ADVERTISEMENT

ವಿದ್ಯಾರ್ಥಿ ವೇತನ| ಎಚ್‌ಡಿಎಫ್‌ಸಿ ಬಡ್ತೇ ಕದಮ್ ಸ್ಕಾಲರ್‌ಶಿಪ್ 2022-23

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 19:30 IST
Last Updated 13 ನವೆಂಬರ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶೀರ್ಷಿಕೆ: ಎಚ್‌ಡಿಎಫ್‌ಸಿ ಬಡ್ತೇ ಕದಮ್ ಸ್ಕಾಲರ್‌ಶಿಪ್ 2022-23

ವಿವರ: ಎಚ್‌‌‌‌‌ಡಿಎಫ್‌‌‌‌‌‌‌‌‍ಸಿ ಬಡ್ತೇ ಕದಮ್ ವಿದ್ಯಾರ್ಥಿವೇತನವು ಹಿಂದುಳಿದ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಪೂರ್ಣಗೊಳಿಸಲು ಸಹಾಯ ಮಾಡಲು ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. 11-12 ನೇ ತರಗತಿ, ಪದವಿಪೂರ್ವ ಕೋರ್ಸ್‌ಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.

ಅರ್ಹತೆ

ADVERTISEMENT

* ಪ್ರಸ್ತುತ 11 ರಿಂದ ಪದವಿಪೂರ್ವ (ಸಾಮಾನ್ಯ ಮತ್ತು ವೃತ್ತಿಪರ) ತರಗತಿಯಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು.

* 11-12 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ, ಪದವಿಪೂರ್ವ ಕೋರ್ಸ್‌ಗಳು, ಡಿಪ್ಲೊಮಾ/ಐಟಿಐ ಮತ್ತು ವೃತ್ತಿಪರ ಕೋರ್ಸ್‌ಗಳನ್ನುಅನುಸರಿಸುತ್ತಿರುವ ವಿಕಲಾಂಗ ವಿದ್ಯಾರ್ಥಿಗಳು.

* ಮಾನ್ಯತೆ ಪಡೆದ ಕೋಚಿಂಗ್ ಸಂಸ್ಥೆಯಲ್ಲಿ ನೀಟ್, ಜೆಇಇ, ಕ್ಲಾಟ್ ಮತ್ತು ನಿಫ್ಟ್‌‌‌‍ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು.

* ಹಿಂದಿನ ತರಗತಿ ಅಥವಾ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ 60% ಅಂಕಗಳನ್ನು (ಕೋಚಿಂಗ್ ವಿದ್ಯಾರ್ಥಿಗಳಿಗೆ 80%) ಪಡೆದಿರಬೇಕು (ಗಮನಿಸಿ: ವಿಕಲಾಂಗ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕಗಳ ಅಗತ್ಯವಿಲ್ಲ).

* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ರೂ. 6,00,000 ಕ್ಕಿಂತ ಕಡಿಮೆಯಿರಬೇಕು. (ಅಂಗವಿಕಲ ವಿದ್ಯಾರ್ಥಿಗಳಿಗೆ, ರೂ.8,00,000 ಕ್ಕಿಂತ ಕಡಿಮೆಯಿರಬೇಕು)
ಯಾವುದೇ ರೀತಿಯ ಬಿಕ್ಕಟ್ಟಿನ (ಒಂಟಿ ಪೋಷಕ, ಅನಾಥ, ಕುಟುಂಬದಲ್ಲಿ ಮಾರಣಾಂತಿಕ ಕಾಯಿಲೆ, ಇತ್ಯಾದಿ) ಸ್ಥಿತಿಯನ್ನು ಎದುರಿಸುತ್ತಿರುವ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಪರಿಗಣನೆಯನ್ನು ನೀಡಲಾಗುತ್ತದೆ.

ಆರ್ಥಿಕ ನೆರವು: ರೂ. 1,00,000ದ ವರೆಗೆ

ಅರ್ಜಿ ಸಲ್ಲಿಕೆಗೆ ಕೊನೆ ದಿನ: 30-11-2022

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/HTPF12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.