ADVERTISEMENT

ಜುಲೈ 1ರಿಂದ ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ

ಏಜೆನ್ಸೀಸ್
Published 8 ಮೇ 2020, 12:22 IST
Last Updated 8 ಮೇ 2020, 12:22 IST
ಸಿಬಿಎಸ್‌ಇ
ಸಿಬಿಎಸ್‌ಇ   

ನವದೆಹಲಿ: ಸಿಬಿಎಸ್‌ಇಯ 10 ಮತ್ತು 12ನೇ ತರಗತಿಗಳ ಬಾಕಿ ಉಳಿಸಿರುವ 29 ವಿಷಯಗಳ ಪರೀಕ್ಷೆಯನ್ನು ಜುಲೈನಲ್ಲಿ ನಡೆಸಲು ನಿರ್ಧರಿಸಿರುವುದಾಗಿ ಶುಕ್ರವಾರ ಪ್ರಕಟಿಸಲಾಗಿದೆ.

ಹತ್ತು ಮತ್ತು 12ನೇ ತರಗತಿಗಳ 29 ವಿಷಯಗಳ ಪರೀಕ್ಷೆಯನ್ನು ಕೋವಿಡ್‌–19 ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಜುಲೈ 1ರಿಂದ ಜುಲೈ 15ರ ವರೆಗೂ ಪರೀಕ್ಷೆ ನಡೆಸುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಸಚಿವ ಡಾ.ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಪ್ರಕಟಿಸಿದ್ದಾರೆ.

ಜೆಇಇ (ಮೇನ್ಸ್) ಪರೀಕ್ಷೆ ಜುಲೈ 18ರಿಂದ 23ರ ವರೆಗೂ ನಡೆಸುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗಾಗಲೇ ಪ್ರಕಟಿಸಿದೆ. ನೀಟ್‌ (NEET) ಪರೀಕ್ಷೆ ಜುಲೈ 26ರಂದು ನಿಗದಿಯಾಗಿದೆ. ಈ ಪ್ರವೇಶ ಪರೀಕ್ಷೆಗಳಿಗೂ ಮುನ್ನ ಬೋರ್ಡ್‌ ಪರೀಕ್ಷೆಗಳನ್ನು ಪೂರೈಸಲು ಕ್ರಮವಹಿಸಲಾಗಿದೆ.

ADVERTISEMENT

ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಅನುವಾಗುವ ನಿಟ್ಟಿನಲ್ಲಿ ಜುಲೈನಲ್ಲಿ ಬಾಕಿ ಇರುವ ವಿಷಯಗಳ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆ ನಡೆದಿರುವ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುವಂತೆ ಈ ಹಿಂದೆಯೇ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು ಈ ಸಂಬಂಧ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.