ADVERTISEMENT

ಸ್ಪರ್ಧಾ ವಾಣಿ: UPSC, KPSC EXAM; ಬಹುಆಯ್ಕೆಯ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 18:34 IST
Last Updated 11 ಡಿಸೆಂಬರ್ 2024, 18:34 IST
   

1. ರಾಣಿ ದುರ್ಗಾವತಿ ಅವರ ಕೆಳಗಿನ ಯಾವ ಸಾಮ್ರಾಜ್ಯದ ಆಳ್ವಿಕೆಯನ್ನು ನಡೆಸುತ್ತಿದ್ದರು?

ಎ. ಗುಪ್ತ ಸಾಮ್ರಾಜ್ಯ. ⇒ಬಿ. ಚೋಳ ಸಾಮ್ರಾಜ್ಯ.

ಸಿ. ಚೇರ ಸಾಮ್ರಾಜ್ಯ. ⇒ಡಿ. ಗಾಂಡ್ವನ ಸಾಮ್ರಾಜ್ಯ.

ADVERTISEMENT

ಉತ್ತರ : ಡಿ

2. ಕೆಳಗಿನ ಯಾವ ವಿಚಾರಗಳಲ್ಲಿ ಅಮೆರಿಕ ಭಾರತಕ್ಕೆ ವಿಶೇಷ ವಿನಾಯತಿಗಳನ್ನು ಕಲ್ಪಿಸಿದೆ?

1. ಪರಮಾಣು ಪ್ರಸರಣ ರಹಿತ ಒಪ್ಪಂದಕ್ಕೆ ಒತ್ತಡವನ್ನು ಹೇರಿರುವುದಿಲ್ಲ.

2. ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದಕ್ಕೂ ಕೂಡ ಯಾವುದೇ ಒತ್ತಡವನ್ನು ಹೇರಿರುವುದಿಲ್ಲ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ →→ಬಿ. 2 ಮಾತ್ರ

ಸಿ. 1 ಮತ್ತು 2 →ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ : ಡಿ

3. ಕೆಳಗಿನ ಯಾವ ಒಪ್ಪಂದದ ಅನ್ವಯ ಭಾರತ-ಅಮೆರಿಕ ಅಣ್ವಸ್ತ್ರ ಒಪ್ಪಂದ ಜಾರಿಗೆ ಬಂದಿತು?

ಎ. 1 2 3 ಒಪ್ಪಂದ. ⇒ಬಿ. 1 3 2 ಒಪ್ಪಂದ.

ಸಿ. 1 1 2 ಒಪ್ಪಂದ. ⇒ಡಿ. 2 3 4 ಒಪ್ಪಂದ.

ಉತ್ತರ : ಎ

4. ಗ್ರಾಮೋದ್ಯೋಗ ವಿಕಾಸ ಯೋಜನೆ ಕೆಳಗಿನ ಯಾವ ವಲಯಗಳಿಗೆ ಬೆಂಬಲವನ್ನು ಸೂಚಿಸುತ್ತಿದೆ?

1. ಕೈಯಿಂದ ತಯಾರಾಗಿರುವ ಕಾಗದದ ಗ್ರಾಮ ಕೈಗಾರಿಕೆಗಳು.

2. ಚರ್ಮದ ಉದ್ದಿಮೆಯಲ್ಲಿ ತೊಡಗಿಕೊಂಡಿರುವ ಗ್ರಾಮ ಕೈಗಾರಿಕೆಗಳು.

3. ಕೃಷಿ ಉತ್ಪನ್ನ ಆಧಾರಿತ ಗ್ರಾಮ ಕೈಗಾರಿಕೆಗಳು.

4. ಆಹಾರ ಸಂಸ್ಕರಣಾ ವಲಯದಲ್ಲಿ ತೊಡಗಿಕೊಂಡಿರುವ ಗ್ರಾಮ ಕೈಗಾರಿಕೆಗಳು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ →⇒ಬಿ. 1, 2, 3 ಮತ್ತು 4

ಸಿ. 2 ಮತ್ತು 4 ⇒ಡಿ. 3 ಮತ್ತು 4

ಉತ್ತರ : ಬಿ

5. ಇತ್ತೀಚೆಗೆ ಕೇಂದ್ರದ ಯಾವ ಸಚಿವಾಲಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ನಿಶಾಮಕ ಸೇವೆಗಳ ಆಧುನಿಕರಣಕ್ಕೆ ಮುಂದಾಗಿದೆ?

ಎ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ.

ಬಿ. ಕೇಂದ್ರ ಸಂಪುಟ ಕಾರ್ಯಾಲಯ.

ಸಿ. ಪ್ರಧಾನ ಮಂತ್ರಿ ಕಾರ್ಯಾಲಯ.

ಬಿ. ಕೇಂದ್ರ ಬಂಧೀಖಾನೆ ಸಚಿವಾಲಯ.

ಉತ್ತರ : ಎ

6. ಕಾಕತೀಯ ಯೋಜನೆಯನ್ನು ಕೆಳಗಿನ ಯಾವ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ?

ಎ. ಒಡಿಶಾ. ಬಿ. ಆಂಧ್ರಪ್ರದೇಶ.

