ADVERTISEMENT

ಸರ್ಕಾರಿ ಉದ್ಯೋಗ; ಹೆಚ್ಚಿದ ಒಲವು

ಪಿಟಿಐ
Published 12 ಜುಲೈ 2020, 14:29 IST
Last Updated 12 ಜುಲೈ 2020, 14:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಕೋವಿಡ್‌ ಸೃಷ್ಟಿಸಿರುವ ಅನಿಶ್ಚಿತತೆಯ ಕಾರಣಕ್ಕೆ ಯುವ ಜನತೆ ಸರ್ಕಾರಿ ನೌಕರಿಗೆ ಸೇರುವ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಸರ್ಕಾರದ ವಿವಿಧ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಮತ್ತು ಸರ್ಕಾರಿ ನೌಕರಿಗಳಿಗೆ ಅರ್ಜಿ ಹಾಕುವವರನ್ನು ಗುರಿಯಾಗಿರಿಸಿಕೊಂಡು ‘ಅಡ್ಡಾ247’ (Adda247) ಸಂಸ್ಥೆಯು 6,500 ಜನರ ಅಭಿಪ್ರಾಯ ಸಂಗ್ರಹಿಸಿದೆ.

ದೇಶದ 10 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. 18 ರಿಂದ 30 ವರ್ಷದ ಒಳಗಿನವರು, ವಿದ್ಯಾರ್ಥಿಗಳು ಮತ್ತು ವೃತ್ತಿ ನಿರತರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಕೋವಿಡ್‌ ಪಿಡುಗು ದೇಶದ ಉದ್ಯೋಗ ಜಗತ್ತಿನ ಚಿತ್ರಣವನ್ನೇ ಬದಲಿಸಿದೆ. ಕಾರ್ಖಾನೆಗೆ ಬೀಗ, ಕಡ್ಡಾಯ ರಜೆ, ವೇತನ ಕಡಿತ, ಕೆಲಸದಿಂದ ವಜಾಗೊಳಿಸುವಂತಹ ಅನಿಶ್ಚಿತತೆಗಳು ಎಲ್ಲ ವಲಯಗಳಲ್ಲಿ ಸಾಮಾನ್ಯವಾಗಿವೆ. ಹೀಗಾಗಿ ಸರ್ಕಾರಿ ಉದ್ಯೋಗಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ 82ರಷ್ಟು ಜನರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಲು ಮುಂದಾಗಿದ್ದಾರೆ.

ಸರ್ಕಾರಿ ನೌಕರಿಯಲ್ಲಿನ ಉದ್ಯೋಗ ಸುರಕ್ಷತೆ, ಆಕರ್ಷಕ ಸಂಬಳ ಮತ್ತಿತರ ಭತ್ಯೆಗಳು ಉದ್ಯೋಗ ಆಕಾಂಕ್ಷಿಗಳನ್ನು ಹೆಚ್ಚಾಗಿ ಸೆಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.