ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

1) ಭಾರತದ ಕರಾವಳಿ ಪ್ರದೇಶದಲ್ಲಿ ಕಂಡು ಬರುವ ‘ಸಾ ಫಿಶ್‌’ ಅಳಿವಿನ ಹಂಚಿನಲ್ಲಿದೆ ಎಂದು ಮತ್ಸ್ಯತಜ್ಞರು ಗುರುತಿಸಿದ್ದಾರೆ. ಈ ಸಾ ಫಿಶ್‌ ಒಂದು.......?
a) ಸಮುದ್ರಜೀವಿ b) ಉಭಯವಾಸಿ
c) ಅರಣ್ಯವಾಸಿ d) ದೊಡ್ಡ ಪಕ್ಷಿ

2) ಮಹಿಳೆಯರು ಮಹಿಳೆಯರ ವಿರುದ್ಧ ಹೊಂದಿರುವ ಲಿಂಗ ಪಕ್ಷಪಾತವನ್ನು ತಡೆಯಲು ಕೇಂದ್ರ ಸರ್ಕಾರ ’ವುಮನ್‌ ಫಾರ್‌ ವುಮನ್‌’ ಎಂಬ ಆನ್‌ಲೈನ್‌ ಅಭಿಯಾನ ಆರಂಭಿಸಿದೆ. ಈ ಅಭಿಯಾನದಲ್ಲಿ ಬಳಕೆಯಾಗಿರುವ ಹ್ಯಾಶ್‌ಟ್ಯಾಗ್‌ ಪದ ಯಾವುದು?
a) #ವುಮನ್‌ಫಾರ್‌ವುಮನ್‌
b)#ಐಆಮ್‍ದಟ್‍ವುಮನ್
c) #ಐಆಮ್‌ದಿಸ್‌ವುಮನ್
d) #ಐಆಮ್‍ವುಮನ್‌

3) ಅಮೆರಿಕ ಲೇಖಕ ಜಾರ್ಜ್‌ ಸೌಂಡರ್ಸ್‌ ಅವರಿಗೆ 2017ನೇ ಸಾಲಿನ ಮ್ಯಾನ್ ಆಫ್ ಬೂಕರ್ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರ ಯಾವ ಕೃತಿಗೆ ಈ ಪ್ರಶಸ್ತಿ ಸಂದಿದೆ? 
a) ಟೆಂಥ್ ಆಫ್ ಡಿಸೆಂಬರ್
b) ಸಿವಿಲ್‌ವಾರ್‌ ಲ್ಯಾಂಡ್‌ ಇನ್‌ ಬ್ಯಾಡ್‌ ಡೆಕ್‌ಲೈನ್‌
c) ಲಿಂಕೋಲ್ನ್ ಇನ್ ದ ಬಾರ್ಡೊ
d) ಕಾಮ್‌ಕಾಮ್‌

ADVERTISEMENT

4) ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೆಸ್ಕೊದ ನೂತನ ಮಹಾನಿರ್ದೇಶಕಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
a) ಹಮದ್ ಅಲ್ ಕವಾರಿ
b) ಇರಿನಾ ಬೊಕೊವೊ
c) ಜಾನ್ ಥಾಪರ್‌
d) ಆಡ್ರಿ ಅಸೋಲೆ

5) ಅಕ್ಟೋಬರ್ 15 ಅಂತರರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವಾದರೆ, ಅಕ್ಟೋಬರ್‌ 16 ಅನ್ನು ಯಾವ ದಿನವನ್ನಾಗಿ ಅಚರಣೆ ಮಾಡಲಾಗುತ್ತದೆ ಎಂಬುದನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ? 
a) ವಿಶ್ವ ನೀರಿನ ದಿನ
b) ವಿಶ್ವ ಅರಣ್ಯ ದಿನ
c) ವಿಶ್ವ ಭೂಮಿ ದಿನ
d) ವಿಶ್ವ ಆಹಾರ ದಿನ

