ADVERTISEMENT

ಶಿಕ್ಷಕರ ಅರ್ಹತಾ ಪರೀಕ್ಷೆ: ಅರ್ಜಿ ಸಲ್ಲಿಕೆಗೆ ಸೆ.30 ಕೊನೆ ದಿನ

ಅರ್ಜಿ ಸಲ್ಲಿಕೆಗೆ ಸೆ.30 ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 19:30 IST
Last Updated 7 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಸಕ್ತ ಸಾಲಿನ (2022) ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ (Karnataka Teacher eligibility test) ಆಹ್ವಾನಿಸಿದೆ. ಸೆ.1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಕೆಗೆ ಸೆ.30 ಕೊನೆ ದಿನ. ಶುಲ್ಕ ಪಾವತಿಸುವುದಕ್ಕೂ ಇದೇ ಕೊನೆಯ ದಿನ.‌

ವಿದ್ಯಾರ್ಹತೆ :

ಪತ್ರಿಕೆ-I : 1 ರಿಂದ 5ನೇ ತರಗತಿಗವರೆಗೆ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಮತ್ತು ಡಿ.ಇಡಿ ಪಾಸಾಗಿರಬೇಕು.

ADVERTISEMENT

ಪತ್ರಿಕೆ 2: 6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಬಯಸು ವವರು ಪದವಿ ಮತ್ತು ಬಿ.ಇಡಿ ಪಾಸಾಗಿರಬೇಕು. ಡಿ.ಇಡಿ, ಬಿ.ಇಡಿ/ಬಿ.ಎಸ್ಸಿ ಬಿ.ಇಡಿ ಪರೀಕ್ಷೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪದವಿ/ಪಿಯುಸಿಯಲ್ಲಿ ಕನಿಷ್ಠ ಎಷ್ಟು ಅಂಕಗಳಿರಬೇಕು ಎಂಬುದೂ ಸೇರಿದಂತೆ ವಿದ್ಯಾರ್ಹತೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿನ 7ನೇ ಅಂಶವನ್ನು ಗಮನಿಸಬಹುದು. (ಅಧಿಸೂಚನೆ ಓದಲು ಈ ಲಿಂಕ್‌ಗೆ ಭೇಟಿ ನೀಡಿ: www.schooleducation.kar.nic.in/cacellpdfs/TET-2022/2_KARTET2022_NOTIFICATION01092022.pdf)

ಅರ್ಜಿ ಸಲ್ಲಿಸುವ ವಿಧಾನ

ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ನಿಗದಿತ ಶುಲ್ಕವನ್ನೂ ಆನ್‌ಲೈನ್ ಮೂಲಕವೇ ಪಾವತಿಸಬೇಕು. http://www.schooleducation.kar.nic.in ಈ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ.

ಅರ್ಜಿಯ ಜೊತೆಗೆ, ಅಭ್ಯರ್ಥಿಯು ಸಹಿ ಹಾಕಿದ ಇತ್ತೀಚಿನ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು. ಅಂಗವಿಕಲ ಕೋಟಾದಡಿ ವಿನಾಯಿತಿ ಬಯಸಿದಲ್ಲಿ, ಸಂಬಂಧಿಸಿದ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರಹೊಂದಿರಬೇಕು.

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ, ಸ್ಕ್ಯಾನ್‌ ಮಾಡಿದತಮ್ಮ ಭಾವಚಿತ್ರ ಹಾಗೂ ಸಹಿಯನ್ನು ‘ಜೆಪಿಜಿ’(Ex: Photo.JPG Format) ನಮೂನೆಯಲ್ಲಿ ಅಪ್‌ಲೋಡ್ ಮಾಡಬೇಕು.

ಜಾಲತಾಣದಲ್ಲಿ ನೀಡಲಾದ ಸೂಚನೆಗಳನ್ನು ಓದಿ ಅರ್ಥೈಸಿ ಕೊಂಡು, ಅದರಂತೆ ಸೂಕ್ತ ಸಿದ್ಧತೆ ಯೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕು. ನಂತರ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಪೂರ್ಣವಿವರಗಳನ್ನೊಳಗೊಂಡ ಅರ್ಜಿಯ ಕಂಪ್ಯೂಟರ್ ಜನರೇಟೆಡ್ ಪ್ರತಿಯ ಪಿಡಿಫ್‌ ಪುಟವನ್ನು ಪಡೆದುಕೊಳ್ಳಬೇಕು.

