ADVERTISEMENT

12ನೇ ತರಗತಿ ಫಲಿತಾಂಶ ಶಾಲೆಗಳಿಗೆ ರವಾನೆ: ಸಿಬಿಎಸ್ಇ

ಪಿಟಿಐ
Published 19 ಮಾರ್ಚ್ 2022, 15:45 IST
Last Updated 19 ಮಾರ್ಚ್ 2022, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ(ಪಿಟಿಐ): ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) 12ನೇ ತರಗತಿಯ ಮೊದಲ ಹಂತದ ಪರೀಕ್ಷೆಯ ಫಲಿತಾಂಶವನ್ನು ಆಯಾ ಶಾಲೆಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ಆಂತರಿಕ ಮೌಲ್ಯ ಮಾಪನ ಮತ್ತು ಪ್ರಯೋಗಾಲಯದ ಅಂಕಗಳು ಶಾಲೆಗಳ ಬಳಿಯೇ ಇದೆ. ಲಿಖಿತ ಪರೀಕ್ಷೆಯ ಅಂಕಗಳನ್ನು ಕಳಿಸಿಕೊಡಲಾಗಿದೆ' ಎಂದರು.

ಸಿಬಿಎಸ್ಇಯ 12ನೇ ತರಗತಿಯ 2ನೇ ಹಂತದ ಪರೀಕ್ಷೆಯು ಏಪ್ರಿಲ್ 26ರಿಂದ ಆರಂಭವಾಗಲಿದೆ. ಮೊದಲ ಹಂತದ ಪರೀಕ್ಷೆಯು ಕಳೆದ ವರ್ಷದ ನವೆಂಬರ್ 30ರಿಂದ ಡಿಸೆಂಬರ್ 11ರವರೆಗೆ ನಡೆದಿತ್ತು. ಕೊರೊನಾ ನಿಯಂತ್ರಣದ ಭಾಗವಾಗಿ ಸಿಬಿಎಸ್ಇಯ ಪರೀಕ್ಷೆಗಳನ್ನು 2 ಹಂತಗಳಲ್ಲಿ ನಡೆಸುವುದಾಗಿ ಕಳೆದ ವರ್ಷ ಸಿಬಿಎಸ್ಇ ಮಂಡಳಿ ಘೋಷಣೆ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.