ADVERTISEMENT

ಪಾಶ್ಚಾತ್ಯ ತತ್ವಶಾಸ್ತ್ರದ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 19:45 IST
Last Updated 25 ಡಿಸೆಂಬರ್ 2018, 19:45 IST
a
a   

ತತ್ವಶಾಸ್ತ್ರ ಎನ್ನುವುದು ಎಲ್ಲ ವಿಷಯಗಳನ್ನು ಅರ್ಥಮಾಡಿಕೊಳ್ಳಲೂ ಬೇಕಾದಂಥ ಅರಿವಿನ ಸಲಕರಣೆ. ಒಂದು ವಿಷಯದ ಆಳಕ್ಕೆ ಹೋದಂತೆಲ್ಲ ತತ್ವಶಾಸ್ತ್ರದ ಅನಿವಾರ್ಯತೆ ಹೆಚ್ಚುತ್ತಹೋಗುತ್ತದೆ.

ಪಾಶ್ಚಾತ್ಯ ತತ್ವಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಲ್ಲಿಯ ತತ್ವಶಾಸ್ತ್ರಕ್ಕೂ ವಿಜ್ಞಾನದ ಬೆಳವಣಿಗೆಗೂ ನೇರವಾದ ಸಂಬಂಧವಿದೆ. ಹೀಗಾಗಿ ವಿಜ್ಞಾನದ ಇತಿಹಾಸವನ್ನು ತಿಳಿಯಬೇಕಾದರೆ ಪಾಶ್ಚಾತ್ಯ ತತ್ವಶಾಸ್ತ್ರವನ್ನು ತಿಳಿದುಕೊಳ್ಳಬೇಕಾಗುತ್ತದೆ. ಆದರೆಪಾಶ್ಚಾತ್ಯ ತತ್ವಶಾಸ್ತ್ರವನ್ನು ತಿಳಿದುಕೊಳ್ಳುವುದು ಸುಲಭವೇನಲ್ಲ.

ಏಕೆಂದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಆ ಪರಂಪರೆಯಲ್ಲಿ ನೂರಾರು ತತ್ವಜ್ಞಾನಿಗಳು ಆಗಿಹೋಗಿದ್ದಾರೆ; ಅವರ ಹತ್ತಾರು ಸಿದ್ಧಾಂತಗಳು ಅಲ್ಲಿಯ ಜನರ ಮೇಲೆ ಪ್ರಭಾವವನ್ನು ಬೀರಿವೆ. ಗ್ರೀಕ್‌ ತತ್ವಜ್ಞಾನದಿಂದ ಮೊದಲುಗೊಂಡು ಇಂದಿನವರೆಗೂ ಅವು ಬೇರೆ ಬೇರೆ ರೂಪಗಳಲ್ಲಿ, ನೆಲೆಗಳಲ್ಲಿ ಪ್ರಕಟವಾಗಿವೆ.

ADVERTISEMENT

ಹೀಗಿರುವಾಗ ಒಟ್ಟುಪಾಶ್ಚಾತ್ಯ ತತ್ವಶಾಸ್ತ್ರವನ್ನು ಸುಲಭವಾಗಿ ತಿಳಿದುಕೊಳ್ಳುವುದು ಹೇಗೆ – ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಉತ್ತರವಾಗಿ ಮಾರ್ಕಸ್‌ ವೀಕ್ಸ್‌ ಅವರ ‘ಗೆಟ್‌ ಸ್ಮಾರ್ಟ್‌: ಫಿಲಾಸಫಿ’ ನಮ್ಮ ನೆರವಿಗೆ ಬರುತ್ತದೆ.ಪಾಶ್ಚಾತ್ಯ ತತ್ವಶಾಸ್ತ್ರವನ್ನು ಸುಲಭವಾಗಿ ತಿಳಿದುಕೊಳ್ಳಲು ಈ ಕೃತಿ ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.