ಸಿ. ತೆಲಂಗಾಣ. ಡಿ. ತಮಿಳುನಾಡು.

ಉತ್ತರ : ಸಿ

7. ಕೆಳಗಿನ ಯಾವ ರಾಜ್ಯಗಳು ಮೊಟ್ಟಮೊದಲ ಜಲಸಂಪನ್ಮೂಲಗಳ ಮುಂಗಡಪತ್ರವನ್ನು ಜಾರಿಗೆ ತಂದಿರುವ ಕೀರ್ತಿಯನ್ನು ಹೊಂದಿದೆ?

ಎ. ಕೇರಳ.→→ಬಿ. ಉತ್ತರ ಪ್ರದೇಶ.

ಸಿ. ಮಧ್ಯಪ್ರದೇಶ.→ಡಿ. ರಾಜಸ್ಥಾನ್.

ಉತ್ತರ : ಎ

8. ಕೆಳಗಿನ ಯಾವ ಸ್ಥಳಗಳನ್ನು ಮಾನವ ವಸಾಹತುಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ?

1. ದೆಬ್ರಿ ಘರ್‌ ವನ್ಯಜೀವಿಧಾಮ.

2. ಚಿಲ್ಕಾ ಸರೋವರ.

3. ನಾಗರ ಹೊಳೆ ಅಭಯಾರಣ್ಯ.

4. ಮುಳ್ಳಯ್ಯನಗಿರಿ ಬೆಟ್ಟಗಳು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ.1 ಮಾತ್ರ →→ಬಿ. 2 ಮಾತ್ರ

ಸಿ. 1 ಮತ್ತು2 →ಡಿ. 2 ಮತ್ತು3

ಉತ್ತರ : ಸಿ

9. ಭಾರತೀಯ ಪ್ರಾಕೃತಿಕ ಕೃಷಿ ಪದ್ಧತಿ ಯೋಜನೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಭಾರತೀಯ ಪ್ರಾಕೃತಿಕ ಕೃಷಿ ಪದ್ಧತಿ, ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

2.ಯೋಜನೆಯನ್ನು ಆರು ವರ್ಷಗಳ ಅವಧಿಗೆ ಅನುಷ್ಠಾನಗೊಳಿಸಲಾಗುತ್ತದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ →→ಬಿ. 2 ಮಾತ್ರ

ಸಿ. 1 ಮತ್ತು 2 →ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ : ಸಿ

10. ಸಹಿ ಫಸಲ್ ಅಭಿಯಾನವನ್ನು ಕೆಳಗಿನ ಯಾವ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ?

ಎ. ಜಲ ಸಂಪನ್ಮೂಲಗಳ ಕೊರತೆ ಇರುವ ಸ್ಥಳಗಳು.

ಬಿ. ನೀರಾವರಿ ಸವಲತ್ತುಗಳನ್ನು ಹೊಂದಿರುವ ಪ್ರದೇಶಗಳು.

ಸಿ. ಅರಣ್ಯ ಪ್ರದೇಶಗಳು.

ಡಿ. ಮರುಭೂಮಿಕರಣ ಹೆಚ್ಚಾಗುತ್ತಿರುವ ಪ್ರದೇಶಗಳು.

ಉತ್ತರ : ಎ

11. ಭಾರತೀಯ ಆಹಾರ ನಿಗಮವನ್ನು ಕೆಳಗಿನ ಯಾವ ಕಾಯ್ದೆಗಳಿಗೆ ಅನುಗುಣವಾಗಿ ಸ್ಥಾಪಿಸಲಾಯಿತು?

ಎ. ಭಾರತೀಯ ಆಹಾರ ನಿಗಮ ಕಾಯ್ದೆ-1965.

ಬಿ. ಭಾರತೀಯ ಆಹಾರ ನಿಗಮ
ಕಾಯ್ದೆ-1970.

ಸಿ. ಭಾರತೀಯ ಆಹಾರ ನಿಗಮ ಕಾಯ್ದೆ-1975.

ಡಿ. ಭಾರತೀಯ ಆಹಾರ ನಿಗಮ ಮತ್ತು ಪೂರೈಕೆ ಕಾಯ್ದೆ-1990.

ಉತ್ತರ : ಎ

12. ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಕೆಳಗಿನ ಯಾವ ಉಪಯುಕ್ತತೆಗಳು ಉಂಟಾಗುತ್ತದೆ?

1. ಆಹಾರ ಧಾನ್ಯಗಳ ಸೂಕ್ತ ಸದ್ಬಳಕೆ.

2. ಸರ್ಕಾರಕ್ಕೆ ಆದಾಯದ ಉತ್ಪತ್ತಿ.

3. ಆಹಾರ ಧಾನ್ಯಗಳ ದರಗಳ ಸ್ಥಿರತೆಯನ್ನು ಕಾಯ್ದುಕೊಳ್ಳಲು.

4. ಆಹಾರ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅನುಕೂಲಕರವಾಗಿರುತ್ತದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ.1 ಮಾತ್ರ ಬಿ. 2 ಮಾತ್ರ

ಸಿ. 1, 2, 3 ಮತ್ತು 4 ಡಿ. 3 ಮತ್ತು 4

ಉತ್ತರ : ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.