ADVERTISEMENT

ಬಿ. ಫಾರ್ಮಾದವರಿಗೆ ಉದ್ಯೋಗಾವಕಾಶಗಳೇನು?

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 19:46 IST
Last Updated 14 ಅಕ್ಟೋಬರ್ 2018, 19:46 IST

1. ನನಗೆ ಬಿ. ಫಾರ್ಮಾ ಮಾಡಲು ಇಷ್ಟ. ನಾನು ಪಿ.ಯು.ಸಿ.ಯಲ್ಲಿ 86 ಅಂಕ ಗಳಿಸಿದ್ದೇನೆ. ಇದರಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

- ತೇಜಸ್ವಿನಿ, ಊರು ಬೇಡ

ಹೆಲ್ತ್‌ಕೇರ್‌ ಈಗ ಬಹಳ ಪ್ರಾಮುಖ್ಯವನ್ನು ಪಡೆಯುತ್ತಿದೆ. ಭಾರತದಲ್ಲಿ ಡ್ರಗ್ ಮ್ಯಾನುಫ್ಯಾಕ್ಚರಿಂಗ್‌ ಕ್ಲಿನಿಕಲ್ ರಿಸರ್ಚ್ ಗ್ಲೋಬಲ್ ಹೆಲ್ತ್‌ಕೇರ್‌, ಟೆಲಿಮೆಡಿಸಿನ್ – ಈ ರೀತಿಯ ವಿಭಿನ್ನ ಮಾದರಿಯ ಮಾರ್ಗಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಂಡುಬರುತ್ತಿದೆ. US FDA ಒಪ್ಪಿರುವಸುಮಾರು 74 ಮ್ಯಾನುಫ್ಯಾಕ್ಚರಿಂಗ್‌ ಮತ್ತು ರಿಸರ್ಚ್ ಯೂನಿಟ್‌ಗಳು ಇವೆ. ಫಾರ್ಮಸಿಯ ನೇರ ಸಂಬಂಧ ಆರೋಗ್ಯ ಮತ್ತು ವೈದ್ಯಕೀಯ. ಡ್ರಗ್ ಮ್ಯಾನುಫ್ಯಾಕ್ಚರಿಂಗ್‌, ಮಾರ್ಕೆಟಿಂಗ್‌ಗೆ ಕೂಡ ಈ ಕ್ಷೇತ್ರದ ಪರಿಣತರು ಬೇಕಾಗುತ್ತಾರೆ. ರಿಸರ್ಚ್ ಅಂಡ್‌ ಡveಲಂಪ್‌ಮೆಂಟ್‌(R& D)ನಲ್ಲಿ ಕೂಡ ಅವಕಾಶಗಳಿವೆ. ನ್ಯಾಷನಲ್ ಲ್ಯಾಬೊರೇಟರಿಗಳಲ್ಲೂ ಉದ್ಯೋಗಾವಕಾಶಗಳಿವೆ.ಈ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌.ಡಿ., ಎಂ.ಬಿ.ಎ.ಗಳನ್ನು ಮಾಡಬಹುದು. ಪ್ರವೇಶ ಪರೀಕ್ಷೆಗಳು ಬೇರೆ ಬೇರೆ.

ADVERTISEMENT

1. Birla Institute of Science and Technology Pilani (BITS Pilani)

Entrance test: BITSAT

web: www.bits-pilani.ac.in

2. Indian Institute of Technology, Banaras Hindu University (BHU)

Entrance Test: JEE (Advanced)

www.old.iitbhu.ac.in

3. Indian Institute of Technology, Powai, Bombay

Entrance Exam: JEE (advanced)

www.iitb.ac.in

Karnataka Examination Authority (KAE) ಇವರು ಬಿ. ಫಾರ್ಮಾ ಕೋರ್ಸ್‌ಗೆ KCET ಪರೀಕ್ಷೆಯನ್ನು ನಡೆಸುತ್ತಾರೆ. ಕೆ.ಇ.ಎ.ಗೆ ನೋಂದಾಯಿಸಿ ಕೊಂಡಿರುವ ಕಾಲೇಜುಗಳಿಗೆ ಇದು ಎಂಟ್ರೆನ್ಸ್ ಪರೀಕ್ಷೆ. ಹೆಚ್ಚಿನ ವಿವರಗಳಿಗೆ www.Kea.kar.nic.in ಭೇಟಿ ನೀಡಿ.

ಉದ್ಯೋಗಾವಕಾಶಗಳು:

1. ರಿಜಿಸ್ಟರ್ ಫಾರ್‌ಮಸಿಸ್ಟ್

2. ಫಾರ್ಮಾ ಇಂಡಸ್ಟ್ರಿಗಳು

3. ಕ್ವಾಲಿಟಿ ಕಂಟ್ರೊಲ್ ಮತ್ತು ಕ್ವಾಲಿಟಿ ಆಶೂರೆನ್ಸ್

4. ಮಾರ್ಕೆಟಿಂಗ್

5. ಅನಲಿಸ್ಟಸ್

6. ಸರ್ಕಾರಿ ನೌಕರಿಗಳಿಗೆ ಪಬ್ಲಿಕ್‌ ಸರ್ವಿಸ್ ಕಮಿಷನ್ ಪರೀಕ್ಷೆಗಳು ಮೂಲಕ ಡ್ರಗ್ ಇನ್ಸ್‌ಪೆಕ್ಟರ್, ಕಂಟ್ರೋಲರ್ ಪದವಿಗಳಿಗೆ.

8. ಆಸ್ಪತ್ರೆಗಳಲ್ಲಿ

9. ಕಮ್ಯೂನಿಟಿ ಫಾರ್ಮಸಿಸ್ಟ್ ,ಇನ್ನೂ ಅನೇಕ....

ನಿಮ್ಮ ವಿದ್ಯಾರ್ಹತೆ ಹೆಚ್ಚಿದಲ್ಲಿ ಉದ್ಯೋಗಗಳಲ್ಲೂ ಉನ್ನತ ಹುದ್ದೆಗಳು ದೊರಕುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.