ಬೆಂಗಳೂರು: ಮೈಸೂರು ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ ಹುದ್ದೆಗಳ ನೇಮಕಾತಿಗಾಗಿಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.
ಹುದ್ದೆಗಳ ಸಂಖ್ಯೆ: 16
ವಿದ್ಯಾರ್ಹತೆ:ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ಕನ್ನಡ, ಆಂಗ್ಲ ಬೆರಳಚ್ಚು ಹಾಗೂ ಶೀಘ್ರ ಲಿಪಿ ಕೋರ್ಸ್ ಅನ್ನು ಪ್ರೌಢ ದರ್ಜೆಯಲ್ಲಿ ಪಾಸಾಗಿರಬೇಕು. ಕಂಪ್ಯೂಟರ್ ಜ್ಞಾನ ಅವಶ್ಯಕವಾಗಿರಬೇಕು.
ವೇತನ ಶ್ರೇಣಿ:₹27,650(ಮೂಲ ವೇತನ)ರಿಂದ ₹52,650
ನಿಗದಿತ ಶುಲ್ಕ:ಸಾಮಾನ್ಯ, ಪ್ರವರ್ಗ- 1,2ಎ, 2ಬಿ, 3ಎ ಮತ್ತು 3ಬಿ ಸೇರಿದ ಅಭ್ಯರ್ಥಿಗಳು ₹300ಪಾವತಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ ₹150 ಮಾತ್ರ.
ವಯೋಮಿತಿ ಸಡಿಲಿಕೆ:ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಸೂಚನೆ ಲಿಂಕ್ ನೋಡುವುದು.
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 20-03-2020
ಅರ್ಜಿ ಸಲ್ಲಿಸುವ ಕೊನೆಯ ದಿನ: 19-04-2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.