ಪರೀಕ್ಷಾ ಶುಲ್ಕ ವಿವರ

ಸಾಮಾನ್ಯವರ್ಗ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಪತ್ರಿಕೆ 1 ಕ್ಕೆ ₹ 700 ಪತ್ರಿಕೆ 1 ಹಾಗೂ ಪತ್ರಿಕೆ 2 ಕ್ಕೆ ಸೇರಿ ₹1000 ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭ್ಯರ್ಥಿಗಳು, ಪತ್ರಿಕೆ-1ಕ್ಕೆ ₹350, ಪತ್ರಿಕೆ 1 ಮತ್ತು 2 ಸೇರಿ ₹500 ಇರುತ್ತದೆ. ಆನ್‌ಲೈನ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಬಹುದು.

ಪರೀಕ್ಷಾ ದಿನಾಂಕ

ಇದೇ ನವೆಂಬರ್ 6ರಂದು ಬೆಳಿಗ್ಗೆ 9 ರಿಂದ 12ರವರೆಗೆ ಮತ್ತು ಮಧ್ಯಾಹ್ನ 1.30 ರಿಂದ 4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರವೇಶ ಪತ್ರಗಳನ್ನು ಅಕ್ಟೋಬರ್ 21 ರಿಂದ ಆನ್‌ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಗಮನಿಸಿ

* ಪರಿಶಿಷ್ಟ ಜಾತಿ / ಪರಿಶಿಷ್ಟವರ್ಗ / ಪ್ರವರ್ಗ-1 / ವಿಶೇಷ ಅಗತ್ಯತೆಯುಳ್ಳ ಅಭ್ಯರ್ಥಿಗಳಿಗೆ ಅರ್ಹ ವಿದ್ಯಾರ್ಹತೆಯಲ್ಲಿ ನಿಗದಿ ಪಡಿಸಿರುವ ಅಂಕಗಳಲ್ಲಿ ಶೇ 5 ರಷ್ಟು ವಿನಾಯಿತಿ ನೀಡಲಾಗಿದೆ.

* ಎನ್.ಸಿ.ಟಿ.ಇ. ಯಿಂದ ಮಾನ್ಯತೆ ಪಡೆದಂತಹ ಡಿಪ್ಲೊಮಾ /ಪದವಿ ಕೋರ್ಸುಗಳನ್ನು ಮಾತ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳ ವಿದ್ಯಾರ್ಹತೆಯಲ್ಲಿ ಪರಿಗಣಿಸಲಾಗಿದೆ. ಆದಾಗ್ಯೂ ರಿಹ್ಯಾಬಿಲಿಟೇಷನ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಂತಹ ಡಿಪ್ಲೊಮಾ ಇನ್ ಎಜುಕೇಶನ್ (ವಿಶೇಷ ಶಿಕ್ಷಣ) ಹಾಗೂ ಬಿ.ಇಡಿ (ವಿಶೇಷ ಶಿಕ್ಷಣ) ಪದವಿಯನ್ನು ಸಹ ಪರಿಗಣಿಸಲಾಗಿದೆ.

* ಅಂತಿಮ ವರ್ಷದ/ಸೆಮಿಸ್ಟರ್‌ನ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಪಡೆದು ಉತ್ತೀರ್ಣತೆ ಹೊಂದಿದಲ್ಲಿ ಮಾತ್ರ ಕರ್ನಾಟಕ ಶಿಕ್ಷಕರ ಅರ್ಹತಾ ಪ್ರಮಾಣ ಪತ್ರ ಮಾನ್ಯ ಮಾಡಲಾಗುವುದು.

ಮಾಹಿತಿಗಾಗಿ ಜಾಲತಾಣಗಳು: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ:https://sts.karnataka.gov.in/TET/

ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತ ಅಧಿಸೂಚನೆಗಾಗಿ https://www.schooleducation.kar.nic.in/cacellpdfs/TET-2022/1_KARTET2022_PRAKATANE01092022.pdf

ಪರೀಕ್ಷೆ ಕುರಿತ ಪೂರ್ಣ ಮಾಹಿತಿಗಾಗಿ https://www.schooleducation.kar.nic.inಗೆ ಭೇಟಿ ನೀಡಿ.

(ಮುಂದಿನ ವಾರ: ಪತ್ರಿಕೆ 1 ಮತ್ತು 2ರಲ್ಲಿರುವ
ವಿಷಯಗಳ ಕುರಿತ ವಿವರ)

ಜೀವಿತಾವಧಿಗೆ ಮಾನ್ಯತೆ

ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರ ಜೀವಾತಾವಧಿಯವರಿಗೆ ಮಾನ್ಯತೆ ಹೊಂದಿರುತ್ತದೆ. ಒಮ್ಮೆ ಅರ್ಹತೆ ಪಡೆದವರು ಮತ್ತೆ ಮತ್ತೆ ಪರೀಕ್ಷೆ ಬರೆಯುವ ಅವಶ್ಯಕತೆಯಿಲ್ಲ. ಒಂದು ವೇಳೆ ಹೆಚ್ಚು ಅಂಕ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಮಾತ್ರ ಮತ್ತೆ ಪರೀಕ್ಷೆ ಬರೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.