ADVERTISEMENT

ಸ್ಟೂಡೆಂಟ್ ಕ್ವೆಸ್ಟ್ ಸರ್ವೆ: ದೇಶದಲ್ಲೇ ಉನ್ನತ ಶಿಕ್ಷಣ ಪಡೆಯಲು ಒಲವು

ಪಿಟಿಐ
Published 27 ಆಗಸ್ಟ್ 2021, 9:38 IST
Last Updated 27 ಆಗಸ್ಟ್ 2021, 9:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ 11 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ 68ರಷ್ಟು ಮಂದಿ, ತಮ್ಮ ದೇಶದೊಳಗೇ ಉನ್ನತ ಶಿಕ್ಷಣ ಕಲಿಯುವತ್ತ ಆಸಕ್ತಿ ತೋರಿದ್ದಾರೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. 3 ಸಾವಿರ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ನೋಯಿಡಾದಲ್ಲಿರುವ ಶಿವ್‌ ನಾಡರ್ ವಿಶ್ವವಿದ್ಯಾಲಯ ಹಾಗೂ ಅಂತರರಾಷ್ಟ್ರೀಯ ಕ್ಯಾರಿಯರ್ ಮತ್ತು ಕಾಲೇಜ್‌ ಕೌನ್ಸೆಲಿಂಗ್‌(ಐಸಿ3) ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ‘ಸ್ಟೂಡೆಂಟ್ ಕ್ವೆಸ್ಟ್‌ ಸಮೀಕ್ಷೆ‘ಯಿಂದ ಈ ಮಾಹಿತಿ ತಿಳಿದುಬಂದಿದೆ.

ಈ ಸಮೀಕ್ಷೆಯಲ್ಲಿ 11 ಮತ್ತ 12ನೇ ತರಗತಿಯ 3 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಳೆದ ವರ್ಷದ ಸಮೀಕ್ಷೆಯ ಫಲಿತಾಂಶಕ್ಕೆ ಹೋಲಿಸಿದರೆ, ದೇಶದೊಳಗೆ ಉನ್ನತ ಶಿಕ್ಷಣ ಕಲಿಯುವತ್ತ ಆಸಕ್ತಿ ತೋರುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ಶೇ 24ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಭಾರತ ಮತ್ತು ದಕ್ಷಿಣ ಏಷ್ಯಾದಾದ್ಯಂತ 9 ರಿಂದ 12 ನೇ ತರಗತಿಯ 2,000 ಶಾಲೆಗಳ 6,600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಮೀಕ್ಷೆಗೆ ಪ‍್ರತಿಕ್ರಿಯಿಸಿದ್ದಾರೆ. ಸಮೀಕ್ಷೆಗೆ ಒಳಪಟ್ಟ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ 25ರಷ್ಟು ಮಂದಿ ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಲು ಯೋಜಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ವಿದೇಶಕ್ಕೆ ತೆರಳಲು ಬಯಸುವ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಶೇ 4ರಷ್ಟು ಇಳಿಕೆಯಾಗಿದೆ.

ಸಮೀಕ್ಷೆಗೊಳಪಟ್ಟ 9 ರಿಂದ 10 ನೇ ತರಗತಿಗಳ ಶೇ 49ರಷ್ಟು ವಿದ್ಯಾರ್ಥಿಗಳು ತಮ್ಮ ದೇಶದಲ್ಲೇ ಉನ್ನತ ಶಿಕ್ಷಣ ಕಲಿಯಲು ಆಸಕ್ತಿ ತೋರಿದ್ದಾರೆ. ಶೆ 24ರಷ್ಟು ಮಕ್ಕಳು ಯಾವುದೇ ನಿರ್ಧಾರ ತಿಳಿಸಿಲ್ಲ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.

‘ಐಸಿ3’ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ವಿಶ್ವದಾದ್ಯಂತ ಕೆಲ ಪ್ರೌಢಶಾಲೆಗಳ ನಿರ್ವಾಹಕರು, ಶಿಕ್ಷಕರು ಮತ್ತು ಸಲಹೆಗಾರರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.