ADVERTISEMENT

ಕೃಷಿಯಲ್ಲಿ ಬಿ.ಎಸ್‌ಸಿ.

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 19:30 IST
Last Updated 23 ಏಪ್ರಿಲ್ 2019, 19:30 IST
Young biologist pouring liquid chemicals in flower pot with sprout in greenhouse. Plant protection and biotechnology concept
Young biologist pouring liquid chemicals in flower pot with sprout in greenhouse. Plant protection and biotechnology concept   

ನಾನು ದ್ವಿತೀಯ ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಂಡಿದ್ದೇನೆ. ಕೃಷಿಯಲ್ಲಿ ಬಿ.ಎಸ್‌ಸಿ. ಮಾಡಬೇಕೆಂಬ ಆಸೆಯಿದೆ. ಈ ಕೋರ್ಸ್‌ ಇರುವ ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ವಿವರ ನೀಡಿ. ಹಾಗೆಯೇ ಉದ್ಯೋಗಾವಕಾಶಗಳ ಬಗ್ಗೆಯೂ ಹೇಳಿ.

⇒ಹರ್ಷಿತಾ ಕೆ.ಆರ್‌., ಊರು ಬೇಡ

ಹರ್ಷಿತಾರವರೇ, ನೀವು ವಿಜ್ಞಾನದ ವಿದ್ಯಾರ್ಥಿಯಾಗಿ ಕೃಷಿ ಕ್ಷೇತ್ರದಲ್ಲಿ ಆಸಕ್ತರಾಗಿದ್ದರಿಂದ ಈ ಕೆಳಕಂಡ ಕೋರ್ಸುಗಳಿಗೆ ನೀವು ಪಿ.ಯು.ಸಿ ಮುಗಿಸಿದ ನಂತರ ಸೇರಬಹುದು:

ADVERTISEMENT

1. ಬಿ.ಎಸ್‌ಸಿ. ಅಗ್ರಿಕಲ್ಚರ್, ಸೇರಿಕಲ್ಚರ್ ಅಥವಾ ಹಾರ್ಟಿ ಕಲ್ಚರ್.

2. ಬಿ.ಎಸ್‌ಸಿ ಫಾರೆಸ್ಟ್ರಿ,

3. ಬಿ.ಟೆಕ್ ಬಯೋಟೆಕ್ನಾಲಜಿ,

4. ಬಿ.ಎಸ್‌ಸಿ (ಹಾನರ್ಸ್) ಕಮ್ಯೂನಿಟಿ ಡೆವಲಪ್ಮೆಂಟ್

5. ಬಿ.ಎಸ್‌ಸಿ ಮಾರ್ಕೆಟಿಂಗ್.

ಈ ಎಲ್ಲಾ ಕೋರ್ಸುಗಳಿಗೂ ಸಿಇಟಿ ಪರೀಕ್ಷೆ ಮೂಲಕವೇ ಪ್ರವೇಶ.

ಈ ಕೆಳಕಂಡ ಪ್ರತಿಷ್ಠಿತ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ನೀವು ಪ್ರಯತ್ನಿಸಬಹುದು.

1. ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ದೆಹಲಿ (ಪಿ.ಎ.ಆರ್.ಸಿ)

2. ಆಚಾರ್ಯ ಎನ್.ಜಿ.ರಂಗ ಅಗ್ರಿಕಲ್ಚರ್ ಯೂನಿವರ್ಸಿಟಿ (ಎ ಎನ್ ಜಿ ಆರ್ ಯು ಐ ) ಹೈದರಾಬಾದ್.

