾನ, ಬೌದ್ಧಿಕ ಸಾಮರ್ಥ್ಯ, ಕಂಪ್ಯೂಟರ್, ವಿಜ್ಞಾನ/ಮಾಹಿತಿ ತಂತ್ರಜ್ಞಾನ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌, ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನ– ಇಷ್ಟು ವಿಷಯಗಳನ್ಶು ಓದಬೇಕು. ಎನ್‌ಸಿಆರ್‌ಟಿಯ 11 ಮತ್ತು 12ನೇ ತರಗತಿಯ ಇತಿಹಾಸ, ಸಂವಿಧಾನ, ವಿಜ್ಞಾನ ಮತ್ತು ಭಾರತೀಯ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪರಾಮರ್ಶಿಸಬೇಕು.

ಪರೀಕ್ಷೆ ಹಾಗೂ ಅರ್ಜಿ ಸಲ್ಲಿಸುವ ಕುರಿತ ಹೆಚ್ಚಿನ ಮಾಹಿತಿಗೆ http://ksisfsi21.ksponline.co.in/ ಜಾಲತಾಣ ನೋಡಿ

ವಯೋಮಿತಿ, ಅರ್ಹತೆ

lಪದವಿ ಅಥವಾ ತತ್ಸಮಾನ ಪದವಿ ಪೂರೈಸಿದ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರು.

lವಯೋಮಿತಿ: ಕನಿಷ್ಠ ವಯೋಮಿತಿ 21 ವರ್ಷ. ಗರಿಷ್ಠ ವಯೋಮಿತಿ ಎಸ್‌.ಸಿ, ಎಸ್‌.ಟಿ ಹಾಗೂ ಇತರೆ ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷಗಳು ಹಾಗೂ ಇತರೆ ವರ್ಗಕ್ಕೆ 26 ವರ್ಷಗಳು.

lಸೇವಾನಿರತ ಅಭ್ಯರ್ಥಿಗಳಲ್ಲಿ ಎಸ್.ಸಿ ಮತ್ತು ಎಸ್‌.ಟಿ ಹಾಗೂ ಒಬಿಸಿಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ35 ವರ್ಷ ಗರಿಷ್ಠ ವಯೋಮಿತಿ ಇದೆ. ಅರ್ಜಿಗೆ ಸಂಬಂಧಿಸಿದ ವಿಚಾರಕ್ಕೆ ಸಹಾಯವಾಣಿ 080-22943346ಗೆ ಸಂಪರ್ಕಿಸಬಹುದು.

(ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ. ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.