ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 19:30 IST
Last Updated 19 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ– 26

351. ಹೊಂದಿಸಿ ಬರೆಯಿರಿ:
1) ತುಂಗಾ ನದಿ ಎ) ಪಶ್ಚಿಮಾಭಿಮುಖ ಹರಿಯುವ ನದಿ
2) ಕೃಷ್ಣಾ ನದಿ ಬಿ) ನವಿಲು ತೀರ್ಥ ಡ್ಯಾಂ
3) ಶರಾವತಿ ನದಿ ಸಿ) ಮಹಾಬಲೇಶ್ವರ
4) ಮಲಪ್ರಭಾ ನದಿ ಡಿ) ಪೂರ್ವಾಭಿಮುಖವಾಗಿ ಹರಿಯುವ ನದಿ

ಎ) 1-ಬಿ, 2-ಡಿ, 3-ಸಿ, 4-ಎ
ಬಿ) 1-ಸಿ, 2-ಎ, 3-ಬಿ, 4-ಡಿ
ಸಿ) 1-ಡಿ, 2-ಸಿ, 3-ಎ, 4-ಬಿ
ಡಿ) 1-ಡಿ, 2-ಸಿ, 3-ಬಿ, 4-ಎ

ADVERTISEMENT

352. ‘ಮ್ಯಾಂಚೆಸ್ಟರ್’ ಇದು ಯಾವ ಕಾರಣಕ್ಕಾಗಿ ಪ್ರಸಿದ್ಧಿ ಪಡೆದಿದೆ?
ಎ) ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ
ಬಿ) ಜವಳಿ ಉದ್ಯಮ
ಸಿ) ಸುಂದರವಾದ ಪಟ್ಟಣ
ಡಿ) ಕ್ರಿಕೆಟ್‌ ಮೈದಾನ

353. ಸಂವಿಧಾನಾತ್ಮಕ ಪರಿಹಾರದ ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಲಾಗಿದೆ?
ಎ) 14
ಬಿ) 17
ಸಿ) 29
ಡಿ) 32

354. ನಮ್ಮ ಸಂವಿಧಾನದ ಈ ಭಾಗವನ್ನು ಐರಿಷ್ ಸಂವಿಧಾನದಿಂದ ಪಡೆಯಲಾಗಿದೆ
ಎ) ಸ್ವತಂತ್ರ ಮತ್ತು ಏಕೀಕೃತ ನ್ಯಾಯಾಂಗ ವ್ಯವಸ್ಥೆ
ಬಿ) ಮೂಲಭೂತ ಕರ್ತವ್ಯಗಳು
ಸಿ) ರಾಜ್ಯ ನಿರ್ದೇಶಕ ತತ್ವಗಳು
ಡಿ) ಮೂಲಭೂತ ಹಕ್ಕುಗಳು

355. ಇವರು ಭಾರತ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು
ಎ) ಡಾ. ಬಿ.ಆರ್. ಅಂಬೇಡ್ಕರ್
ಬಿ) ಡಾ. ಬಾಬು ರಾಜೇಂದ್ರ ಪ್ರಸಾದ್
ಸಿ) ಮಹಾತ್ಮ ಗಾಂಧೀಜಿ
ಡಿ) ಬೆನಗಲ್ ರಾಮರಾವ್

356. ಗುಂಪಿಗೆ ಸೇರದ ಪದ ಆರಿಸಿ
ಎ) ಸಂಗಮ ವಂಶ
ಬಿ) ಪಲ್ಲವ ವಂಶ
ಸಿ) ಅರವೀಡು ವಂಶ
ಡಿ) ಸಾಳುವ ವಂಶ

357. ಇಂಗ್ಲೆಂಡ್ ದೇಶದ ಕರೆನ್ಸಿಯ ಹೆಸರೇನು?
ಎ) ಯೆನ್
ಬಿ) ರೂಬೆಲ್
ಸಿ) ಪೌಂಡ್
ಡಿ) ಡಾಲರ್

358. ಭಾರತದ ಯಾವ ಎರಡು ಸ್ಥಳಗಳು ವರ್ಷಕ್ಕೆ 1,080 ಸೆಂ.ಮೀ. ಗಿಂತ ಹೆಚ್ಚಿಗೆ ಮಳೆಯನ್ನು ಪಡೆಯುತ್ತವೆ?
ಎ) ಚಿರಾಪುಂಜಿ ಮತ್ತು ಗೋಲಾಘಾಟ್‌
ಬಿ) ಚಿರಾಪುಂಜಿ ಮತ್ತು ಮೌಸಿನ್‌ರಾಂ
ಸಿ) ಆಗುಂಬೆ ಮತ್ತು ಸೂಪಾ
ಡಿ) ಆಗುಂಬೆ ಮತ್ತು ಕೆಮ್ಮಣ್ಣುಗುಂಡಿ

359. ರುದ್ರಭಟ್ಟ ರಚಿಸಿದ ಕೃತಿಯ ಹೆಸರು
ಎ) ಜಗನ್ನಾಥ ವಿಜಯ
ಬಿ) ಮಿತಾಕ್ಷರ ಸಂಹಿತೆ
ಸಿ) ಲೋಕೋಪಕಾರ
ಡಿ) ಯಶೋಧರ ಚರಿತ

360. ‘ಗದುಗಿನ ಭಾರತ’ ಬರೆದವರು
ಎ) ಪಂಪ
ಬಿ) ರನ್ನ
ಸಿ) ಜನ್ನ
ಡಿ) ಕುಮಾರವ್ಯಾಸ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.