3. ಚೌಧರಿ ಚರಣ್ ಸಿಂಗ್ ಹರಿಯಾಣ ಅಗ್ರಿಕಲ್ಚರಲ್ ಯೂನಿವರ್ಸಿಟಿ (ಸಿ ಸಿ ಸ್ ಎಚ್ ಎ ಯು) ಹಿಸಾರ್

4. ತಮಿಳುನಾಡು ಅಗ್ರಿಕಲ್ಚರಲ್ ಯೂನಿವರ್ಸಿಟಿ (ಟಿ ಎನ್ ಎ ಯು ) ಕೊಯಮತ್ತೂರು

5. ಜಿ ಬಿ ಪಂಥ್ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ (ಜಿ ಬಿ ಪಿ ಯು ಎ & ಟಿ ) ಉತ್ತರಾಖಂಡ್

6. ಪಂಜಾಬ್ ಅಗ್ರಿಕಲ್ಚರಲ್ ಯೂನಿವರ್ಸಿಟಿ (ಪಿ ಎ ಯು ) ಲೂಧಿಯಾನ

ಬಿ.ಎಸ್‌ಸಿ ಅಗ್ರಿಕಲ್ಚರ್ ಮುಗಿಸಿದ ಮೇಲೆ ನಿಮಗೆ ಗೊಬ್ಬರ, ಬೀಜಗಳು, ಕ್ರಿಮಿನಾಶಕಗಳು ಮುಂತಾದವುಗಳನ್ನು ತಯಾರು ಮಾಡುವ ಮತ್ತು ಮಾರಾಟ ಮಾಡುವ ಕಂಪನಿಗಳಲ್ಲಿ ಉದ್ಯೋಗಾವಕಾಶಗಳಿರುತ್ತವೆ ಹಾಗೂ ಕೃಷಿ ಉಪಕರಣಗಳ ತಯಾರಿಕೆ ಕಂಪನಿಗಳಲ್ಲಿಯೂ ಅಗ್ರಿಕಲ್ಚರ್ ಪದವೀಧರರಿಗೆ ಒಳ್ಳೆಯ ಅವಕಾಶಗಳು ದೊರಕುತ್ತದೆ. ಕೃಷಿಕರಿಗೆ ಸಾಲ ನೀಡುವ ಕೆಲವು ಬ್ಯಾಂಕ್ ಗಳು ಹಾಗೂ ಆರ್ಥಿಕ ನೆರವು ನೀಡುವ ಸಂಸ್ಥೆಗಳಲ್ಲಿಯೂ ಉತ್ಪಾದನೆ, ಮಾರಾಟ ಮತ್ತು ವ್ಯವಹಾರ ಹಾಗೂ ಗುಣಮಟ್ಟ ನಿಯಂತ್ರಣ ವಿಭಾಗಗಳಲ್ಲಿ ನಿಮಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ಬಿ.ಎಸ್‌ಸಿ. ಆದ ನಂತರದಲ್ಲಿ ಎಂ.ಎಸ್‌ಸಿ. ಮುಗಿಸಿ ನೀವು ಸಂಶೋಧನಾ ಅಥವಾ ಶಿಕ್ಷಕಿ ಉದ್ಯೋಗಕ್ಕೂ ಸೇರಬಹುದು.

ನಾನು ಟೆಲೆಕಮ್ಯುನಿಕೇಶನ್‌ ಎಂಜಿನಿಯರಿಂಗ್‌ನಲ್ಲಿ 2018ರಲ್ಲಿ ಬಿ.ಇ. ಮಾಡಿದ್ದೇನೆ. ಎಂ.ಟೆಕ್‌. ಮಾಡಬೇಕು ಎಂದು ನಿರ್ಧರಿಸಿದ್ದು, ಯಾವ ವಿಭಾಗದಲ್ಲಿ ಮಾಡಬಹುದು ಹಾಗೂ ಹುಬ್ಬಳ್ಳಿಯಲ್ಲಿ ಯಾವ ಕಾಲೇಜು ಚೆನ್ನಾಗಿದೆ?

