ADVERTISEMENT

ಡೆಹ್ರಾಡೂನ್‍ನ ‘ದಿ ಡೂನ್ ಸ್ಕೂಲ್‍’ ‘ಸಮ್ಮರ್@ಡೂನ್ ನಾಯಕತ್ವ ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:45 IST
Last Updated 4 ಏಪ್ರಿಲ್ 2019, 19:45 IST
school
school   

ಭಾರತದ ಮುಂಚೂಣಿ ಬೋರ್ಡಿಂಗ್‌ ಶಾಲೆ ‘ದಿ ಡೂನ್ ಸ್ಕೂಲ್’ ತನ್ನ ಆರನೇ ವಸತಿ ‘ಸಮ್ಮರ್@ಡೂನ್ ನಾಯಕತ್ವ ಕಾರ್ಯಕ್ರಮ’ವನ್ನು ಮೇ21 ರಿಂದ ಜೂನ್ 3ರವರೆಗೆ ಹಮ್ಮಿಕೊಳ್ಳಲಿದೆ.

ತಮ್ಮ ಸುತ್ತಲಿನ ಪ್ರಪಂಚದಲ್ಲಿ ಧನಾತ್ಮಕ ಪ್ರಭಾವವನ್ನು ಬೀರಲು ಉತ್ಸುಕರಿರುವ 9 ರಿಂದ 12 ಗ್ರೇಡ್‍ ನಲ್ಲಿರುವ ಎಲ್ಲಾ ಆಸಕ್ತ ಹುಡುಗಿಯರು ಮತ್ತು ಹುಡುಗರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ವರ್ಷದ ಕಾರ್ಯಕ್ರಮದ ಅರ್ಜಿಗಳಿಗೆ ಏಪ್ರಿಲ್ 30 ಕೊನೆಯ ದಿನಾಂಕ.

ಕ್ರಿಯಾಶೀಲತೆ ಮತ್ತು ಚಿಂತನೆಯನ್ನು ಪ್ರಚೋದಿಸುವ ಕಾರ್ಯಕ್ರಮವು ನಾಯಕತ್ವದ ಅಧ್ಯಯನ, ಚಿಂತನೆಯ ವಿನ್ಯಾಸ, ಸೃಜನಾತ್ಮಕ ಅನುಭವದ ಕಲಿಕೆ, ಪ್ರೇರಕ ಉಪನ್ಯಾಸಗಳು, ಹೊರಾಂಗಣ ಸಾಹಸಗಳು, ಸ್ವಯಂ-ಪ್ರತಿಫಲನ ಮತ್ತು ಸಮೂಹ ಚರ್ಚೆಗಳನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳಿಗೆ ಅನೇಕ ವಿಷಯಗಳಲ್ಲಿ ತಮ್ಮ ಆಸಕ್ತಿಯ ಹರವನ್ನು ವಿಸ್ತರಿಸಿಕೊಳ್ಳಲು ಹಾಗೂ‌ ಇತಿಹಾಸ, ಭೂಗೋಳ ಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದ ಕನ್ನಡಿಯ ಮೂಲಕ ಕಲಿಯಲು ಈ ಕಾರ್ಯಕ್ರಮವು ಅನುವು ಮಾಡಿಕೊಡುತ್ತದೆ.

ADVERTISEMENT

ಶಾಲೆಯ ಅನುಭವಿ ಸಿಬ್ಬಂದಿ, ಡೂನ್ ಸ್ಕೂಲ್ ಹಳೆಯ ವಿದ್ಯಾರ್ಥಿಗಳು, ವಿಶೇಷ ಅತಿಥಿಗಳು ಹಾಗೂ ಆಹ್ವಾನಿತರು ಉಪನ್ಯಾಸ ನೀಡಲಿದ್ದಾರೆ. ‘ಡೂನ್ ಸ್ಕೂಲ್ ಅನೇಕ ವರ್ಷಗಳಿಂದ ನವೀನ ಚಿಂತನೆ ಮತ್ತು ನಾಯಕತ್ವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.ಬೇಸಿಗೆಯಲ್ಲಿ ವಿಶೇಷವಾದ ಅನುಭವವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ವಿದ್ಯಾರ್ಥಿಗಳ ಕ್ರಿಯೆ, ನಾಯಕತ್ವ, ಸೇವೆ ಮತ್ತು ನೆರವೇರಿಕೆಯ ಪ್ರಯಾಣದಲ್ಲಿ ನೆರವಾಗುತ್ತದೆ.ಎರಡು ವಾರಗಳ ಕಾರ್ಯಕ್ರಮವು ಸಾಹಸಮಯವಾಗಲಿದೆ’ ಎಂದು ಮುಖ್ಯೋಪಾಧ್ಯಾಯ ಮ್ಯಾಥ್ಯೂ ರಾಗ್ಗೆಟ್ ಹೇಳುತ್ತಾರೆ.

ಹೆಚ್ಚಿನ ಮಾಹಿತಿಗೆ: ಇ–ಮೇಲ್‌ MsAbia Qezilbash-summer.doon@doonschool.com ಅಥವಾ ದೂರವಾಣಿ +91-(0)135-2526516 ಮತ್ತು www.doonschool.com/summer.doon/leadership ವೆಬ್‌ಸೈಟ್‌ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.