6) ವಿವಾಹಕ್ಕೆ ಮುನ್ನ ಪದವಿ ಶಿಕ್ಷಣ ಪಡೆಯುವ ಮಹಿಳೆಯರಿಗೆ 51 ಸಾವಿರ ರೂಪಾಯಿ ನಗದು ಬಹುಮಾನ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಯಾವ ಸಮುದಾಯದ ಮಹಿಳೆಯರು ಈ ಯೋಜನೆಗೆ ಅರ್ಹರು?
a) ಹಿಂದೂ ಸಮುದಾಯದ ಮಹಿಳೆಯರು
b) ಜೈನ ಸಮುದಾಯದ ಮಹಿಳೆಯರು
c) ಮುಸ್ಲಿಂ ಸಮುದಾಯದ ಮಹಿಳೆಯರು
d) ಸಿಖ್‌ ಸಮುದಾಯದ ಮಹಿಳೆಯರು

7) ಕೇಂದ್ರ ಸರ್ಕಾರದ ಮಿಷನ್ ಇಂದ್ರಧನುಷ್ ಯೋಜನೆಯ ಮುಖ್ಯ ಉದ್ದೇಶವನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ? 
a) ಮಕ್ಕಳಿಗೆ ಪೌಷ್ಟಿಕ ಆಹಾರ
b) ಮಕ್ಕಳಿಗೆ ಲಸಿಕೆ ಹಾಕುವುದು
c) ಮಕ್ಕಳಿಗೆ ಉಚಿತ ಹಾಲು
d) ಮಕ್ಕಳಿಗೆ ಉಚಿತ ಆಟಿಕೆ

8) ಅಂತರರಾಷ್ಟ್ರೀಯ ಉತ್ಸವವಾಗಿ ಆಚರಿಸಲಾಗುತ್ತಿರುವ ಭಾರತ ಸರ್ಕಾರದ ’ಜಲ ಸಪ್ತಾಹ’ ಕಾರ್ಯಕ್ರಮವನ್ನು ಯಾವ ವರ್ಷದಿಂದ ಆಚರಿಸಲಾಗುತ್ತಿದೆ?
a) 2012 b) 2013
c) 2014 d) 2015

9) ಅಸ್ಸಾಂನ ನೂತನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿರುವ ಜಗದೀಶ್ ಮುಖಿ ಅವರು ಯಾವ ರಾಜ್ಯದ ವಿಧಾನಸಭೆಗೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು?
a) ಉತ್ತರ ಪ್ರದೇಶ b) ದೆಹಲಿ
c) ಮಹಾರಾಷ್ಟ್ರ  d) ಗುಜರಾತ್‌

10) ಹಿರಿಯ ನಟ ಅನುಪಮ್‌ ಖೇರ್‌ ಅವರನ್ನು ಎಫ್‍ಟಿಐಐಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಎಫ್‍ಟಿಐಐಯ ವಿಸ್ತೃತ ರೂಪ ಏನು?
a) ಫಿಲಂ ಅಂಡ್ ಟೆಲಿಫಿಲ್ಮ್ ಇನ್ಸಿಟಿಟ್ಯೂಟ್‌ ಆಫ್‌ ಇಂಡಿಯಾ
b) ಫಿಲ್ಮ್ ಅಂಡ್ ಟೆಕ್ನಾಲಜಿ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ
c) ಫಿಲ್ಮ್ ಅಂಡ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ
d) ಫಿಲಂ ಅಂಡ್ ಟೆಲಿವಿಷನ್‌ ಇನ್ಸಿಟಿಟ್ಯೂಟ್‌ ಆಫ್‌ ಇಂಡಿಯಾ

ಉತ್ತರಗಳು 1-a, 2-b, 3- c, 4-d, 5-d, 6-c, 7-b, 8-a, 9-b, 10-d.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.