⇒ಸಚಿನ್‌ ರಜಪೂತ್‌, ಹಾವೇರಿ

ಸಚಿನ್ ಅವರೆ, ಬಿ.ಇ. ಆದ ನಂತರದಲ್ಲಿ ಮುಂದೆ ಏನು ಮಾಡಬೇಕೆಂಬ ಗೊಂದಲ ಜಾಸ್ತಿ ಇರುವುದರಿಂದ ನೀವು ನಿಮ್ಮ ಊರಿನಲ್ಲಿಯೇ ಒಂದು ಒಳ್ಳೆಯ ವೃತ್ತಿಪರ ಸಲಹೆಗಾರರನ್ನು ಭೇಟಿ ಮಾಡಿ ನಿಮ್ಮ ಆಸಕ್ತಿಗೆ, ಆಕಾಂಕ್ಷೆಗೆ ಸೂಕ್ತವಾದ ಕ್ಷೇತ್ರವನ್ನು ಅವರೊಡನೆ ಮಾತನಾಡಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು.

ನೀವು ಟೆಲಿಕಾಂ ಎಂಜಿನಿಯರ್ ಆಗಿರುವುದರಿಂದ ಸಾಫ್ಟ್‌ವೇರ್‌ ಡೆವಲೆಪ್‌ಮೆಂಟ್‌, ಹಾರ್ಡ್‌ವೇರ್‌ ಡೆವಲಪ್‌ಮೆಂಟ್ ಕಂಪನಿಗಳಲ್ಲಿ ಅದರಲ್ಲೂ ಟೆಲಿಕಮ್ಯುನಿಕೇಷನ್ ಗೆ ಸಂಬಂಧಪಟ್ಟಂತಹ ಕಂಪನಿಗಳಲ್ಲಿ ಉದ್ಯೋಗ ಅವಕಾಶ ಪಡೆಯಬಹುದು ಅಥವಾ ಅದೇ ಕ್ಷೇತ್ರದಲ್ಲಿ ಸರ್ವಿಸ್ ಮತ್ತು ಮೆಂಟೇನೆನ್ಸ್ ವಿಭಾಗದಲ್ಲಿ ಕೆಲಸ ಮಾಡಿ ನಿಮ್ಮ ಕಾರ್ಯ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದು.

ನಿಮಗೆ ಎಂ.ಟೆಕ್ ಮುಂದುವರೆಸುವ ಆಸಕ್ತಿ ಇದ್ದಲ್ಲಿ ಈ ಕೆಳಕಂಡ ಎಂ.ಟೆಕ್ ವಿಷಯಗಳ ಸಿಲಬಸ್‌ಗಳನ್ನೂ ಪರಿಗಣಿಸಿ ನಿಮಗೆ ಆಸಕ್ತಿ ಇರುವುದನ್ನು ಆಯ್ಕೆ ಮಾಡಿಕೊಳ್ಳಿ.

1 ಡಿಜಿಟಲ್ ಕಮ್ಯುನಿಕೇಷನ್ ಸಿಸ್ಟಮ್.

2 ಟೆಲಿ ಕಮ್ಯುನಿಕೇಷನ್ ನೆಟ್‌ವರ್ಕ್‌

3. ಕಂಪ್ಯೂಟರ್ ನೆಟ್‌ವರ್ಕ್‌ ಅಂಡ್ ಇಂಟರ್ನೆಟ್ ವರ್ಕಿಂಗ್ಸ್.

4. ಇಂಟರ್ನೆಟ್ ಇನ್ಫ್ರಾಸ್ಟ್ರಕ್ಚರ್.

5. ಆಪ್ಟಿಕಲ್ ಕಮ್ಯುನಿಕೇಷನ್ ಸಿಸ್ಟಮ್.

6. ವಯರ್ಲೆಸ್ ಕಮ್ಯುನಿಕೇಷನ್ ಸಿಸ್ಟಮ್

ಎಂ.ಟೆಕ್ ಪದವೀಧರರಿಗೆ ಸೂಕ್ತ ಪ್ಲೇಸ್‌ಮೆಂಟ್ ಅನುಕೂಲ ಮಾಡಿ ಕೊಡುವ ಕಾಲೇಜುಗಳ ಬಗ್ಗೆ ವಿಚಾರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.