ADVERTISEMENT

ಫೆಡರಲ್ ಬ್ಯಾಂಕ್‌ ವಿದ್ಯಾರ್ಥಿ ವೇತನ: ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2025, 9:15 IST
Last Updated 7 ನವೆಂಬರ್ 2025, 9:15 IST
<div class="paragraphs"><p>ಚಿತ್ರ: ಪ್ರಜಾವಾಣಿ</p></div>
   

ಚಿತ್ರ: ಪ್ರಜಾವಾಣಿ

ಫೆಡರಲ್ ಬ್ಯಾಂಕ್ 2025–26ನೇ ಶೈಕ್ಷಣಿಕ ವರ್ಷಕ್ಕೆ ತನ್ನ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನ ಎಂಬ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿದೆ. ಈ ವಿದ್ಯಾರ್ಥಿ ವೇತನವು ವೃತ್ತಿಪರ ಮತ್ತು ಉನ್ನತ ಶಿಕ್ಷಣ ಮುಂದುವರಿಸುತ್ತಿರುವ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಬ್ಯಾಂಕ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಿಗೆ ಸೇರಿದ ವಿದ್ಯಾರ್ಥಿಗಳು ಡಿಸೆಂಬರ್‌ 31ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾರು ಅರ್ಜಿ ಸಲ್ಲಿಸಬಹುದು. ಅರ್ಹತೆಗಳೇನು ಎಂಬ ಮಾಹಿತಿ ಇಲ್ಲಿದೆ. 

ADVERTISEMENT

ಯಾರು ಅರ್ಹರು?

  • ಎಂಬಿಬಿಎಸ್‌, ಬಿಡಿಎಸ್, ಬಿವಿಎಸ್‌ಸಿ, ಬಿ.ಇ, ಬಿ.ಟೆಕ್, ಬಿಎಆರ್‌ಸಿಹೆಚ್‌, ಬಿ.ಎಸ್ಸಿ ನರ್ಸಿಂಗ್, ಬಿ.ಎಸ್ಸಿ ಕೃಷಿ, ಮತ್ತು ಎಂಬಿಎ, ಪಿಜಿಡಿಎಂನ ಪೂರ್ಣಕಾಲಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

  • ಹುತಾತ್ಮ ಹಾಗೂ ಸಶಸ್ತ್ರ ಪಡೆಗಳ ಸಿಬ್ಬಂದಿಯ ಮಕ್ಕಳು, ವಾಕ್, ದೃಷ್ಟಿ ಹಾಗೂ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ಕಲ್ಪಿಸಲಾಗಿದೆ.

ಸಿಗುವ ಹಣ ಎಷ್ಟು?

  • ವಾರ್ಷಿಕ ₹1 ಲಕ್ಷ ಸಿಗಲಿದೆ. 

  • ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯದಲ್ಲಿ ಒಂದು ಪಿಸಿ, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗೆ ಅರ್ಹರಾಗಿರುತ್ತಾರೆ.

  • ಲ್ಯಾಪ್‌ಟಾಪ್‌ಗೆ ₹40,000 ಮತ್ತು ಟ್ಯಾಬ್ಲೆಟ್‌ಗೆ ₹30,000 ವರೆಗೆ ಹಣ ಪಾವತಿಸಲಾಗುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ? 

ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ಸ್ಕಾಲರ್‌ಶಿಪ್‌ಗೆ ಬ್ಯಾಂಕ್‌ನ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. 

https://scholarships.federalbank.co.in:6443/fedschlrshipportal/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.