ADVERTISEMENT

ಅಣಕು ಪರೀಕ್ಷೆಗೆ ಮೊಬೈಲ್ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 19:30 IST
Last Updated 12 ಮಾರ್ಚ್ 2019, 19:30 IST
mock test
mock test   

ಜೆಇಇ ಮೇನ್‌ ಹಾಗೂ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಸರ್ಕಾರದ ಆದೇಶದಂತೆ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಜೆಇಇ ಹಾಗೂ ನೀಟ್ ಪರೀಕ್ಷೆ ಬರೆಯುವವರಿಗೆ ಸಹಾಯವಾಗಲೆಂದು ಮೊಬೈಲ್ ಆ್ಯಪ್‌ ಅನ್ನು ಬಿಡುಗಡೆಗೊಳಿಸಿದೆ. ಈ ಆ್ಯಪ್ ಮೂಲಕ ವಿದ್ಯಾರ್ಥಿಗಳು ಅಣಕು ಪರೀಕ್ಷೆ (ಮಾಕ್‌ ಟೆಸ್ಟ್‌ – mock test) ಗಳನ್ನು ಪ್ರಾಕ್ಟೀಸ್‌ ಮಾಡಬಹುದಾಗಿದೆ.

ಎನ್‌ಟಿಎ ಸರ್ಕಾರದಿಂದ ಹೊಸದಾಗಿ ರಚಿಸಲಾದ ಸಂಸ್ಥೆಯಾಗಿದ್ದು ಈ ಸಂಸ್ಥೆ ರಾಷ್ಟ್ರಮಟ್ಟದ ಪರೀಕ್ಷೆಗಳಾದ ನೀಟ್, ಜೆಇಇ, ಎನ್‌ಇಟಿ ಮುಂತಾದ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ.ಎನ್‌ಟಿಎ ಈಗಾಗಲೇ ಜನವರಿ 2019ರಲ್ಲಿ ಜೆಇಇ ಮೇನ್‌ ಹಾಗೂ ಕಳೆದ ಡಿಸೆಂಬರ್‌ನಲ್ಲಿ ಎನ್‌ಇಟಿ ಪರೀಕ್ಷೆಯನ್ನು ನಡೆಸಿದೆ.

ಜೆಇಇ ಮೇನ್ಸ್‌ನ ಎರಡನೇ ಹಂತದ ಪರೀಕ್ಷೆಯು ಏಪ್ರಿಲ್‌ನಲ್ಲಿ ನಡೆಯಲಿದ್ದು ಶೀಘ್ರವೇ ಇದರ ನೋಂದಣಿ ಬಗ್ಗೆ ಪ್ರಕಟಣೆಯನ್ನು ಹೊರಡಿಸಲಾಗುವುದು. ಎನ್‌ಟಿಎ ಸುಮಾರು 4,000ಕ್ಕೂ ಅಧಿಕ ಟೆಸ್ಟ್ ಪ್ರಾಕ್ಟೀಸ್ ಸೆಂಟರ್‌ಗಳ ಜೊತೆ ಸಂಪರ್ಕದಲ್ಲಿದೆ. ಕಂಪ್ಯೂಟರ್ ಆಧಾರಿತ ಪ‍ರೀಕ್ಷೆಗಳನ್ನು ಎದುರಿಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇದರಿಂದ ಸಹಾಯವಾಗಲಿದೆ.ದೇಶದಾದ್ಯಂತ ವಿದ್ಯಾರ್ಥಿಗಳು ಎನ್‌ಟಿಎ ವೆಬ್‌ಸೈಟ್‌ ಮೂಲಕ ಪರೀಕ್ಷೆಗಳಿಗೆ ರಿಜಿಸ್ಟರ್ ಮಾಡಿಕೊಳ್ಳಬಹುದು. ಈ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಉಚಿತವಾಗಿ ಪಡೆಯಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.